ವಚನ ಸಂವಾದ

Author : ರಘುಶಂಖ ಭಾತಂಬ್ರಾ

Pages 104

₹ 60.00




Year of Publication: 2009
Published by: ಬಸವ ಪ್ರಕಾಶನ
Address: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಗುಲ್ಬರ್ಗ.

Synopsys

ಡಾ. ರಘುಶಂಖ ಭಾತಂಬ್ರಾ ಅವರ ಬಹುದೊಡ್ಡ ಆಸಕ್ತಿಯ ಕ್ಷೇತ್ರ ಹನ್ನೆರಡನೇ ಶತಮಾನದ ಶರಣರ ಜೀವನ. ಆಧುನಿಕ ಜೀವ ಜಗತ್ತಿನ ನೆಲೆಗಳು ವಚನಗಳಲ್ಲೂ ಕಾಣಸಿಗುತ್ತವೆ ಎಂಬುದನ್ನು ಬಿಂಬಿಸುವ ಕೃತಿ ವಚನಕಾರರು ಪ್ರತಿಪಾದಿಸಿದ ಕಾಯಕ ನಿರ್ವಹಣೆ, ಸತ್ಯಶುದ್ಧ ಜೀವನ ವಿಧಾನಗಳು ಸಮರ್ಥವಾದ ಆರ್ಥಿಕ ನೀತಿಯನ್ನು ಚರ್ಚಿಸುತ್ತದೆ.  ಲಾಭಾಂಶ, ಹಂಚಿಕೆಯ ಪ್ರಕ್ರಿಯೆಗಳೂ ಸಮಾನ ರೇಖೆಯಲ್ಲಿ ನಡೆಯುತ್ತಿದ್ದುದರಿಂದ ಸಮಾಜದಲ್ಲಂದು ಬಡತನ, ದಾರಿದ್ರ್ಯಗಳು ಹೇಗೆ ಕಾಣೆಯಾದವು ಎಂಬ ದಟ್ಟ ವಿವರಗಳನ್ನು ನೀಡುತ್ತದೆ. ಅಲ್ಲದೆ ವಚನಕಾರರ ಆರೋಗ್ಯ ಕುರಿತ ಚಿಂತನೆಗಳ ಕುರಿತೂ ಗ್ರಂಥ ದೃಷ್ಟಿ ಹಾಯಿಸುತ್ತದೆ. 

ಶರೀರ ರಚನೆ, ನಾಟಿ ವೈದ್ಯಕೀಯ ಪದ್ಧತಿ, ರೋಗ ರುಜಿನಗಳ ಔಷಧೋಪಚಾರವನ್ನು ಕುರಿತು ವಚನಕಾರರು ಸೂಚ್ಯವಾಗಿ ಹೇಳಿದ್ದರೂ ಸತ್ಯಶುದ್ಧ ಶಿವಾಚಾರ ಸಂಪನ್ನರಾಗಿ ಬಾಳಬೇಕು. ನಿರಂತರ ಕಾಯಕಜೀವಿಗಳಾಗಬೇಕು, ನಿರೋಗಿಗಳಾಗಿರಬೇಕೆಂಬ ಅರ್ಥಪೂರ್ಣ ಪರಿಕಲ್ಪನೆಯನ್ನು ಬಿಂಬಿಸಲಾಗಿದೆ. ಒಟ್ಟಾರೆ ವಚನಕಾರರ ಸಮತಾವಾದದ ಆಶಯಗಳನ್ನು ಅಧ್ಯಯನ ಮಾಡುವ ಯತ್ನ ಕೃತಿಯದ್ದು. 

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books