ಬದುಕಿನ ಪ್ರಜ್ಞೆ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 34

₹ 5.00
Year of Publication: 1980
Published by: ಈಶ್ವರ ಪ್ರಕಾಶನ
Address: ಬ್ಯಾಂಕ್ ಕಾಲೊನಿ, ನೆಹರು ಗಂಜ್, ಕಲಬುರಗಿ

Synopsys

ಕವಿ ಸುಭಾಶಚಂದ್ರ ಕಶೆಟ್ಟಿ, ಬಾಚನಾಳ ಅವರ ಮೊದಲ ಕವನ ಸಂಕಲನ-ಬದುಕಿನ ಪ್ರಜ್ಞೆ. ಒಟ್ಟು 26 ಕವನಗಳಿದ್ದು, ಪ್ರಾಸಪ್ರಧಾನವಾಗಿವೆ. 'ಎಲ್ಲಾ ಕಾಲದಲ್ಲಿ ಎಲ್ಲರಿಗೂ ನೀವು ಅನ್ನದಾತರು ಕಾನೂನಿನ ಕಕ್ಷೆಯಲ್ಲಿ ಆದೇಶದ ಅವರಣದಲ್ಲಿ ನೀನಿರುವೆ ಎಲ್ಲಾ ಜನಸಾಮಾನ್ಯರ ಮಧ್ಯದಲ್ಲಿ' ಎನ್ನುವ ಕವನದ ಸಾಲುಗಳು ಕವಿಯ ಕಾವ್ಯ ಪ್ರತಿಭೆಯ ಸೂಚಕವಾಗಿವೆ. ಕನ್ನಡ ಭಾಷೆ ,ಹುಚ್ಚ ಚುನಾವಣೆ,ಸರಕಾರ, ಗ್ರಾಮಲೆಕ್ಕಿಗ, ಗತಕಾಲದ ಇತಿಹಾಸ, ಸಂಕ್ರಮಣ, ಮತದಾನ, ನಮ್ಮ ಗಾಂಧಿ, ಶಿಕ್ಷಕ, ಬಡವ, ಎನ್ನುವ ಹಲವಾರು ಕವನಗಳು ಓದುಗರ ಗಮನ ಸೆಳೆಯುತ್ತವೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books