ಬಯೋಮಿಮಿಕ್ರಿ

Author : ಕಿರಣ್‌ ವಿ. ಸೂರ್ಯ

Pages 201




Year of Publication: 2021
Published by: ಖುತುಮಾನ
Address: ಎ ಬ್ಲಾಕ್‌, ಶಾಂತಿನಿಕೇತನ ಲೇಔಟ್‌, ಅರ್ಕೆರೆ, ಬನ್ನೇರ್‌ಘಟ್ಟ ರಸ್ತೆ, ಬೆಂಗಳೂರು- 560 076
Phone: 9480035877

Synopsys

ಲೇಖಕ ಕಿರಣ್‌ ವಿ. ಸೂರ್ಯ ಅವರ ಲೇಖನ ಕೃತಿ ‘ಬಯೊಮಿಮಿಕ್ರಿ: ಪ್ರಕೃತಿ, ವಿಸ್ಮಯ, ಕಲಿಕೆ’. ನಮಗೆ ವರ್ತಮಾನದಲ್ಲಿ ತೊಂದರೆ ನೀಡುತ್ತಿರುವ ಸಮಸ್ಯೆಗಳನ್ನು ಪ್ರಕೃತಿ ಎಂದು ಗುರುತಿಸಿ, ಅದಕ್ಕೆ ಪರಿಹಾರವನ್ನೂ ಪಡೆದುಕೊಂಡಿದೆ. ನಮ್ಮ ಸಮಸ್ಯೆಯನ್ನು ಸರಿಯಾಗಿ ಅರಿತುಕೊಂಡು, ನಮ್ಮ ಪ್ರಶ್ನೆಯ ವ್ಯಾಖ್ಯೆಯನ್ನು ಸ್ಪಷ್ಟವಾಗಿಸಿ, ಅದನ್ನು ನಿಸರ್ಗದ ಬೃಹತ್ ಸೃಷ್ಟಿಯ ಜೊತೆಗೆ ಸಮೀಕರಣಗೊಳಿಸಿ, ಅದರ ನಡುವಿನಿಂದ ನಮ್ಮ ಸಮಸ್ಯೆಗೆ ಒಂದು ಸಮನ್ವಯದ ಪರಿಹಾರವನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು “ಬಯೊಮಿಮಿಕ್ರಿ” ಎನ್ನುತ್ತಾರೆ. ಈ ಕುತೂಹಲಕಾರಿ ವಿಷಯವನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಈ ಪುಸ್ತಕ. ಪುಸ್ತಕದ ಕುರಿತು ಲೇಖಕರು ಹೇಳುವಂತೆ, ನಿರ್ಮಾಣ ಕ್ಷೇತ್ರದಲ್ಲಗಲಿ, ತಂತ್ರಜ್ಞಾನದ ನಿಟ್ಟಿನಲ್ಲಾಗಲಿ, ರಾಸಾಯನಿಕ ಅಥವಾ ಇನ್ಯಾವುದೇ ವಲಯದ ಪ್ರಶ್ನೆಗಳಿಗೆ ನಿಸರ್ಗದ ಬಳಿ ಉತ್ತರವಿದೆ. ನಿಸರ್ಗದ ರಚನೆಯನ್ನು ಕುರುಡಾಗಿ ಅನುಕರಣೆ ಮಾಡುವುದರ ಬದಲು ಅದರ ಹಿಂದಿನ ಮರ್ಮವನ್ನು ಅರಿತು ಮುನ್ನಡೆದಿದ್ದು ಬುದ್ದಿವಂತ ಮಾನವನ ಸಾಫಲ್ಯವಾಗಿದೆ. ಇದು ಬಯೋಮಿಮಿಕ್ರಿಯ ಆರಂಭಿಕ ಹಂತಗಳು.

About the Author

ಕಿರಣ್‌ ವಿ. ಸೂರ್ಯ

ಡಾ. ಕಿರಣ್‌ ವಿ. ಸೂರ್ಯ ಅವರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ವಿಜ್ಞಾನ ವಿಷಯಗಳ ಲೇಖಕರು. ವಿಜ್ಞಾನವನ್ನು ಸರಳವಾಗಿ, ಕುತೂಹಲ ಮೂಡಿಸುವ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಾ ಬಂದಿದ್ದು, ಅವುಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಕರ್ನಾಟಕ ವಿಜ್ಞಾನ ಪರಿಷತ್ ನಿಂದ ಇವರ ʻಮಾನವ ಶರೀರದ ರಕ್ಷಣಾ ವ್ಯವಸ್ಥೆʼ ಕೃತಿಗೆ ʻಅತ್ಯುತ್ತಮ ಹಸ್ತಪ್ರತಿ ಪ್ರಶಸ್ತಿʼ ಲಭಿಸಿದೆ. ವೈದ್ಯಕೀಯ ಜಗತ್ತಿನಲ್ಲಿ ಸಂಭವಿಸಿದ ಆಕಸ್ಮಿಕ ಘಟನೆಗಳ ಕುರಿತು ಹೇಳುವ ಇವರ ʻಸೆರೆಂಡಿಪಿಟಿʼ ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ʻಅತ್ಯುತ್ತಮ ವೈದ್ಯಕೀಯ ಕೃತಿʼ ಪ್ರಶಸ್ತಿ ಲಭಿಸಿದೆ. ಇವರ ಮತ್ತೊಂದು ಪ್ರಯೋಗ ಪುಸ್ತಕ ...

READ MORE

Related Books