ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು

Author : ಆರ್. ವೇಣುಗೋಪಾಲ್

Pages 176

₹ 175.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ವಿಜ್ಞಾನ ಪದವಿಪೂರ್ವ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳಿಗೆ ರಸಾಯನವಿಜ್ಞಾನದ ಮೂಲತತ್ವಗಳ ಸಮತೋಲನ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುವ ಕೃತಿ ‘ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು’.ಪ್ರೊ. ಆರ್. ವೇಣುಗೋಪಾಲ ಹಾಗೂ ಪ್ರೊ. ಬಿ.ಎಸ್. ಜೈಪ್ರಕಾಶ್ ಅವರು ಸಂಯುಕ್ತವಾಗಿ ರಚಿಸಿದ್ದು, ಕೃತಿಯಲ್ಲಿ 'ಏಕಮಾನಗಳು' ಮತ್ತು 'ರಾಸಾಯನಿಕ ವಿಶ್ಲೇಷಣೆ', ಇವೆರಡು ಅಧ್ಯಾಯಗಳಿವೆ. ಓದುಗರ ಕುತೂಹಲವನ್ನು ಹೆಚ್ಚಿಸಲು ರಾಸಾಯನಿಕ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಚಾರಿತ್ರಿಕ ಘಟನೆಗಳು ಮತ್ತು ವಿಜ್ಞಾನಿಗಳ ಛಾಯಾಚಿತ್ರಗಳನ್ನು ಕೊಡಲಾಗಿದೆ. ಪುಸ್ತಕದ ಕೊನೆಯಲ್ಲಿರುವ ಪಾರಿಭಾಷಿಕ ಶಬ್ದಕೋಶ ಒಂದು ಮತ್ತೊಂದುವಿಶೇಷತೆ.

About the Author

ಆರ್. ವೇಣುಗೋಪಾಲ್

ಪ್ರೊಫೆಸರ್‌, ಲೇಖಕ ಆರ್. ವೇಣುಗೋಪಾಲ್ ಅವರು 1966ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬೆಂಗಳೂರಿನ ವಿಶ್ವೇಶ್ವರಪುರ ಕಾಲೇಜ್ ಆಫ್ ಸೈನ್ಸ್ನ ರಸಾಯನ ವಿಜ್ಞಾನ ವಿಭಾಗದಲ್ಲಿ ಮೂರು ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿದರು. ಬಿ.ಎಸ್ಸಿ ಮತ್ತು ಬಿ.ಇ ವಿದ್ಯಾರ್ಥಿಗಳಿಗಾಗಿ ರಸಾಯನ ವಿಜ್ಞಾನದಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ. ನಿವೃತ್ತಿಯ ನಂತರ ಸ್ವಂತ ಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಸಂತೆಕಲ್ಲಹಳ್ಳಿಗೆ ಸ್ಥಳಾಂತರಗೊಂಡು ಆ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಹಲವಾರು ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಲೇಖಕ ಬಿ. ಎಸ್. ಜೈಪ್ರಕಾಶ್ ಅವರ ಸಹಯೋಗದಲ್ಲಿ ‘ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು’ ...

READ MORE

Related Books