ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-2

Author : ಕೆ. ಗೋಕುಲನಾಥ

Pages 236

₹ 150.00




Published by: ವಿಜಯ ಪ್ರಕಾಶನ
Address: ವಿಜಯಪುರ
Phone: 9342018470

Synopsys

‘ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-2’ ಕೃತಿಯು ಕೆ. ಗೋಕುಲನಾಥ್ ಅವರ ಲೇಖನಗಳ ಸಂಕಲನವಾಗಿದೆ. ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಸಾಮಾಜಿಕ ಆಂದೋಲನದ ದೃಷ್ಟಿಯಿಂದ ಹರಿದಾಸರು ಮತ್ತು ಅವರ ಸಾಹಿತ್ಯ ಪ್ರಮುಖವಾಗುತ್ತದೆ, ಅದುವೇ ಅವರ ವೈಶಿಷ್ಟ್ಯ ಕೂಡ. ಅವರ ನೆಲೆ ಮೊದಲಿನವರಂತೆ ಸಾರಾಸಗಟಾಗಿ ವೈದಿಕ ವಿರೋಧಿ ನೆಲೆಯಾಗಿರಲಿಲ್ಲ. ಬಹುಸಂಖ್ಯಾತರು ನಂಬಿದ ಶ್ರದ್ಧೆ ಇಟ್ಟ ಧರ್ಮದೊಂದಿಗೆ ಸಾಗುತ್ತ ಅದರಲ್ಲಿ ಕಂಡುಬರುವ ಕುಂದುಕೊರತೆಗಳಷ್ಟು ನ್ಯೂನತೆಗಳನ್ನು ಶ್ರದ್ಧೆಗೆ ಪಟ್ಟು ಬೀಳದಂತೆ ಎತ್ತಿ ತೋರಿಸಿ, ಅವರ ಮನ ಒಪ್ಪುವಂತೆ ಮಾಡಿದರು ಎಂದು ಈ ಕೃತಿಯು ವಿಶ್ಲೇಷಿಸುತ್ತದೆ. ಈ ನಾಲ್ಕು ಸಂಪುಟಗಳಲ್ಲಿ ಜಾತಿ ಭೇದವಿಲ್ಲದ ಸಮಾಜದಲ್ಲಿಯ ಮೂಢನಂಬಿಕೆ, ತಪ್ಪು ಆಚರಣೆಗಳನ್ನು ತಿದ್ದಲು ಪ್ರಯತ್ನಿಸುವುದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಪ್ರೇರೇಪಿಸುವ ನೀತಿ ಭೋದಕ ವಿಚಾರಗಳ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.

About the Author

ಕೆ. ಗೋಕುಲನಾಥ

ಕೆ. ಗೋಕುಲನಾಥ್ ಅವರು ಮೈಸೂರಿನವರು. ಸ್ನಾತಕೋತ್ತರ ಪದವೀಧರರು ದಾಸ ಸಾಹಿತ್ಯದ ಹಿರಿಯ ಸಂಶೋಧಕ.  ‘ವಿಜಯದಾಸರ ಜೀವನ ಮತ್ತು ಕೃತಿಗಳ ಸಮೀಕ್ಷೆ’ ಗೋಕುಲನಾಥರ ಪಿಎಚ್.ಡಿ ಅಧ್ಯಯನದ ವಿಷಯ.  ದಾಸ ಸಾಹಿತ್ಯದ ದಾಖಲೀಕರಣ ಮತ್ತು ಪ್ರಚಾರವನ್ನೇ ಬದುಕಿನ ಮಾರ್ಗವಾಗಿಸಿ ಕೊಂಡಿರುವರು. .ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ದಾಸ ಸಾಹಿತ್ಯ ರಚನೆ, ಪ್ರವಚನ, ಪ್ರಬಂಧ ಮಂಡನೆ, ಉಪನ್ಯಾಸಗಳೇ ಇವರ ಬದುಕಿನ ನಡೆ. 19 ಕೃತಿಗಳನ್ನು ರಚಿಸಿದ್ದು, ರಾಷ್ಟ್ರ-ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ 100ಕ್ಕೂ ಅಧಿಕ ಪ್ರಬಂಧಗಳ ಮಂಡಿಸಿದ್ದಾರೆ. ಕೀರ್ತನ ಕಮ್ಮಟಗಳ ಆಯೋಜನೆ,  25ಕ್ಕೂ ಹೆಚ್ಚು ಉಪನ್ಯಾಗಳು, 76 ಪುಸ್ತಕ ವಿಮರ್ಶೆ,  ಸಮಗ್ರ ದಾಸಸಾಹಿತ್ಯ ಯೋಜನೆಯ ಸಂಪಾದಕತ್ವದಲ್ಲಿಯೂ ಆಸಕ್ತಿ.    ಕೃತಿಗಳು : ...

READ MORE

Related Books