ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು (ಕನಕ ಸಾಹಿತ್ಯ ದರ್ಶನ ಸಂಪುಟ-4)

Author : ಸುಧಾಕರ

Pages 856

₹ 150.00




Year of Publication: 2012
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡಭವನ, ಜೆ.ಸಿ.ರಸ್ತೆ, ಬೆಂಗಳೂರು

Synopsys

ಕನಕದಾಸರ ಸುಮಾರು ಮುನ್ನೂರಕ್ಕೂ ಹೆಚ್ಚಿನ ಕೀರ್ತನೆಗಳು ಈ ಕೃತಿಯಲ್ಲಿವೆ. ಸಾಮಾನ್ಯ ಓದುಗರಿಗೆ ಸಹಾಯಕವಾಗಲೆಂದು ಲೇಖಕರು ಪ್ರತಿಯೊಂದು ಕೀರ್ತನೆಯ ಭಾವ ಮತ್ತು ಅರ್ಥಗಳನ್ನು ಆಯಾ ಕೀರ್ತನೆಗಳ ಅಡಿಯಲ್ಲಿಯೇ ಕೊಟ್ಟಿದ್ದಾರೆ.

ಈ ಕೃತಿಯಲ್ಲಿ ದೇವತಾಸ್ತುತಿ, ಗುರುಸ್ತುತಿ, ಆತ್ಮಚರಿತ್ರೆ, ಜ್ಞಾನ ಭಕ್ತಿ ವೈರಾಗ್ಯ, ಹರಿಸರ್ವೋತ್ತಮ ಹರಿದಾಸ ಮಹತಿ, ಸಮಾಜ ಚಿಂತನೆ: ನೀತಿ ಬೋಧನೆ, ವೈಚಾರಿಕತೆ, ಕೃಷ್ಣಲೀಲೆ, ದಶಾವತಾರ ಲೀಲೆಗಳು, ತಾತ್ವಕತೆ, ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು, ಅನುಭಾವದ ನಿಗೂಢ ಮುಂಡಿಗೆಗಳು, ಉದಯರಾಗಗಳು, ಉಗಾಭೋಗಗಳು ಹಾಗೂ ಕೀರ್ತನೆಗಳ ಅಕಾರಾದಿಯ ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ.

About the Author

ಸುಧಾಕರ
(31 May 1933 - 24 August 2013)

ಕಥೆಗಾರ ಪ್ರೊ. ಸುಧಾಕರ ಅವರು ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕಿನ ಎಣ್ಣೆಗೆರೆ ಗ್ರಾಮದವರು. ಗ್ರಾಮೀಣ ಬದುಕಿನ ಸಂಗತಿಗಳ ಆಧರಿಸಿ ಕತೆ ಕಟ್ಟುವ ಸುಧಾಕರ ಅವರು  ಸೃಜನಶೀಲ ಬರವಣಿಗೆಯ ಜೊತೆಗೆ ಜಾನಪದ ಮತ್ತು ಶಿಷ್ಟ ಸಾಹಿತ್ಯ ಅಧ್ಯಯನಗಳಲ್ಲಿ ಆಸಕ್ತರಾಗಿದ್ದರು. ಕಣ್ಣಿ ಕಿತ್ತ ಹಸು, ಗರಿಕೆಬೇರು, ಬಾಡುಬಕ್ಕನ ಮುಳ್ಳು (ಕಥಾ ಸಂಕಲನಗಳು), ಕುವೆಂಪು ಸಾಹಿತ್ಯ ಸಮೀಕ್ಷೆ, ಕನಕದಾಸರ ರಾಗಿರಾಮಾಯಣದರ್ಶನ (ವಿಮರ್ಶಾ ಲೇಖನಗಳು), ಜನಪದ ಬೆಡಗಿನ ವಚನಗಳು, ನಮ್ಮ ಸುತ್ತಿನ ಗಾದೆಗಳು, ಶಿವಗಂಗೆ ಸುತ್ತಿನ ಗಾದೆಗಳು, ಜಾನಪದ ಕಲಬೆರಕೆತನ (ಜಾನಪದ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಎರಡು ಕಥೆಗಳಿಗೆ ಬಹುಮಾನ ಬಂದಿತ್ತು. ...

READ MORE

Related Books