ಹರಿದಾಸ ಸಿರಿದೀಪ್ತಿ

Author : ಸುರೇಶ ಎಲ್. ಜಾಧವ

Pages 150

₹ 160.00




Year of Publication: 2020
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಲೇಖಕ ಡಾ. ಸುರೇಶ್ ಎಲ್. ಜಾಧವ ಅವರ ಕೃತಿ-ಹರಿದಾಸ ಸಿರಿದೀಪ್ತಿ. 15ನೇ ಶತಮಾನದಲ್ಲಿ ಹರಿದಾಸರು ತಮ್ಮ ನವವಿಧ ಭಕ್ತಿಯಿಂದ ಶ್ರೀಹರಿಯ ಧ್ಯಾನ ಗುಣಗಾನ, ಪಾದಸೇವನ ಹಾಗೂ ಕೀರ್ತನೆಗಳ ಮೂಲಕ ಅಂತರಂಗ-ಬಹಿರಂಗ ಶುದ್ಧಿಗೆ ಮಹತ್ವ ನೀಡಿದ್ದರು. ಶ್ರೀಪಾದರಾಯರಿಂದ ಹಿಡಿದು ಜಗನ್ನಾಥದಾಸರು, ಗೋಪಾಲದಾಸರು, ಹಾಗೂ ವಿಜಯದಾಸರವರೆಗೆ ಹಲವು ಘಟ್ಟಗಳಲ್ಲಿ ದಾಸ ಚಳವಳಿ ಶಕ್ತಿಯುತವಾಗಿ ಪರಿಪುಷ್ಪಗೊಂಡು ಬೆಳೆದಿದೆ.

ಹರಿದಾಸರಿಗೆ ಯಾವುದೇ ಜಾತಿಯ ನಿರ್ಬಂಧನೆಗಳಿರಲಿಲ್ಲ. ಅಲ್ಲಿ ಕನಕದಾಸರಂತಹ ಶ್ರೇಷ್ಠ ಭಕ್ತರು ಹಾಗೂ ರಾಮದಾಸರಂತಹ ಶ್ರೇಷ್ಠ ವಿಜ್ಞಾನಿಗಳು ಅಲ್ಪಸಂಖ್ಯಾತ ವರ್ಗದಲ್ಲಿ ಹುಟ್ಟಿ ವಿಷ್ಣುಮಹಿಮೆ ಹಾಗೂ ದಶಾವತಾರ ಮಹಿಮೆ ಸಾರಿದ್ದಾರೆ. ಇದರಿಂದ ಕನ್ನಡ ಸಾಹಿತ್ಯ ಭಂಡಾರ ಶ್ರೀಮಂತವಾಗಿದೆ. ವಚನ ಹಾಗೂ ದಾಸ ಸಾಹಿತ್ಯಗಳು ವಿಶ್ವದ ಜನತೆಯ ಕಣ್ಣು ತೆರೆಸುತ್ತವೆ.ಇಲ್ಲಿ ವ್ಯಕ್ತಿ ಪರಿಶೋಧನ ಜೊತೆಗೆ ಸಮಾಜದ ಪರಿಶೋಧನೆಗೂ ಮಾರ್ಗ ರೂಪಿತವಾಗಿದೆ. ಅಲ್ಲದೆ, ಹರಿದಾಸ ಸಾಹಿತ್ಯ ವಚನ ಸಾಹಿತ್ಯದoತೆ ತತ್ವ- ಸತ್ವಗಳನ್ನು ಮೈಗೂಡಿಸಿಕೊಂಡಿದ್ದು ಲೋಕಕಲ್ಯಾಣ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ.

ಈ ಕೃತಿಯಲ್ಲಿ ಏಳು ಲೇಖನಗಳಿವೆ. ದಾಸಸಾಹಿತ್ಯದಲ್ಲಿ ಸಮಾಜಮುಖಿ ಧೋರಣೆ, ಹರಿದಾಸ ಸಾಹಿತ್ಯದಲ್ಲಿ ವಿಶ್ವಮಾನವ ಚಿಂತನೆ, ದಾಸ ಸಾಹಿತ್ಯ ಮತ್ತು ಜೀವನ ಮೌಲ್ಯಗಳು,ಕೀರ್ತನ ಸಾಹಿತ್ಯ ಮತ್ತು ಸಂಸ್ಕೃತಿ, ದಾಸಸಾಹಿತ್ಯ :ಸಾಮರಸ್ಯ ಧರ್ಮಸಹಿಷ್ಣುತೆ,ಕೀರ್ತನ ಸಾಹಿತ್ಯ ಮತ್ತು ಭಾಷೆ,ಹಾಗೂ ಕಲ್ಯಾಣ ಕರ್ನಾಟಕದ ಕೀರ್ತನ ಸಾಹಿತ್ಯ,ಎಂಬ ಲೇಖನಗಳನ್ನು ಒಂದು ಕಡೆ ಸಂಕಲಿಸಲಾಗಿದೆ.

About the Author

ಸುರೇಶ ಎಲ್. ಜಾಧವ

ಲೇಖಕ ಡಾ. ಸುರೇಶ ಎಲ್. ಜಾಧವ ಅವರು ,ಮೂಲತಃ ಕಲಬುರಗಿಯವರು. ಇಲ್ಲಿಯ ನೂತನ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ, ಗುಲಬಗಾ ವಿ.ವಿ.ಯಿಂದ ಎಂ.ಎ ಪದವೀಧರರು. ನಯಸೇನನ ಧರ್ಮಾಮೃತದ ಭಾಷಿಕ ಅಧ್ಯಯನ ಕುರಿತು ಸಲ್ಲಿಸಿದ ಪ್ರಬಂಧಕ್ಕೆ ಎಂ.ಫಿಲ್ ಹಾಗೂ ಹರಿದಾಸರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ಪಡೆದಿದ್ದಾರೆ. ಸದ್ಯ, ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ಸಂಸ್ಕೃತಿ, ಸಾಹಿತ್ಯ, ವಿಮರ್ಶೆ, ಸಂಶೋಧನೆ ವಿಷಯದಲ್ಲಿ ಆಸಕ್ತಿ. ಯುಜಿಸಿ ಪ್ರಾಯೋಜಕತ್ವದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಷಾ ಚಳವಳಿ ಕುರಿತು ಪ್ರಬಂಧ ಮಂಡಿಸಿದ್ದಾರೆ. ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ. ...

READ MORE

Related Books