ವಿಜ್ಞಾನದ ಬೆಳಕಿನಲೆಯಲ್ಲಿ(ಪ್ರಚಲಿತ ವಿಜ್ಞಾನ ಬರಹಗಳು )

Author : ಲಿಂಗರಾಜ ರಾಮಾಪೂರ

Pages 96

₹ 80.00




Year of Publication: 2015
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು,
Address: ವಿಜ್ಞಾನ ಭವನ, ಬನಶಂಕರಿ 2ನೇ ಹಂತ, ಬೆಂಗಳೂರು
Phone: 08026718939

Synopsys

ಜನಪ್ರಿಯ ವಿಜ್ಞಾನವೆಂದರೆ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು. ಇಂದಿನ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ  ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿ ತಿಳಿದಿರಲೇಬೇಕಾದ ಜ್ಞಾನವೇ ಜನಪ್ರಿಯ ವಿಜ್ಞಾನವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಮ್ಮ ಸಾಮಾಜಿಕ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥೈಸಲು ಜನಪ್ರಿಯ ವಿಜ್ಞಾನದ ನೆರವು ಅಗತ್ಯ. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಕರಾವಿಪದ ಉದಯೋನ್ಮುಖ ಲೇಖಕರಿಗೆ ‘ಜನಪ್ರಿಯ ವಿಜ್ಞಾನಸಾಹಿತ್ಯ ರಚನಾ ಕಮ್ಮಟ’ ನನ್ನ ಬರಹಗಳಿಗೆ ನಿರ್ದಿಷ್ಟತೆಯನ್ನು ತಂದು ಕೊಟ್ಟಿದೆ. ಬಾಲವಿಜ್ಞಾನ ನನ್ನ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದೆ. ಕಳೆದ ಕೆಲವು ವರ್ಷಗಳಿಂದ ಬಾಲವಿಜ್ಞಾನ, ಜೀವನ ಶಿಕ್ಷಣ, ಟೀಚರ್, ಗುಬ್ಬಚ್ಚಿ ಗೂಡು, ಶಿಕ್ಷಣ ಸಂಪದ, ಪ್ರಜಾವಾಣಿ, ವಿಜಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ ಜನಪ್ರಿಯ ವಿಜ್ಞಾನ ಬರಹಗಳ ಗುಚ್ಛವೇ ‘ವಿಜ್ಞಾನದಲೆಯ ಬೆಳಕು’ ಎನ್ನುತ್ತಾರೆ ಲೇಖಕ ಲಿಂಗರಾಜ ರಾಮಾಪೂರ.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Related Books