ಏನು ದಾಹ, ಯಾವ ಮೋಹ

Author : ಶೈಲಜಾ ಹಾಸನ

Pages 160

₹ 90.00




Published by: ಸ್ವಾಗತ ಸಮಿತಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Synopsys

ಶೈಲಜಾ ಹಾಸನರವರ ಕಾದಂಬರಿ ಪತ್ತೇದಾರಿ ಕಾದಂಬರಿ ಏನು ದಾಹ, ಯಾವ ಮೋಹ. ಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಬಂದ ಕಥೆ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲು ಪುಸ್ತಕ ರೂಪ ತಳೆದಿರುವುದು ಮುಖಪುಟವೇ ಪರಿಚಯಿಸಿತು.ಓದು ಮೊದಲಾಯ್ತು.ತೀರಾ ಸಾಮಾನ್ಯರು ಮಾತನಾಡುವ ಸರಳ ಭಾಷಾಪ್ರಯೋಗ (ಅಸಹಜ ಎಂದೆನಿಸಿದ್ದು ನಿಜವೇ- ಸಾಹಿತಿಗಳು ಭಾಷಾಪಾಂಡಿತ್ಯವೇ ಸಾಹಿತ್ಯ ಪ್ರಾವೀಣ್ಯತೆ ಎಂದು ತೋರ್ಪಡಿಸುತ್ತಾರೆ), ಮಾಮೂಲಿ ಮನುಷ್ಯರು ಮಾತನಾಡುವಂತೆ ಕಥೆ ಸಾಗಿದೆ. ಕಥಾ ನಾಯಕ ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸ - ಮುಖಪುಟದಲ್ಲೇ ಪತ್ತೇದಾರಿ ಕಾದಂಬರಿ ನಮೂದನೆ, ಓದುಗಳಾಗಿ ಕಾದಂಬರಿಗಾರ್ತಿಯಾಗಿ ಕೆಲವು ಊಹಾಪೂಹಗಳನ್ನು ಮನಸಲ್ಲಿ ಹುಟ್ಟಿಹಾಕಿತು, ಅದರಂತೆ ಕೆಲವು ಎಣಿಸಿದ ತಿರುವುಗಳು ಕಥೆಯಲ್ಲಿ ಸಿಕ್ಕಾಗಿ ಎಣಿಕೆ ಸರಿಯಾದದ್ದಕ್ಕೆ ನನ್ನ ಬೆನ್ನುತಟ್ಟಿಕೊಂಡೆ. ಮಡಿಕೇರಿಯ ಪ್ರವಾಸಿತಾಣಗಳು ಹುಡುಗರ ಜಾಲಿ ಟ್ರಿಪ್‌ ಕಣ್ಣಮುಂದೆ ಹಾದುಹೋಯ್ತು, ಮಡಿಕೇರಿ ಮಂಜಲ್ಲಿ ಮಿಂದು ಮೈಮರೆತಾಗ ಎದುರಾದ ನಾಯಕನ ಗೆಳೆಯನ ಸಾವು ಸಪ್ಪೆಯಾಗಿದ್ದ ಕಥೆಗೆ ಮಸಾಲೆ ತರುತ್ತದೆ, ನಂತರ ಸಾವಿನ ಹಿಂದಿನ ರಹಸ್ಯ ಭೇದಿಸಲು ಹೊರಟಾಗ ಬಿಚ್ಚಿಕೊಳ್ಳುವ ಕಥೆ, ಅನುಮಾನದ ಹುತ್ತ ಸೊಗಸಾಗಿ ನಮ್ಮನ್ನು ಕಥೆಯೊಂದಿಗೆ ಓದಿಸಿಕೊಂಡು ಸಾಗುತ್ತದೆ. ಮಲೆನಾಡು ಎಸ್ಟೇಟ್‌ದಾರರ ಶೋಕಿ ಜೀವನ ಕಣ್ಣುಕಟ್ಟುತ್ತದೆ. ಹಣದ ದಾಹ ಹೆಣ್ಣಿನ ಮೋಹ ಶ್ರೀಮಂತಿಕೆಯ ಅಮಲು ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಇಳಿಸಬಹುದು, ಜನರ ಕಣ್ಣಲ್ಲಿ ಎಷ್ಟು ಕನಿಷ್ಠ ಮಾಡಬಹುದು ಎಂಬುದರ ಆಳ ಪರಿಚಯಿಸುತ್ತದೆ. ಕಥೆ ಹೋದಂತೆ ಬಿಚ್ಚಿಕೊಳ್ಳುವ ರಹಸ್ಯಗಳು ಬೆಚ್ಚಿಬೀಳಿಸಿದಕ್ಕಿಂತ ಅಯ್ಯೋ ಪಾಪ ಎಂಬ ಅನುಕಂಪದ ಅಲೆ ಎಬ್ಬಿಸುತ್ತವೆ, ಕಥೆಯ ಅಂತ್ಯ ಉಫ್‌ ಎಂದು ಉಸಿರುಬಿಡುತ್ತಾ ಉಬ್ಬೇರಿಸುತ್ತದೆ. ಸಂಬಂಧಗಳ ಸಂಘರ್ಷ ಉಸಿರುಬಿಗಿ ಇಡಿದು ಓದುವಂತೆ ಮಾಡುತ್ತದೆ. ಕಥೆಯಲ್ಲಿ ಬರುವ ಅನೇಕ ಪಾತ್ರಗಳು ಕಥೆಗೆ ಜೀವತುಂಬುತ್ತದೆ. “ಮೋಹ” ಕಾದಂಬರಿಯ ಎಳೆಯಂತೆ ಇಲ್ಲಿಯೂ ಗಂಡಸಿನ ಹುಚ್ಚುತನದಿಂದ ನೊಂದ ಕುಟುಂಬದ ನೋವಿನ ಚಾಯೆ ಲೇಖಕಿಯ ಮನಸ್ಸನ್ನು ಕೊಂಚ ಪರಿಚಯಿಸಿತು. ಹೆಣ್ಣಿನ ಸಂಕಷ್ಟಗಳು ಸಹನೆ ಗಂಡಿನ ದರ್ಪ ಎರಡೂ ಕಾದಂಬರಿಯ ಮೂಲ ವಿಷಯ. ಕೆಲವೊಂದು ಭಾಗದಲ್ಲಿ ಕೆಲವು ಸನ್ನಿವೇಶಗಳು ಕುತೂಹಲಕರವಾಗಿದೆ . ಒಂದು ಸಿನಿಮಾದಂತೆ ಮಡಿಕೇರಿ ಎಸ್ಟೇಟ್‌ನಲ್ಲಿ ಒಂದು ಕೊಲೆಯ ಸುತ್ತ ಸಾಗುವ ಕಥೆ ಮನಕಲಕುತ್ತಾ ಸಿನಿಮೀಯವಾಗಿ ಕಣ್ಮುಂದೆ ತರುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ.

About the Author

ಶೈಲಜಾ ಹಾಸನ
(15 May 1964)

ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ  ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...

READ MORE

Related Books