ಬದುಕು

Author : ಪಾರ್ವತಿ ಪಿಟಗಿ

Pages 85

₹ 50.00
Year of Publication: 2006
Published by: ಅಪೂರ್ವಾ ಪ್ರಕಾಶನ,
Address: ಬಜಾರಗಲ್ಲಿ, ಸುಳೇಭಾವಿ-591103
Phone: 0831-2418225

Synopsys

ಪಾರ್ವತಿ ಪಿಟಗಿಯವರ  ಮೊದಲನೆಯ ಪ್ರಕಟಿತ ಕಾದಂಬರಿ. ನಾಲ್ಕನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಬಾಲ್ಯವಿವಾಹಕ್ಕೆ ಬಲಿಯಾದ ಸುಮಾಳ ಬದುಕಿನ ಕತೆ ಈ ಕಾದಂಬರಿಯಲ್ಲಿದೆ. ಸುಮಾಳಿಗೆ ಬಾಲ್ಯ ವಿವಾಹ ಕಿರಿಕಿರಿಯನ್ನುಂಟು ಮಾಡಿದರೂ ಸಹಿಸಿಕೊಳ್ಳುತ್ತಾಳೆ.  ಆದರೆ ತನಗೆ ಗಂಟುಬಿದ್ದ ಗಂಡನ ಅಸಾಮರ್ಥ್ಯದಿಂದಾಗಿ ಅವಳು ಗಂಡನ ಮನೆಬಿಟ್ಟು ಬಂದವಳು ಮತ್ತೆ ಗಂಡನ ಮನೆಯ ಕಡೆ ತಲೆ ಹಾಕಲೇ ಇಲ್ಲ. ಹೀಗೆ ಈ ಕಿರು ಕಾದಂಬರಿಯೂ ಮುಂದುವರೆಯುತ್ತದೆ.

About the Author

ಪಾರ್ವತಿ ಪಿಟಗಿ
(02 June 1975)

ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ.  ಅವರ ಹಲವು ಕಥೆ, ಕಾದಂಬರಿ, ಲೇಖನಗಳು  ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...

READ MORE

Related Books