ಫರ್ಮಾ ಯಕ್ಷಪ್ರಶ್ನೆ ಮತ್ತು ಇತರ ವಿಜ್ಞಾನ ಲೇಖನಗಳು

Author : ಜಿ.ಟಿ. ನಾರಾಯಣರಾವ್

Pages 272

₹ 60.00




Year of Publication: 1926
Published by: ಅತ್ರಿ ಬುಕ್ ಸೆಂಟರ್
Address: ಶರಾವತಿ ಬಲ್ಮಠ ಮಂಗಳೂರು 575001

Synopsys

“ಫರ್ಮಾ ಯಕ್ಷಪ್ರಶ್ನೆ ಮತ್ತು ಇತರ ವಿಜ್ಞಾನ ಲೇಖನಗಳು' ಪುಸ್ತಕ ಜಿ.ಟಿ ನಾರಾಯಣ ರಾವ್‌ ಅವರ ಕೃತಿ . ೨೮ ಲೇಖನಗಳ ಸಂಕಲನ : ಗಣಿತ ೧೫, ಖಗೋಳ ವಿಜ್ಞಾನ ೮, ಮತ್ತು ಇತರ ೫ ಲೇಖನಗಳಿವೆ. ಇವೆಲ್ಲವುಗಳ ಆಧಾರ ಶ್ರುತಿ ವೈಜ್ಞಾನಿಕ ಮನೋಧರ್ಮ. ಅಂದರೆ ನಿಸರ್ಗದಲ್ಲಿ ಪವಾಡಗಳು ಘಟಿಸುವುದಿಲ್ಲ, ನೂತನ ವಿದ್ಯಮಾನಗಳನ್ನು ಕಾರ್ಯ-ಕಾರಣ ಪಾತಳಿಯಲ್ಲಿ ವಿಶ್ಲೇಷಿಸಿ ಅರ್ಥವಿಸಿ ವ್ಯಾಖ್ಯಾನಿಸುವ ಸಾಮರ್ಥ್ಯ ಮಾನವ ಮತಿಗುಂಟು, ಮತ್ತು ಮಾನವೀಯತೆಯನ್ನುಳಿದ ವಿಜ್ಞಾನವಾಗಲೀ ಧರ್ಮವಾಗಲೀ ಕೇವಲ ಅಂಧ ಎಂಬ ತತ್ತ್ವ ಇಲ್ಲಿನದು. 

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Related Books