ಪರಮಾಣು ನ್ಯೂಕ್ಲಿಯಸ್

Author : ಡಿ.ಆರ್. ಬಳೂರಗಿ

Pages 108

₹ 50.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080222035800

Synopsys

ಪರಮಾಣು ನ್ಯೂಕ್ಲಿಯಸ್-ಕೃತಿಯನ್ನು ಲೇಖಕ ಡಿ.ಆರ್. ಬಳೂರಗಿ ರಚಿಸಿದ್ದು, ಶಿವಮೊಗ್ಗದ ಕರ್ನಾಟಕ ಸಂಘವು ‘ಹಸೂಡಿ ವೆಂಕಟಶಾಸ್ತ್ರೀ ವಿಜ್ಞಾನ ಸಾಹಿತ್ಯ ಪ್ರಶಸ್ತಿ’(2012) ನೀಡಿದೆ. ಮಕ್ಕಳಿಗೆ ಅಣು-ಪರಮಾಣು-ನ್ಯೂಕ್ಲಿಯಸ್ -ಕಣಗಳ ರಚನೆ ಮುಂತಾದ ಅಂಶಗಳ ಕುರಿತು ಸರಳವಾಗಿ ಬರೆದಿದ್ದು ಈ ಕೃತಿಯ ಹೆಗ್ಗಳಿಕೆ. ಚಿತ್ರಸಮೇತವಾಗಿ ವಿಷಯದ ನಿರೂಪಣೆ ಇರುವುದರಿಂದ ಮಕ್ಕಳಿಗೆ ವಿಷಯದ ಗ್ರಹಿಕೆ ಸುಲಭವಾಗುತ್ತದೆ ಮತ್ತು ವಿಷಯವನ್ನು ಅವರು ಸಂಭ್ರಮಿಸುತ್ತಾರೆ.

About the Author

ಡಿ.ಆರ್. ಬಳೂರಗಿ
(20 July 1943)

"ಸುಗ್ಗಿಯು ಬಂದಿತು ಹಿಗ್ಗನು ತಂದಿತು  ನಮ್ಮಯ ನಾಡಿನ ಜನಕೆಲ್ಲ" ಶಾಲಾ ಮಟ್ಟದ ಕನ್ನಡ ಪುಸ್ತಕದಲ್ಲಿ ಪದ್ಯವಾಗಿದ್ದ ಈ ಸುಗ್ಗಿ ಹಾಡನ್ನು ಕೇಳದವರಿಲ್ಲ. ಈ ಪದ್ಯದ ಕತೃ ದ.ರಾ ಬಳೂರಗಿ (ಡಿ.ಆರ್‌. ಬಳೂರಗಿ). ಬಳೂರಗಿಯವರು ಹನ್ನೊಂದು ವರ್ಷದ ಬಾಲಕನಾಗಿದ್ದ (1954) ಸಮಯದಲ್ಲಿ ಬರೆದ ಹಾಡಿದು.  ಮೂಲತಃ ವಿಜಯಪುರ ಜಿಲ್ಲೆ ಸಾರವಾಡದವರಾದ ಬಳೂರಗಿ ಅವರು ಜನಿಸಿದ್ದು 1943 ಜುಲೈ 20ರಂದು. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ವಿಜಯಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು.  ...

READ MORE

Related Books