ಸುಮಂಗಲ ಗೀತೆಗಳು

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 108

₹ 125.00




Year of Publication: 2018
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಪಂಡಿತ ಶ್ರೀ ಸಿದ್ದಮಲ್ಲ ಶಿವಾಚಾರ್ಯರು ರಚಿಸಿದ ‘ಸುಮಂಗಲ ಗೀತೆಗಳು’ ಕವಿ ಹಾಗೂ ಲೇಖಕ ಸುಭಾಶ್ಚಂದ್ರ ಶೆಟ್ಟಿ, ಬಾಚನಾಳ ಅವರು ಸಂಪಾದಿಸಿದ್ದಾರೆ. ಅನುಭಾವ, ಚರಿತ್ರೆ, ರಾಷ್ಟ್ರ, ಪಾದ ಪೂಜೆ, ಮಂಗಳಾರತಿ, ಕರ್ಪೂರದಾರತಿ, ಗೀತೆಗಳ ಮೇಳವಿದೆ. ಜೋಗುಳ, ಸೋಬಾನ ಹಾಡುಗಳು, ಕುಪ್ಪಸದ ಹಾಡುಗಳು ಮತ್ತು ಒಗಟುಗಳು ಹೀಗೆ ವೈವಿಧ್ಯಮಯತೆ ಇದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books