ಕಚ್ಚೆಗೌಳಿಗರ ಪರಂಪರೆ ಮತ್ತು ಆಧುನಿಕತೆ

Author : ಗಂಗಾಧರ ದೈವಜ್ಞ

Pages 152

₹ 100.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಮಹಾರಾಷ್ಟ್ರದ ಅಲೆಮಾರಿ ಸಮುದಾಯದವರಾಗಿದ್ದ ಕಚ್ಚೆಗೌಳಿಗರು ಪಶುಪಾಲನೆ ಮಾಡುತ್ತ ಕರ್ನಾಟಕದ ಪಶ್ಚಿಮಘಟ್ಟವನ್ನು ಪ್ರವೇಶಿಸಿ, ತಮ್ಮದೇ ಆದ ಮೂಲ ಪರಂಪರೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದವರು.

ಒಂದು ಕಾಲದಲ್ಲಿ ನಾಗರಿಕ ಪರಿಸರದಿಂದ ದೂರವಿದ್ದ ಇವರು ಆಧುನಿಕತೆಯ ಪ್ರಭಾವದಿಂದ ಇತರೆ ಸಮುದಾಯದವರೊಂದಿಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣುತ್ತೇವೆ. ಕಚ್ಚೆಗೌಳಿಗರಲ್ಲಿ ಇಂದು ಪಶುಪಾಲನೆ ಕಡಿಮೆ. ಅನೇಕರು ಕೃಷಿ, ಕೃಷಿಕೂಲಿ ಇತರೆ ವೃತ್ತಿಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ಅವುಗಳನ್ನು ಕುರಿತು ಲೇಖಕರು ಈ ಗ್ರಂಥದಲ್ಲಿ ಚರ್ಚಿಸಿದ್ದಾರೆ.

ಕಚ್ಚೆಗೌಳಿಗರ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಬದುಕಿನ ಚಿತ್ರಣವನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಗಂಗಾಧರ ದೈವಜ್ಞ
(23 October 1964)

ಹಂಪಿಯ ಕನ್ನಡ ವಿ.ವಿ. ಬುಡಕಟ್ಟು ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರು-ಡಾ.ಗಂಗಾಧರ ದೈವಜ್ಞ. 1964 ರ ಅ. 23 ರಂದು ಜನನ. ಜಾನಪದ, ಬುಡಕಟ್ಟು, ಕನ್ನಡ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಆಸಕ್ತಿ. ಮಾಳಿಂಗರಾಯನ ಕಾವ್ಯ, ಬುಡಕಟ್ಟು ಸಮಾಜ ಹುಟ್ಟು ಸಾವಿನ ನಡುವೆ ಹಾಗೂ ಸಣ್ಣಾಟದ ಹುಟ್ಟು ಬೆಳವಣಿಗೆ ಈ ಕೃತಿಗಳು ಕನ್ನಡ ವಿ.ವಿ. ಪ್ರಸಾರಾಂಗದಿಂದ ಪ್ರಕಟವಾಗಿವೆ. ಬುಡಗ ಜಂಗಾಲಯ, ಮಾಟ-ಮಂತ್ರ-ಮೋಡಿ, ಆದಿವಾಸಿ ವೈದ್ಯ ಪದ್ಧತಿ ಹಾಗೂ ಜಾನಪದ ರಂಗಭೂಮಿಯಲ್ಲಿ ಮಹಿಳೆ -ಇವು ಸಂಶೋಧನಾ ಲೇಖನಗಳು. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಸಮ್ಮೇಳನಗಳಲ್ಲಿ ವಿಷಯ ಮಂಡಿಸಿದ್ದಾರೆ. ...

READ MORE

Related Books