ಶರಣರ ದಿವ್ಯವಾಣಿ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 112

₹ 75.00




Year of Publication: 2010
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಸುಭಾಶ್ಚಂದ್ರ ಕಶೆಟ್ಟಿ, ಬಾಚನಾಳ ಅವರು ರಚಿಸಿದ ಕೃತಿ-ಶರಣರ ದಿವ್ಯವಾಣಿ. 40 ವಚನಗಳನ್ನು ಆಯ್ದುಕೊಂಡು ವಿಶ್ಲೇಷಿಸಲಾಗಿದೆ. ಉತ್ತಮ ನಿದರ್ಶನದೊಂದಿಗೆ ವಚನಗಳ ಅಂತರಾಳವನ್ನು ಬಿಚ್ಚಿಟ್ಟಿದ್ದಾರೆ. ಮೋಳಿಗೆ ಮಾರಯ್ಯನ ವಚನ 'ಊರ್ವಶಿ ಕರ್ಪೂರವನ್ನು' ವಚನದಲ್ಲಿ ಒಳಾರ್ಥವನ್ನು ಭೇದಿಸಿ, ನಿಗೂಢ ವಿಚಾರಗಳನ್ನು ತೆರೆದಿಡುತ್ತಾರೆ. ಹಾಗೆಯೇ 'ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು 'ಎಂಬ ವಚನದಲ್ಲಿ ನಾನು ಎಂಬ ಪದದ ವಿಶೇಷ ಅರ್ಥ ಅವರ ಹುಟ್ಟು ಪರಿಣಾಮಗಳನ್ನು ಎಳೆಯಾಗಿ ಬಿಡಿಸಿದ್ದಾರೆ. ಅಕ್ಕನ ವಚನಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಸಂದರ್ಭದಲ್ಲಿ ಹೆಚ್ಚಿನ ಅಧ್ಯಾತ್ಮಿಕ ಸೂಕ್ಷ್ಮತೆ  ಇರಬೇಕು ಆದರೆ, ಲೇಖಕರು ಬಾಳೆಯ ಹಣ್ಣನ್ನು ಸುಲಿದು ಬಾಯಿಗಿತ್ತಂತೆ ಸುಲಭವಾಗಿ ಸತ್ಯ ದರ್ಶನ ಮಾಡಿಸಿದ್ದಾರೆ.  ಒಟ್ಟಿನಲ್ಲಿ , ಸರಳ ಭಾಷೆಯಲ್ಲಿ ನಿರೂಪಿಸಿದ್ದು, ಸಾಮಾನ್ಯರೂ ಸಹ ವಚನಗಳ ಅರ್ಥ ಮಾಡಿಕೊಳ್ಳಬಹುದು.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books