ಹಾರಾಡುವ ತಟ್ಟೆಗಳು

Author : ಜೆ.ಆರ್. ಲಕ್ಷ್ಮಣರಾವ್

Pages 136

₹ 63.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಲೇಖಕ ಜೆ.ಆರ್. ಲಕ್ಷ್ಮಣರಾವ್ ಅವರ ಕೃತಿ-ಹಾರಾಡುವ ತಟ್ಟೆಗಳು. ವಿಜ್ಞಾನ ವಿಷಯದ ಲೇಖನ ಸಂಕಲನ. ವೈದ್ಯಕೀಯ ಪಂಥಗಳು, ಪ್ರಳಯದ ಕಲ್ಪನೆ, ವಿಜ್ಞಾನ ಮತ್ತು ಧರ್ಮ, ಸೌರಶಕ್ತಿಯ ಶೇಖರಣೆ, ಅಂತರ್ಜಲ, ಪರಮಾಣು ಸ್ಥಾವರಗಳು ಮತ್ತು ಪರಿಸರ, ಜೀವ ಪ್ರಪಂಚದಲ್ಲಿ ನೈಟ್ರೋಜನ್, ದೋಸೆ ಮತ್ತು ವಿಜ್ಞಾನ - ಇವೇ ಮುಂತಾದ ಅಧ್ಯಯನ ಯೋಗ್ಯ ಲೇಖನಗಳು  ಈ ಕೃತಿಯಲ್ಲಿ ಒಳಗೊಂಡಿವೆ. 

About the Author

ಜೆ.ಆರ್. ಲಕ್ಷ್ಮಣರಾವ್
(21 January 1921 - 29 December 2017)

ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೆ.ಆರ್‌. ಲಕ್ಷ್ಮಣರಾವ್ ಎಂದೇ ಚಿರಪರಿಚಿತರು. 1921 ಜನವರಿ 21 ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರ ರಾವ್ ಮತ್ತು ತಾಯಿ ನಾಗಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಸಿದ ಅವರು  ಪ್ರೌಢ ಶಾಲೆಯ ಅಭ್ಯಾಸ ದಾವಣಗೆರೆಯಲ್ಲಿ ಪೂರ್ಣಗೊಳಿಸಿದರು. ಈಗ ಯುವರಾಜ ಕಾಲೇಜು ಎಂದು ಕರೆಯಲಾಗುವ ’ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್’ ಅಧ್ಯಯನ ಮುಂದುವರೆಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ರಸಾಯನ ಶಾಸ್ತ್ರದಲ್ಲಿ ಎಮ್ಮೆಸ್ಸಿ ಪದವಿ ಪಡೆದರು. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯಾರಂಭ ಮಾಡಿದ ಅವರು ಬೆಂಗಳೂರಿನ ಸೇಂಟ್ರಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ...

READ MORE

Reviews

ಹೊಸತು- ಅಕ್ಟೋಬರ್‌-2005

ಇಪ್ಪತ್ತು ವೈಜ್ಞಾನಿಕ ಲೇಖನಗಳ ಸಂಗ್ರಹ ಈ ಕೃತಿ, ವೈಜ್ಞಾನಿಕ ದೃಷ್ಟಿ, ಪರಿಸರ, ಪರಮಾಣು ಶಕ್ತಿ, ಸಂಕೀರ್ಣ - ಎಂಬ ನಾಲ್ಕು ಭಾಗಗಳಲ್ಲಿ ಬರಹಗಳಿವೆ. ವೈಜ್ಞಾನಿಕ ಸಂಗತಿಗಳನ್ನು ತಟ್ಟಗಳು ಪರಿಣಾಮಕಾರಿಯಾಗಿ, ಖಚಿತವಾಗಿ ಮತ್ತು ಸರಳವಾಗಿ ಬರೆಯುವ ಜೆ. ಆರ್. ಲಕ್ಷ್ಮಣ ರಾವ್ 'ಜನಪ್ರಿಯ ವಿಜ್ಞಾನ' ಬರಹಗಾರರಲ್ಲಿ ಬಹಳ ಮುಖ್ಯರು. ಇವರ ಬಹುಪಾಲು ಲೇಖನಗಳು ಯಾವುದೋ ವಿಜ್ಞಾನದ ಮಾಹಿತಿ ಕೊಡುವುದಕ್ಕಿಂತ ಹೆಚ್ಚಾಗಿ ವಿಜ್ಞಾನವು ಸಮಾಜದ ಒಳಿತಿಗಾಗಿ ದುಡಿಯಬೇಕೆಂಬ ಹಂಬಲವನ್ನು ಹೊಂದಿರುತ್ತವೆ. ಪ್ರಳಯದ ಕಲ್ಪನೆ, ಅಂತರ್ಜಲ, ಪರಮಾಣುಶಕ್ತಿಯನ್ನು ಕುರಿತ ಬರಹಗಳಲ್ಲಿ ವೈಜ್ಞಾನಿಕ ಮನೋಧರ್ಮದ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸುತ್ತಾರೆ. ವಿಜ್ಞಾನದ ಸದುಪಯೋಗದಲ್ಲಿ ಜನಸಾಮಾನ್ಯರು ವಹಿಸಬೇಕಾದ ಎಚ್ಚರದ ಬಗ್ಗೆಯೂ ಲೇಖಕರು ಗಮನ ಸೆಳೆಯುತ್ತಾರೆ. ಕೆಲವು ಪಾರಿಭಾಷಿಕ ಪದಗಳು ತಕ್ಷಣ ಅರ್ಥವಾಗುವುದಿಲ್ಲ. ಅವುಗಳ ಪರ್ಯಾಯ ಇಂಗ್ಲಿಷ್ ಪದಗಳನ್ನು ಸೂಚಿಸಬಹುದಿತ್ತು.

Related Books