ದಾಸ ಸಾಹಿತ್ಯ

Author : ವಿ. ಸೀತಾರಾಮಯ್ಯ

Pages 220

₹ 25.00




Year of Publication: 1987
Published by: ಐಬಿಎಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.

Synopsys

ಸಾಹಿತಿಗಳಾದ ವಿ. ಸೀತಾರಾಮಯ್ಯ ಹಾಗೂ ಪ್ರೊ ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿದ `ದಾಸ ಸಾಹಿತ್ಯ' ಕೃತಿಯಲ್ಲಿ ದಾಸ ಸಾಹಿತ್ಯದ ಉಗಮದಿಂದ ಹಿಡಿದು ದಾಸ ಪರಂಪರೆಯ ಆಚರಣೆ-ಸಂಪ್ರದಾಯಗಳು-ಬರೆಹಗಳ ತನಕವೂ ವ್ಯಾಪಕ ಅಧ್ಯಯನದ ಮೂವರು ಲೇಖಕರ ಚಿಂತನಾ ರೂಪದ ಲೇಖನಗಳು ಇಲ್ಲಿವೆ.

ಸಾಹಿತ್ಯದಲ್ಲಿ ದಾಸ ಸಾಹಿತ್ಯದ ಸ್ಥಾನವೇನು?, ಕಾವ್ಯವೆನ್ನಬಹುದಾದ ದಾಸರ ಪದಗಳು ಸಂಖ್ಯೆಯಲ್ಲಿ ಎಷ್ಟಿವೆ?, ಸಾಮಾನ್ಯರ ಜನಜೀವನಕ್ಕೆ ದಾಸ ಸಾಹಿತ್ಯದ ಮಾರ್ಗದರ್ಶನವೇನು? ಯಾವ ಯಾವ ದಾಸರು ಎಷ್ಟೆಷ್ಟು ಪದ್ಯಗಳನ್ನು ರಚಿಸಿದ್ದಾರೆ ಈ ಎಲ್ಲದರ ಗಂಭೀರ ಚಿಂತನೆಯಾಗಿ ಕೃತಿ ಒಡಮೂಡಿದೆ.

ಪುರಂದರದಾಸರವರೆಗಿನ ಹರಿದಾಸ ಸಾಹಿತ್ಯ (ಎನ್. ಕೆ. ಕುಲ್ಕರ್ಣಿ), ವಿಜಯನಗರದ ಈಚಿನ ದಾಸ ಸಾಹಿತ್ಯ (ಎಸ್.ಕೆ. ರಾಮಚಂದ್ರರಾವ್), ದಾಸ ಸಾಹಿತ್ಯದ ಕೊಡುಗೆ (ಕೆ. ಸಂಪದ್ಗಿರಿರಾವ್) ಹಾಗೂ ಸಮೀಕ್ಷೆ (ವಿ. ಸೀತಾರಮಯ್ಯ) ಹೀಗೆ ನಾಲ್ಕು ಲೇಖನಗಳನ್ನು ಒಳಗೊಂಡಿದೆ.

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Related Books