ನಮ್ಮೊಳಗಿನ ಬ್ರಹ್ಮಾಂಡ

Author : ನಾಗೇಶ ಹೆಗಡೆ

Pages 160

₹ 95.00




Year of Publication: 2011
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಲೇಖಕ ನಾಗೇಶ ಹೆಗಡೆ ಅವರ ಕೃತಿ ನಮ್ಮೊಳಗಿನ ಬ್ರಹ್ಮಾಂಡ. ಪ್ರಸಿದ್ಧ ಪತ್ರಕರ್ತ, ವಿಜ್ಞಾನ ಲೇಖಕ ನಾಗೇಶ ಹೆಗಡೆಯವರು ಹಲವಾರು ವರ್ಷಗಳಿಂದ ತಮ್ಮನ್ನು ಪರಿಸರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದವರು. ಪರಿಸರ ಋಷಿಯಂತೆ ಬರವಣಿಗೆಯ ಕಾಯಕವನ್ನು ನಡೆಸಿದವರು. ಇವರ ಹಲವಾರು ಕೃತಿಗಳು ಕನ್ನಡಿಗರಲ್ಲಿ ಪರಿಸರವನ್ನು ಕುರಿತ ಅರಿವಿನ ವಿಸ್ತಾರವನ್ನು ಮಾಡುತ್ತಾ ಬಂದಿವೆ. ಅತ್ಯಂತ ಲವಲವಿಕೆಯ ಸಾಮಾನ್ಯ ಓದುಗನಿಗೂ ಅರ್ಥವಾಗಬಹುದಾದ, ಆಕರ್ಷಕವಾದ ಶೈಲಿ ನಾಗೇಶ ಹೆಗಡೆಯವರದು. ಮನುಷ್ಯನ ಶೋಧಬುದ್ಧಿ ದಿನದಿನಕ್ಕೆ ಹರಿತವಾಗುತ್ತಿದೆ. ಜ್ಞಾನದ ಹಸಿವು, ತೃಷೆ ನೀಗಿಸಲೆಂದು ಆತ ಗ್ರಹ ತಾರೆಗಳ ಬಾಹ್ಯಲೋಕಕ್ಕೆ ಲಗ್ಗೆ ಹಾಕಿದಷ್ಟೇ ಉತ್ಸಾಹದಿಂದ ತನ್ನೊಳಗಿನ ಸೂಕ್ಷ್ಮಲೋಕಕ್ಕೂ ದಾಪುಗಾಲಿಡುತ್ತಿದ್ದಾನೆ. ಈ ದೇಹವೆಂಬ ಬ್ರಹ್ಮಾಂಡದಲ್ಲೂ ಅಷ್ಟೇ ರೋಚಕ, ಅಷ್ಟೇ ಅಲೌಕಿಕ ಸಂಗತಿಗಳನ್ನು ಕಂಡು ಬೆರಗಾಗುತ್ತಿದ್ದಾನೆ. ವಿಜ್ಞಾನಿಗಳ ತಾಂತ್ರಿಕ ಭಾಷೆಗಳಲ್ಲೇ ಬಂಧಿಯಾಗಿದ್ದ ಈ ಸೂಕ್ಷ್ಮಲೋಕದ ಸೋಜಿಗಗಳನ್ನು ಜನಸಾಮಾನ್ಯರ ಭಾಷೆಯಲ್ಲಿ ತಿಳಿಸುವ ಯತ್ನವೇ `ನಮ್ಮೊಳಗಿನ ಬ್ರಹ್ಮಾಂಡ'.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books