ಶ್ರೀಪಾದರಾಜರ ಕೃತಿಗಳು

Author : ಜಿ. ವರದರಾಜರಾವ್

Pages 269

₹ 15.00




Year of Publication: 1987
Published by: ಕನ್ನಡ ಅಧ್ಯಯನ ಸಂಸ್ಥೆ
Address: ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಡಾ. ಜಿ. ವರದರಾಜ ರಾವ್ ಅವರ ಕೃತಿ-ಶ್ರೀಪಾದರಾಜರ ಕೃತಿಗಳು. ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯವೂ ಒಂದು ಪ್ರಮುಖ ಘಟ್ಟ. ಸುಮಾರು 200ಕ್ಕೂ ಅಧಿಕ ಹರಿದಾಸರು ತಮ್ಮದೇ ನೆಲೆಯಲ್ಲಿ ಸಾಮಾಜಿಕ ಜಾಗೃತಿಗೆ ಶ್ರಮಿಸಿದ್ದಾರೆ. ಮೊದಲಿನಿಂದಲೂ ದಾಸ ಸಾಹಿತ್ಯ ಪರಂಪರೆಯು ಮೌಖಿಕವಾಗಿದೆ. ಆದ್ದರಿಂದ, ಹರಿದಾಸರ ಸಾಹಿತ್ಯ-ಕೀರ್ತನೆ ಸಂಗ್ರಹ, ವಿಮರ್ಶೆ ಇತ್ಯಾದಿ ಕೆಲಸ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಮಾತ್ರವಲ್ಲ; ಇತರೆ ಧರ್ಮದ ಭಕ್ತಿ ಪಂಥದೊಂದಿಗೂ ತೌಲನಾತ್ಮಕ ಅಧ್ಯಯನವೂ ಆಗಬೇಕಿದೆ. ಈ ನಿಟ್ಟಿನಲ್ಲಿ ಶ್ರೀ ಪಾದರಾಜರ ಕೃತಿಗಳ ಸಂಗ್ರಹಣೆಯಂತಹ ಕೆಲಸ ಮಹತ್ವದ್ದು ಹರಿದಾಸ ಸಾಹಿತ್ಯದ ಶಾಸ್ತ್ರೀಯ ಅಧ್ಯಯನದ ಯೋಜನೆಗೆ ಇಂತಹ ಕೃತಿಗಳು ಪೂರಕವಾಗಿ ಕೆಲಸ ಮಾಡುತ್ತವೆ. ಶ್ರೀಪಾದರಾಜರ ಕೀರ್ತನೆಗಳ ಈ ಆವೃತ್ತಿಯನ್ನು ತಾಳೆಗರಿ, ಕಾಗದದ ಪ್ರತಿ ಹಾಗೂ ಮುದ್ರಿತ ಪ್ರತಿಗಳಿಂದ ಕೂಡಿದ 112 ಆಕರಗಳ ಆಧಾರದಿಂದ ಈ ಕೃತಿ ಸಿದ್ಧಪಡಿಸಿದೆ.

About the Author

ಜಿ. ವರದರಾಜರಾವ್
(03 January 1918 - 01 November 1987)

ಕವಿ ಜಿ.ವರದರಾಜರಾವ್‌ ಅವರು 1918 ಜನವರಿ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಇವರು ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ, ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕರ್ನಾಟಕ ರಾಜ್ಯ ಸರ್ಕಾರದ  ಕನ್ನಡ ಭಾಷಾಂತರ ಕಚೇರಿಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.  ಪುರಂದರ ದಾಸರ ಕೀರ್ತನೆಗಳು, ಸೀತಾ ಪರಿತ್ಯಾಗ ಸಮಸ್ಯೆಗಳು, ಕಲಿಕರ್ಣ, ಮಹಾಸತಿ ಕಸ್ತೂರಿ ಬಾ, ಕುಮ್ಮಟ ಕೇಸರಿ, ತೊರಣ, ಸೆರೆಯಾಳು, ತೊಟ್ಟಿಲು, ವಿಜಯದಶಮಿ, (ಕವನ ಸಂಗ್ರಹಗಳು), ಪಡಿನುಡಿ, ಸಾಹಿತ್ಯ ಸಾನಿಧ್ಯ, ಅಪ್ರತಿಮ ವೀರ ಚರಿತಂ, ಕುಮಾರ ರಾಮನ ...

READ MORE

Related Books