ಯಾರ ಮುಲಾಜೂ ಇಲ್ಲದೆ

Author : ಹರಿಯಪ್ಪ ಪೇಜಾವರ

Pages 140

₹ 130.00




Published by: ಶ್ರೇಯಸ್ ಪ್ರಕಾಶನ ಮಂಗಳೂರು
Phone: 94812 26150

Synopsys

ಕತೆ ಮತ್ತು ಕಾವ್ಯ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿರುವ ಹರಿಯಪ್ಪ ಅತ್ಯುತ್ತಮ ಗದ್ಯ ಲೇಖಕ. ಲೇಖನ, ವಿಮರ್ಶೆ, ಪತ್ರಗಳು, ಅನಿಸಿಕೆ, ಲಹರಿ, ಚಿಂತನೆ ಇವೆಲ್ಲವುಗಳನ್ನು ಈ ಕೃತಿಯೂ ಒಳಗೊಂಡಿರುತ್ತದೆ. ಕೃತಿಯಲ್ಲಿ ಒಟ್ಟು ಐದು ವಿಭಾಗಗಳಿವೆ. ಮೊದಲನೆಯದು ಲೇಖನಗಳಿಗೆ ಸೀಮಿತವಾಗಿದೆ. ಪರಂಪರಾಗತ ಭಾಷಾ ಸ್ವರೂಪಕ್ಕೆ ಡೈನಮೈಟ್ ಇಡುವುದೆಂದರೆ ಪರ್ಯಾಯವಾದ ಒಂದು ಪ್ರಗತಿಶೀಲ ಜೀವಪರ ಸಂಸ್ಕೃತಿಯನ್ನು ನಿರ್ಮಿಸುವುದು ಎಂದು ಲೇಖಕರು ವಿವರಿಸಿದ್ದಾರೆ. ಈ ಕೃತಿಯ ಇನ್ನೊಂದು ಅತ್ಯಂತ ಕುತೂಹಲಕರವಾದ ಲೇಖನ ಗಣಪತಿ ಬಂಡಾಯದ ನೇತಾರ.  ನಾವು ಆರಾಧಿಸುವ ಗಣಪತಿ ಯಾ ವಿನಾಯಕ ಬೇಟೆ ಹಾಗೂ ರೈತ ಜನಾಂಗದ ಮುಖಂಡನಾಗಿದ್ದ ಎನ್ನುವ ಅಂಶವನ್ನು ಪ್ರಸ್ತಾಪಿಸುತ್ತಾ ಅದಕ್ಕೆ ಬೇಕಾದ ದಾಖಲೆಗಳನ್ನು ಈ ಬರಹದಲ್ಲಿ ನೀಡುತ್ತಾರೆ. ದ್ರಾವಿಡ ಗಣಪತಿಯನ್ನು ಹೇಗೆ ಆರ್ಯನನ್ನಾಗಿಸಲಾಗಿದೆ ಮತ್ತು ಆತನ ಚರಿತ್ರೆಯನ್ನು ಹೇಗೆ ವಿಸ್ಮತಿಗೆ ಒಯ್ಯಲಾಗಿದೆ ಎನ್ನುವ ಸ್ಫೋಟಕ ಅಂಶವನ್ನು ಹೇಳುವ ಪ್ರಯತ್ನ ಮಾಡುತ್ತಾರೆ. ಈ ವಿಭಾಗದಲ್ಲಿರುವ ಸುಮಾರು 15 ಲೇಖನಗಳು ತನ್ನ ವಿಷಯ ವೈವಿದ್ಯತೆಯಿಂದ ಸೆಳೆಯುತ್ತವೆ. ಭಾಗ ಎರಡನ್ನು ವ್ಯಕ್ತಿ ಚಿತ್ರಕ್ಕೆ ಸೀಮಿತವಾಗಿಸಿದ್ದಾರೆ. ಇಡ್ಯ, ರಾಮಚಂದ್ರದೇವರ ಬದುಕಿನ ಚಿತ್ರಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಭಾಗ 3ರಲ್ಲಿ ಕವಿ ಪೇಜಾವರ ಹರಿಯಪ್ಪ ಜೊತೆಗಿನ ಸಂದರ್ಶನಕ್ಕೆ ಸೀಮಿತವಾದರೆ, ಭಾಗ 4ರಲ್ಲಿ ವಿವಿಧ ಕೃತಿ, ಸಾಹಿತ್ಯ, ಸಮಸ್ಯೆಗಳಿಗೆ ಸಂಬಂಧಿಸಿದ ಪತ್ರಗಳಿವೆ. ಭಾಗ 5ರಲ್ಲಿ ಬರ್ಟಂಡ್ ರಸೆಲ್ ಅವರ ನೈಸ್ ಪೀಪಲ್ ಕೃತಿಯನ್ನು ಅನುವಾದಿಸಿ ಕೊಡಲಾಗಿದೆ.

About the Author

ಹರಿಯಪ್ಪ ಪೇಜಾವರ

ಲೇಖಕ ಹರಿಯಪ್ಪ ಪೇಜಾವರ ಮೂಲತಃ ಮಂಗಳೂರಿನ ಬಜ್ಪೆ ಸಮೀಪದ ಪೇಜಾವರದವರು. ಪೇಜಾವರ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ, ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಮಂಗಳಗಂಗೋತ್ರಿಯಲ್ಲಿ ಎಂ.ಎ ಹಾಗೂ 1989ರಿಂದ ಮಂಗಳೂರಿನ ಶ್ರೀಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಇಂಗ್ಲಿಷ್  ಅಧ್ಯಾಪಕರಾಗಿದ್ದಾರೆ.  ಕೃತಿಗಳು: ಕವನಸಂಕಲನಗಳು- ವ್ಯಕ್ತಿ ಮತ್ತು ವ್ಯಕ್ತ(1986), ನೆನದದ್ದು ಹೆಚ್ಚಾಗಿ(2001), ಕಲಾವಿದನ ಕೊಲೆ(2012) , ಕಥಾಸಂಕಲನ: ಮಾನ ಮತ್ತು ಇತರ ಕಥೆಗಳು(1996), ಇನ್ನೊಂದು ಗ್ರಹ (2015) ಹಾಗೂ ಲೇಖನ ಸಂಗ್ರಹ- ಯಾರ ಮುಲಾಜೂ ಇಲ್ಲದೆ(2016).  ಪ್ರಶಸ್ತಿ ಗೌರವ: ಇವರ ವ್ಯಕ್ತಿ ಮತ್ತು ವ್ಯಕ್ತ ಸಂಕಲನಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮಾನ ಮತ್ತು ಇತರ ಕಥೆಗಳಿಗೆ ವರ್ಧಮಾನ ...

READ MORE

Related Books