ಮರದೊಳಗಣ ಕಿಚ್ಚು

Author : ರಹಮತ್ ತರೀಕೆರೆ

Pages 312

₹ 200.00




Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040

Synopsys

ಆರಂಭ, ಪ್ರಮಾಣ, ತೊಡಕು, ನಿರ್ಮಾಣ ಎಂಬ ನಾಲ್ಕು ಭಾಗಗಳಿವೆ. ಮೊದಲ ಭಾಗದಲ್ಲಿ ಪ್ರತಿಸಂಸ್ಕೃತಿ ಅಧ್ಯಯನದ ತಾತ್ವಿಕ ಚರ್ಚೆಯಿದೆ. ಎರಡನೇ ಭಾಗದಲ್ಲಿ ಪ್ರತಿಸಂಸ್ಕೃತಿ ಮೂಡುವಿಕೆಗೆ ಹಿನ್ನೆಲೆಯಾಗಿರುವ ನಿಂತ ನೆಲದ ಚರಿತ್ರೆಯನ್ನು ಕಟ್ಟಿಕೊಳ್ಳುವ ಪ್ರಯತ್ನವಿದೆ. ನೂರನೇ ಪ್ರಕರಣದಲ್ಲಿ ಪ್ರತಿಸಂಸ್ಕೃತಿಯ ತೊಡಕುಗಳಾಗಿ ಬರುವ ಸಂಗತಿಗಳ ವಿವರಣೆಯಿದೆ. ಕೊನೆಯ ಪ್ರಕರಣದಲ್ಲಿ ಪ್ರತಿಸಂಸ್ಕೃತಿ ರೂಪುಗೊಳ್ಳುವ ಬಗೆಗಳ ವಿಶ್ಲೇಷಣೆಯಿದೆ. ಸಾಹಿತ್ಯ ಆಸಕ್ತಿಯುಳ್ಳು ಸಾಮಾನ್ಯ ಓದುಗರನ್ನು ಗಮನದಲ್ಲಿ ಇಟ್ಟುಕೊಂಡು ಸಂವಾದ ಸಾಧ್ಯವಾಗುವಂತೆ ರಚಿಸಲಾದ ಕೃತಿಯಿದು. 1994ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ಗ್ರಂಥದ ಎರಡನೇ ಆವೃತ್ತಿಯನ್ನು 2007ರಲ್ಲಿ ಬೆಳ್ಳಿಚುಕ್ಕಿ ಟ್ರಸ್ಟ್ ಪ್ರಕಟಿಸಿತ್ತು. ಬೆಳಗಾವಿಯಲ್ಲಿ ನಡೆದ ಎರಡನೇ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದ ಕನ್ನಡದ ನೂರು ಮೇರು ಕೃತಿಗಳ ಸರಣಿಯಲ್ಲಿ ಮೂರನೇ ಆವೃತ್ತಿ ಪ್ರಕಟವಾಗಿತ್ತು. ಇದು ನಾಲ್ಕನೇ ಆವೃತ್ತಿ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books