About the Author

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ.

ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ಕಮಲಾಪುರ, ಕೆ. ಚೆನ್ನಬಸಪ್ಪ ಕುಳಗೇರಿ, ಮಾಣಿಕ ಮುತ್ಯಾ ಕಲ್ಮೂಡ, ಸರಳ ಸಜ್ಜನ ವ್ಯಕ್ತಿ ಶ್ರೀ ವೀರಣ್ಣ ಪಡಶೆಟ್ಟಿ, ನೀತಿ ನಿರಂತರ- ಶ್ರೀ ರಾಜಶೇಖರ ಪಾಟೀಲ, ಚನ್ನಬಸಪ್ಪ, ಕುಳಗೇರಿ, ಶರಣ ಈಶ್ವರ ಮುತ್ಯಾ ನವನಾಳ, ಮಹಾಯೋಗಿ ಶ್ರೀ ದತ್ತ ದಿಗಂಬರ ಮಾಣಿಕ ಮುತ್ಯಾ ಕಲ್ಮೂಡ,  ಕಮಲಾಪುರದ ಜಾನಪದ ಕವಿ ಮಲ್ಲಿಕಾರ್ಜುನ ತ್ರಿಮುಖೆ , ಶರಣರ ಸ್ಮರಣೆ (ಜೀವನ ಚರಿತ್ರೆ), ಯಾರ ತಪ್ಪು ಯಾರಿಗೆ ಶಿಕ್ಷೆ?, ಜ್ಞಾನದ ಬಲ, ನೈತಿಕ ಬದುಕು, ಹಡೆದವರ ಹೃದಯ ಅಥವಾ ನೈತಿಕ ಬದುಕು (ಸಾಮಾಜಿಕ ನಾಟಕ), ವಾಯು ವಿಹಾರದಲ್ಲಿ ಚರ್ಚೆ, ಶರಣರ ಅಂತರಂಗ (ವೈಚಾರಿಕ ಪ್ರಬಂಧಗಳು), ಶರಣರ ದಿವ್ಯವಾಣಿ, ವಚನ ಕಾಣಿಕೆ, ಶ್ರೀ ಬಸವಣ್ಣನವರ ಆತ್ಮ ಸಂವೇದನೆ (ವಚನಗಳ ವಿಶ್ಲೇಷಣೆ), ಬದುಕಿಗೆ ಬೆಳಕು (ಚಿಂತನಾತ್ಮಕ ಲೇಖನಗಳು), ದಿಗಂಬರ ಮಾಣಿಕ ಮುತ್ಯಾ ಕಲ್ಮೂಡ (ಚಾರಿತ್ರಿಕ ನಾಟಕ), ಹೆಬ್ಬಾಳದ ವರಕವಿ -ದಿ. ಗುರುಪಾದಪ್ಪ ಚೇಂಗಟಿ (ಭಜನಾ ಪದಗಳು), ಸತ್ಯ ಸಾಕ್ಷಿಗಳು (ವಚನಗಳ ವಿಶ್ಲೇಷಣೆ)

ಪ್ರಶಸ್ತಿ-ಪುರಸ್ಕಾರಗಳು: ಶರಣರ ಅಂತರಂಗ ಕೃತಿಗೆ ಗುಲಬರ್ಗಾ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಮಲಾಪುರದಲ್ಲಿ (2014) ಜರುಗಿದ ಕಲಬುರಗಿ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ ‘ಅವ್ವ’ ಪ್ರಶಸ್ತಿ ಗೌರವ, ಕಲಬುರಗಿಯ ವಿಶ್ವಕರ್ಮ ಶಿಕ್ಷಣ ಹಾಗೂ ಅಭಿವೃದ್ಧಿ ಸಂಸ್ಥೆಯಿಂದ ದೇವನಾಂಪ್ರಿಯ ಪ್ರಶಸ್ತಿ, ಪಾಳಾದ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ನಿಂದ ಗೌಡ ಪ್ರಶಸ್ತಿ ಲಭಿಸಿವೆ.  

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

(04 Jul 1948)