ಶ್ರೀ ಶಂಕರಶೆಟ್ಟಿ ಪಾಟೀಲರು

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 239

₹ 125.00




Year of Publication: 2005
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಜನ ಮೆಚ್ಚಿದ ನಾಯಕ ಶಂಕರ ಶೆಟ್ಟಿ ಪಾಟೀಲ- Iಜೀವನ ಚಿತ್ರಣ ಕಟ್ಟಿ ಕೊಡುವ ಕೃತಿಯನ್ನು ಸುಭಾಶ್ಚಂದ್ರ ಕಶೆಟ್ಟಿ ರಚಿಸಿದ್ದಾರೆ. ಸಾಮಾಜಿಕ ಕಳಕಳಿಯ ಧಾರ್ಮಿಕ ಚಿಂತಕ. ಒಂದು ಪೂರ್ಣ ಅವಧಿಗೆ ಶಾಸಕರಾಗಿದ್ದರು. ತುಂಬಾ ಪ್ರಾಮಾಣಿಕ ರಾಜಕಾರಣಿಗಳು. ಶ್ರೀ ಶಂಕರಶೆಟ್ಟಿ ಪಾಟೀಲರಂಥ ಮುತ್ಸದ್ಧಿಯ ಜೀವನ ಚರಿತ್ರೆ,ಅವರ ಸಾಧನೆಯನ್ನು ಇಲ್ಲಿ ದಾಖಲಿಸಲಾಗಿದೆ. ಲೇಖಕರು, ಶಂಕರ ಶೆಟ್ಟಿ ಪಾಟೀಲರ ಜೀವನವನ್ನು ಬಹಳ ಹತ್ತಿರದಿಂದ ಕಂಡವರು. ಅಂದಮಾತ್ರಕ್ಕೆ, ಭಾವುಕರಾಗದೆ ಪಾಟೀಲರಷ್ಟೆ ಸರಳವಾಗಿ ಅವರ ಜೀವನವನ್ನು ಮಾತ್ರ ಇಲ್ಲಿ ತೆರೆದಿಟ್ಟಿದ್ದಾರೆ. ಕೇವಲ ಶ್ರೀ ಶಂಕರ ಶೆಟ್ಟಿ ಪಾಟೀಲರ ಜೀವನದ ಘಟನೆಗಳನ್ನುದಾಖಲಿಸಿದೇ, ಕಮಲಾಪುರದ ಸುತ್ತಲಿನ ಪರಿಸರ, ನೈಸರ್ಗಿಕ ವೈಭವ,ಅದರ ಇತಿಹಾಸವನ್ನು ಹೇಳಿದ್ದಾರೆ. ನಿಜಾಮ್ ಆಡಳಿತದ ಪರಿಗಳ ಕುರಿತು ಹೇಳಲಾಗಿದೆ. ಇವರ ಸ್ವಾತಂತ್ರ್ಯ ಹೋರಾಟದ ಚಿತ್ರಣವೂ ಇದೆ. ಸೌಹಾರ್ದತೆ ಹೇಗಿತ್ತೆಂಬುದನ್ನು ಗುಪ್ತಗಾಮಿನಿಯಾಗಿ ಹರಿದು ಬಂದಿದೆ. ಹೈದರಾಬಾದ್ ವಿಮೋಚನಾ ಚಳವಳಿಯ ಘಟನಾವಳಿಗಳನ್ನು ಹೇಳುವ ಮೂಲಕ ಶಂಕರಶೆಟ್ಟಿ ಪಾಟೀಲರ ಸಮಗ್ರ ವ್ಯಕ್ತಿತ್ವವನ್ನು ನೀಡಿದ್ದಾರೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books