ಪರಿಗ್ರಹಣ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 280

₹ 140.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಹಳೆಗನ್ನಡ ಸಾಹಿತ್ಯದಿಂದ ಹಿಡಿದು ಚುಟುಕು ಸಾಹಿತ್ಯದವರೆಗೆ ಆಳವಾದ ಅಧ್ಯಯನ, ಆಸಕ್ತಿ ಬೆಳೆಸಿಕೊಂಡ ಡಾ. ಸಿ.ಪಿ.ಕೃಷ್ಣಕುಮಾರ್ ರವರು ಬೇರೆಬೇರೆ ಸಂದರ್ಭದಲ್ಲಿ ರಚಿಸಿದ ಲೇಖನಗಳನ್ನು ಈ ಕೃತಿಯಲ್ಲಿ ಒಟ್ಟುಗೂಡಿಸಿ ಕೊಡಲಾಗಿದೆ. ಲೇಖಕರ ಅಪಾರ ಜ್ಞಾನ ಪಾಂಡಿತ್ಯ, ಸಾಹಿತ್ಯ ಪ್ರೀತಿ ಈ ಕೃತಿಯಲ್ಲಿ ಎದ್ದು ಕಾಣುತ್ತದೆ. ಪಂಪ, ರನ್ನ, ಜನ್ನರಂತಹ ಮಹಾಕವಿಗಳು ಹಾಗೂ ವಚನ ಸಾಹಿತ್ಯ, ದಾಸ ಸಾಹಿತ್ಯ, ಹೊಸಗನ್ನಡದ ಸಾಹಿತ್ಯ ಚಳುವಳಿಗಳ ಕುರಿತು ತಮ್ಮದೇ ದೃಷ್ಟಿಕೋನದಲ್ಲಿ ಸರಳವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books