ಸೂಜಿ ಮತ್ತು ದಾರ

Author : ಶೂದ್ರ ಶ್ರೀನಿವಾಸ್

Pages 142

₹ 150.00




Year of Publication: 2016
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ಹೇಮಂತ ಸಾಹಿತ್ಯ ಪ್ರಕಾಶನ, ಬೆಂಗಳೂರು

Synopsys

ಶೂದ್ರ ಶ್ರೀನಿವಾಸ್ ಕನ್ನಡ ಸಾಹಿತ್ಯದಲ್ಲಿ ಜಾತಿ ವ್ಯವಸ್ಥೆಯಲ್ಲಿ ನೊಂದ ಜನರ ದ್ವನಿಯಾಗಿದ್ದಾರೆ.ಲೇಖನ ಮತ್ತು ಕಥೆಗಳಿಗೆ ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವಿದೆ.ಲಂಕೇಶ್, ಅನಂತಮೂರ್ತಿ ಅವರ ಅಂಕಣಗಳಿಗೆ ಒಂದು ಒಳಗಣ್ಣಿತ್ತು. ಓದುಗರಿಗೆ ಸದಾ ಕಾದು ಓದುವ ತವಕ. ತಾವು ಕಂಡ ನೋಟವನ್ನು ಹಿಗ್ಗಿಸುವ, ದಾಖಲಿಸುವ ಉತ್ಸಾಹವನ್ನು ಅವರ ಅಂಕಣಗಳು ಕಾಯ್ದುಕೊಂಡಿದ್ದವು.ಪ್ರಸ್ತುತ ಈ ಪುಸ್ತಕದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣ, ಸಿನಿಮಾ, ಸಂಗೀತ ವಿಷಯಗಳ ಕುರಿತು ಚರ್ಚಿಸಲಾಗಿದೆ.ವಾಗ್ವಾದ, ತಕರಾರು, ಪ್ರೀತಿ, ಮುನಿಸುಗಳೆಲ್ಲವನ್ನು ಈ ಸಂಕಲನವು ಹೊಂದಿದ್ದು ಓದುಗರಿಗೆ ಹತ್ತಿರವಾಗಿದೆ.

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Related Books