ದಿವ್ಯನೇತ್ರ

Author : ಟಿ. ಆರ್. ಅನಂತರಾಮು

Pages 184

₹ 95.00




Year of Publication: 2005
Published by: ವರ್ಷಾ ಎಂಟರ್ ಟ್ರೈನರ್ಸ್
Address: 1208, 1ನೇ ಮಹಡಿ, 26ನೇ ಮುಖ್ಯರಸ್ತೆ, 41ನೇ ಅಡ್ಡರಸ್ತೆ, 9ನೇ ಬ್ಲಾಕ್, ಜಯನಗರ, ಬೆಂಗಳೂರು- 560 009

Synopsys

`ದಿವ್ಯನೇತ್ರ’ ಹದಿಮೂರು ವಿಜ್ಞಾನ ಪ್ರಬಂಧಗಳ ಸಂಕಲನ. ಇವೆಲ್ಲವೂ ವರ್ತಮಾನಕ್ಕೆ ಸ್ಪಂದಿಸುತ್ತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಾಗ ಚರ್ಚೆಗಿ ಒಳಗಾದ ವಿಷಯಗಳು. ಬದುಕಿನ ನಿಗೂಢವನ್ನು ಅನಾವರಣ ಮಾಡುತ್ತ ಹೊಸಲೋಕಕ್ಕೆ ಒಯ್ಯುತ್ತವೆ.

ಮಂಗಳಗ್ರಹದ ಸಾಹಸಗಾಥೆ, ಹಬಲ್ ಕಂಡ ವಿಶ್ವರೂಪ, ಬರ್ಮುಡಾ ಟ್ರೈಯಾಂಗಲ್‍ನ ರಹಸ್ಯ, ಸುನಾಮಿಯ ಹಾಲಹಲ, ನಮ್ಮನ್ನು ಬೆರಗುಗೊಳಿಸುವ ಗುಜರಾತಿನ ಜುರಾಸಿಕ್ ಪಾರ್ಕ್, ಕಾಲಾತೀತವಾಗಿ ನಮ್ಮನ್ನು ಮೋಹಕ್ಕೆ ಸಿಲುಕಿಸಿರುವ ಚಿನ್ನ, ಸೀಸ ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿರುವ ಪರಿ, ಚಂದ್ರಶಿಲೆಯ ಚೂರನ್ನು ಕದ್ದ ಪ್ರಸಂಗ-ಇವೆಲ್ಲವನ್ನೂ ಈ ಕೃತಿ ಪಕಳೆಪಕಳೆಯಾಗಿ ತೆರೆದಿಡುತ್ತದೆ.

ಇಲ್ಲಿಯ ನಿರೂಪಣೆ ಮತ್ತು ಶೈಲಿ, ವಿಜ್ಞಾನ ಮತ್ತು ಸಾಹಿತ್ಯದ ತೆಳು ಗೆರೆಯನ್ನೇ ಅಳಿಸಿಹಾಕುತ್ತದೆ. ಸಮಕಾಲೀನ ವಿಜ್ಞಾನದ ಪ್ರಗತಿಗೆ ನಮ್ಮನ್ನು ಒಡ್ಡಿಕೊಳ್ಳದಿದ್ದರೆ ನಾವು ಶತಮಾನಗಳ ಹಿಂದಕ್ಕೆ ಸರಿಯಬೇಕಾಗುತ್ತದೆ. ಮನದಾಳಕ್ಕೆ ಇಳಿಯುವ ಈ ಸಂಗ್ರಹದ ಲೇಖನಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books