ವಿಶ್ವದಲ್ಲಿ ನಾವು ಏಕಾಂಗಿಗಳೇ?

Author : ಎಚ್.ಆರ್‌. ಕೃಷ್ಣಮೂರ್ತಿ

Pages 96

₹ 120.00

Buy Now


Year of Publication: 2019
Published by: ನವಕರ್ನಾಟಕ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 9480686862

Synopsys

ನಮ್ಮ ಸೌರವ್ಯೂಹದ ಹೊರಗೆ, ಬಾಹ್ಯಾಕಾಶದಲ್ಲಿ ಭೂಮಿಯಂತಹ ಅಸಂಖ್ಯ ಗ್ರಹಗಳಿದ್ದು, ಅಂತಹ ಅನೇಕ ಗ್ರಹಗಳಲ್ಲಿ ಮಾನವರಷ್ಟೇ ಅಥವಾ ಮಾನವರಿಗಿಂತ ಮುಂದುವರೆದಿರುವ ಜೀವಿಗಳಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಳೆದ 60 ವರ್ಷಗಳಿಂದ ನಡೆಯುತ್ತಿರುವ ಅನ್ಯಲೋಕ ಜೀವಿಗಳ ಹುಡುಕಾಟದ ಎಲ್ಲ ಆಯಾಮಗಳ, ಎಲ್ಲ ಸವಾಲುಗಳ ಸಮಗ್ರ ಪರಿಚಯವನ್ನು ಇಲ್ಲಿ ಮಾಡಿಕೊಟ್ಟಿದ್ದಾರೆ ಖ್ಯಾತ ವಿಜ್ಞಾನ ಲೇಖಕ ಡಾ. ಎಚ್. ಆರ್. ಕೃಷ್ಣಮೂರ್ತಿ.

About the Author

ಎಚ್.ಆರ್‌. ಕೃಷ್ಣಮೂರ್ತಿ

ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಹೆಚ್ಚುವರಿ ಮಹಾನಿದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ ಲೇಖಕರು, ಸಂವಹನಕಾರರು ಹಾಗೂ ಪ್ರಾಧ್ಯಾಪಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಕಲ್ಪವೃಕ್ಷದ ಜಾಡು ಹಿಡಿದು, ಪರಿಸರ, ನಮ್ಮ ಮರಗಳು ಮುಂತಾದವು. ಇವರಿಗೆ ವಿಜ್ಞಾನ ಸಾಹಿತ್ಯ ಪ್ರಶಸ್ತಿ, ಶ್ರೇಷ್ಠ ವಿಜ್ಞಾನ ಲೇಖಕ ಪ್ರಶಸ್ತಿ, ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ವಿಜ್ಞಾನ ಸಂವಹನ ಪ್ರಶಸ್ತಿ, ಜೀವಮಾನ ಸಾಧನೆಯ ಪ್ರಶಸ್ತಿ ಮುಂತಾದವು.  ...

READ MORE

Reviews

ಈ ಬ್ರಹ್ಮಾಂಡದಲ್ಲಿ ನಮ್ಮ ಭೂಮಿಯ ಮೇಲಿರುವಂತೆ, ಇತರ ಪ್ರದೇಶದಲ್ಲಿ ಜೀವಿಗ ಇವೆಯೆ ಎಂಬ ಪ್ರಶ್ನೆಯು ನಾಗರಿಕ ಮಾನವನಷ್ಟೇ ಪುರಾತನ ಎನ್ನಬಹುದು. ಈಚಿನ ದಶಕಗಳಲ್ಲಿ ನಾಸಾದೇ ಮೊದಲ್ಗೊಂಡು ಹಲವು ಸಂಸ್ಥೆಗಳು, ಆಶಾಹಿಗಳು ವಿಶದ ಇತರ ಗ್ರಹಗಳಲ್ಲಿ ಇರಬಹುದಾದ ಜೀವಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಿದ್ದುಂಟು. ಆದರೂ ಅನ್ಯಗ್ರಹ ಜೀವಿಗಳ ಇರವು ಇನ್ನೂ ಖಚಿತಗೊಂಡಿಲ್ಲ ಅನ್ಯ ಲೋಕ ಜೀವಿಗಳಿಗಾಗಿ ಅನ್ವೇಷಣೆಯ ಕುರಿತ ಲೇಖನಗಳನ್ನು ಒಳಗೊಂಡ ಈ ಪುಸ್ತಕ ಕನ್ನಡ ವೈಜ್ಞಾನಿಕ ಸಾಹಿತ್ಯಕ್ಕೆ ಬಹು ಮುಖ್ಯ ಕೊಡುಗೆ. ಕನ್ನಡದಲ್ಲಿ ವಿಜ್ಞಾನದ ವಿಷಯಗಳ ಕುರಿತಾದ ಉತ್ತಮ ಪುಸ್ತಕಗಳ ಸಂಖ್ಯೆ ಕಡಿಮೆಯೇ; ಆ ಕೊರತೆಯನ್ನು ಈ ಪುಸ್ತಕ ತುಸು ಮಟ್ಟಿಗೆ ತುಂಬಿಕೊಡಬಲ್ಲದು. ಭೂಮಿಯ ಮೇಲೆ ಜೀವಿಯ ಉಗಮದಿಂದ ಹಿಡಿದು, ಬಾಹ್ಯಾಕಾಶದಲ್ಲಿ ಬುದ್ದಿವಂತ ಜೀವಿಗಳ ಸಾಧ್ಯತೆಯ ಕುರಿತು ವಿವರವಾಗಿ, ವಿಷದವಾಗಿ ಚರ್ಚಿಸುವ ಏಳು ಲೇಖನಗಳು ಇಲ್ಲಿವೆ. ಹೆಸರಾಂತ ವಿಜ್ಞಾನ ಬರಹಗಾರ ಎಚ್.ಆರ್. ಕೃಷ್ಣಮೂರ್ತಿಯವರ ಬಹು ಮೌಲ್ಯ ಉಳ್ಳ ಪುಸ್ತಕ ಇದು. ಮಕ್ಕಳಿಗೂ ದೊಡ್ಡವರಿಗೂ ಸಮಾನವಾಗಿ ಇಷ್ಟವಾಗಬಲ್ಲದು. 

22-12-2019

ಕೃಪೆ : ವಿಶ್ವವಾಣಿ

ಕಥೆ ಕಟ್ಟುವ ಶೈಲಿಗಳು ಹಲವು. ಅವುಗಳಲ್ಲಿ ಬದುಕಿನ ಅನುಭವದಿಂದ ಕಟ್ಟಿಕೊಡುವ ಕಥನ ಅಥವಾ ಬರಹಗಳು ಆಪ್ತಭಾವ ಮೂಡಿಸುತ್ತವೆ. ಬದುಕಿನಲ್ಲಿ ನಡೆದ ಯಾವುದೋ ಘಟನೆಗಳು, ಅಂದಿನ ಸ್ಥಿತಿ–ಗತಿ, ವ್ಯವಸ್ಥೆ, ಸ್ಥಳೀಯ ಭಾಷಾ ಸೊಗಡು ಪರಿಚಯಿಸುವಲ್ಲಿ ಬರಹಗಾರರು ಜಾಣ್ಮೆ ವಹಿಸಿದರೆ ಮತ್ತು ಪಾತ್ರಗಳನ್ನು ಕಟ್ಟುವಲ್ಲಿ ಸೂಕ್ಷ್ಮತೆ ಕಾಯ್ದುಕೊಂಡರೆ ಆ ಕಥೆ ಅಥವಾ ಬರಹ ಅಲ್ಲಿ ಮೊದಲ ಗೆಲುವು ಸಾಧಿಸಿದಂತೆ. ಲೇಖಕ ಬಸು ಬೇವಿನಗಿಡದ ಅವರ ‘ನೆರಳಿಲ್ಲದ ಮರ’ ಕಥಾ ಸಂಕಲನದಲ್ಲೂ ಭಾಷಾ ಸೊಗಡು, ಪಾತ್ರಗಳ ಸೂಕ್ಷ್ಮತೆ ಅಡಗಿದೆ. ಇದರಲ್ಲಿ ಎಂಟು ಕಥೆಗಳಿವೆ. ಜನಸಾಮಾನ್ಯರ ಬದುಕಿನ ಅಸಮಾನ್ಯ ಸ್ಥಿತಿ–ಗತಿಗಳನ್ನು ಇಲ್ಲಿನ ಕಥೆಗಳ ಪಾತ್ರಗಳಲ್ಲಿ ಕಾಣಬಹುದು. ಮನುಷ್ಯ ಸಂಬಂಧಗಳ ಪ್ರಸಕ್ತ ಕಾಲಮಾನದ ಸ್ಥಿತಿ; ಮೌಢ್ಯ, ಸ್ವಾರ್ಥಕ್ಕೆ ಸಿಲುಕಿ ನರಳುವ ವ್ಯಕ್ತಿಯ ಸ್ಥಿತಿ, ಕೌಟುಂಬಿಕ ಬಿರುಕು ಮತ್ತು ಅವಹೇಳನದ ಮಾತುಗಳ ಪರಿಚಯ ‘ನೆರಳಿಲ್ಲದ ಮರ’ದಲ್ಲಿ ಓದಿಗೆ ದಕ್ಕುತ್ತದೆ. ಬದುಕಿನಲ್ಲಾಗುವ ಹೊಸ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನೋಭಾವದಲ್ಲಾಗುವ ತೊಡಕುಗಳು, ಹೊಸತು– ಹಳೆಯದರ ಸಂಘರ್ಷವನ್ನು ‘ತುಳುಕಿ ಹೋಗಿತ್ತ’ ಕಥೆ ಚಿತ್ರಿಸಿದೆ. ಎಂಟೂ ಕಥೆಗಳಲ್ಲೂ ವಿಭಿನ್ನತೆ ಇದೆ.

15 ಡಿಸೆಂಬರ್‌ 2019 

ಕೃಪೆ : ಪ್ರಜಾವಾಣಿ

Related Books