ಸಂಕೇತಿ ಶತಮಾನದ ಪತ್ರಗಳು (1891-2003)

Author : ಪ್ರಣತಾರ್ತಿಹರನ್

Pages 429

₹ 500.00




Year of Publication: 2004
Published by: ಸಮುದಾಯ ಅಧ್ಯಯನ ಕೇಂದ್ರ
Address: ಮೈಸೂರು

Synopsys

113 ವರ್ಷಗಳ ಕೌಟುಂಬಿಕ ಪತ್ರಗಳ ಸಂಗ್ರಹ ಇದಾಗಿದ್ದು 4000ಕ್ಕೂ ಹೆಚ್ಚು ಪತ್ರಗಳಿವೆ. ಈ ಪೈಕಿ ಮೊದಲ ಭಾಗದಲ್ಲಿ 435 ಪತ್ರಗಳೂ ಎರಡನೆಯ ಭಾಗದಲ್ಲಿ ಪ್ರೊ. ಆರ್.ಕೆ. ಶ್ರೀಕಂಠಕುಮಾರಸ್ವಾಮಿ ಎಂಬ ವಿಜ್ಞಾನಿ ಹಾಗೂ ವೈದಿಕರು ಬರೆದ 120 ಪತ್ರಗಳೂ ಇಲ್ಲಿ ಸೇರಿವೆ. ಒಟ್ಟು 555 ಪತ್ರಗಳು. ಮೊದಲ ಭಾಗದಲ್ಲಿರುವವು ಅಜ್ಞಾತರು ಅನೇಕ ವಿಷಯಗಳ ಬಗೆಗೆ ಬರೆದುಕೊಂಡ ಕ್ಷೇಮ ಸಮಾಚಾರ ಪತ್ರಗಳು. ಎರಡನೆಯ ಭಾಗವು ಸಂಸ್ಕೃತಿ ಬಗೆಗೆ ಜಿಜ್ಞಾಸುಗಳಿಗೆ ಬರೆದ ಪತ್ರಗಳಿಂದ ಕೂಡಿದೆ.

About the Author

ಪ್ರಣತಾರ್ತಿಹರನ್

ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...

READ MORE

Related Books