ಬಿಲ್ಲವರು ಮತ್ತು ಬಾಸೆಲ್ ಮಿಷನ್

Author : ರಮಾನಾಥ್‌ ಕೋಟೆಕಾರ್

Pages 112

₹ 80.00




Published by: ಸಾಯಿ ಸುಂದರಿ ಸೇವಾ ಟ್ರಸ್ಟ್
Phone: 9449449405

Synopsys

“ಬಿಲ್ಲವರು ಮತ್ತು ಬಾಸೆಲ್ ಮಿಷನ್" ಕರಾವಳಿಯ ಮತಾಂತರ ಮೂಲಗಳನ್ನು ಹುಡುಕುತ್ತಾ ಹೋಗುವ, ಆ ಮೂಲಕ ಭೂತ ಮತ್ತು ವರ್ತಮಾನವನ್ನು ಮುಖಾಮುಖಿಯಾಗಿಸುವ, ವರ್ತಮಾನದ ಧರ್ಮ, ಜಾತಿ ರಾಜಕಾರಣವನ್ನು ವಿಶ್ಲೇಷಿಸುವ ಕುತೂಹಲಕಾರಿ ಕೃತಿ.

ಇದು ಕರಾವಳಿಯ ಮತಾಂತರ ಹಿನ್ನೆಲೆ ಮುನ್ನೆಲೆಯನ್ನು ಚರ್ಚಿಸುವ ಮಹತ್ವದ ಪುಟ್ಟ ಸಂಶೋಧನಾ ಕೃತಿ. ಸಮಾಜದಲ್ಲಿ ಅಸ್ಪಶ್ಯರಂತೆ ಬದುಕುತ್ತಿದ್ದ ಬಿಲ್ಲವರು 1834ರಲ್ಲಿ ಕ್ರೈಸ್ತ ಮಿಶನರಿಗಳ ಪ್ರಭಾವಕ್ಕೆ ಸಿಲುಕಿ ಪ್ರೊಟೆಸ್ಟಂಟ್ ಧರ್ಮವನ್ನು ಸ್ವೀಕರಿಸಿದ ಇತಿಹಾಸವನ್ನು ಇಲ್ಲಿ ಬರೆಯಲಾಗಿದೆ. ಅಂದು ಪ್ರೊಟೆಸ್ಟಂಟ್ ಕ್ರೈಸ್ತರಾಗಿ ಪರಿವರ್ತನೆ ಹೊಂದಿದವರ ಐದನೆ ತಲೆಮಾರಿನವರಾದ ಇಂದಿನ ಪೀಳಿಗೆಯವರಿಗೆ ತಮ್ಮ ಹಿನ್ನೆಲೆ, ಗತ ಇತಿಹಾಸ ಗೊತ್ತಿಲ್ಲ. ಅದೇ ರೀತಿ ಇಂದಿನ ಬಿಲ್ಲವ ಜನಾಂಗದವರಿಗೆ ತಮ್ಮ ಪೂರ್ವಿಕರಲ್ಲಿ ಉಂಟಾದ ಪರಿವರ್ತನೆಯ ಹಿನ್ನೆಲೆ ತಿಳಿದಿಲ್ಲ.

ಈ ಎರಡೂ ಬಗೆಯ ತಲೆಮಾರುಗಳನ್ನು ಬೆಸೆಯುವ ಸೇತುವೆಯಂತೆ ಈ ಸಂಶೋಧನಾ ಕೃತಿ ಕೆಲಸ ಮಾಡುತ್ತದೆ. ಬಿಲ್ಲವರ ಅಂದಿನ ಸ್ಥಿತಿಗತಿ, ಮತಾಂತರದ ಕಾರಣಗಳು ಮತ್ತು ವರ್ತಮಾನದಲ್ಲಿ ಅದರ ಪರಿಣಾಮಗಳನ್ನು ಸೂಕ್ಷ್ಮವಾಗಿ ಈ ಕೃತಿ ಹೇಳುತ್ತದೆ. 19ನೆ ಶತಮಾನದಲ್ಲಿ ಬಿಲ್ಲವರ ರೀತಿ ರಿವಾಜುಗಳು, ಸಮಾಜದಲ್ಲಿ ಅವರ ಸ್ಥಾನಮಾನಗಳು ಹೇಗಿತ್ತು ಎನ್ನುವುದನ್ನು ಮೊದಲ ಭಾಗದಲ್ಲಿ ವಿವರಿಸಲಾಗುತ್ತದೆ. ಹಾಗೆಯೇ ಕ್ರೈಸ್ತ ಧರ್ಮ ಬಿಲ್ಲವರನ್ನು ಸೆಳೆಯಲು ಕಾರಣವಾದ ಅಂಶಗಳನ್ನೂ ವಿವರಿಸಲಾಗಿದೆ.

About the Author

ರಮಾನಾಥ್‌ ಕೋಟೆಕಾರ್

 ವಿದ್ವಾನ್ ರಮಾನಾಥ ಕೋಟೆಕಾರ್ ಅವರು ಕನ್ನಡ ಎಂ.ಎ. ಮತ್ತು ಮತ್ತು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ ಪಡೆದ ವಿದ್ವಾಂಸರು. ಅವರು ಸ್ವಂತ ಉದ್ಯಮ ನಡೆಸುತ್ತಿರುವ ಸ್ವಾವಲಂಬಿ. ಅವರ ಪ್ರವೃತ್ತಿ ಸಾಹಿತ್ಯ ಮತ್ತು ಸಂಶೋಧನೆ. 'ತುಳುನಾಡಿನ ಬಿಲ್ಲವರು' ಮತ್ತು 'ಬಿಲ್ಲವರು ಮತ್ತು ಬಾಸೆಲ್ ಮಿಷನ್' ಎಂಬ ಮಹತ್ವದ ಸಂಶೋಧನಾತ್ಮಕ ಕೃತಿ ಸಹಿತ ಹಲವು ಉಪಯುಕ್ತ ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ತುಳುನಾಡಿನ ಭೂತಾರಾಧನೆ, ಚರಿತ್ರೆ, ಸಂಪ್ರದಾಯ, ಗುತ್ತು ಮನೆತನಗಳು, ಬಿಲ್ಲವ ಸಮಾಜ ಇತ್ಯಾದಿ ಹಲವಾರು ವಿಷಯಗಳ ಬಗ್ಗೆ ಆಸಕ್ತಿಯಿರುವ ರಮಾನಾಥ್ ಕೋಟೆಕಾರ್ ಅವುಗಳ ಅಧ್ಯಯನಕ್ಕಾಗಿ ಕ್ಷೇತ್ರಕಾರ್ಯ ಹಾಗೂ ಗ್ರಂಥಾಧ್ಯಯನ ...

READ MORE

Related Books