ಆಕಾಶದ ಅದ್ಭುತಗಳು

Author : ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

Pages 171

₹ 115.00




Year of Publication: 2016
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ, ಗಾಂಧಿ ನಗರ, ಬೆಂಗಳೂರು-560009
Phone: 40114455

Synopsys

’ಆಕಾಶದ ಅದ್ಬುತಗಳು’ ಪಾಲಹಳ್ಳಿ ವಿಶ್ವನಾಥ್ ಅವರ ಖಗೋಳ ವಿದ್ಯಮಾನಗಳು ಕುರಿತ ಪ್ರಶ್ನೋತ್ತರವಾಗಿದೆ. ಖಗೋಳದ ಬಗ್ಗೆ ವಿದ್ಯಾರ್ಥಿಗಳು ಮತ್ತು ಆಸಕ್ತರು ಕೇಳಬಹುದಾದಂತಹ ಪ್ರಶ್ನೆಗಳನ್ನು ಊಹಿಸಿ ಅವುಗಳಿಗೆ ಉತ್ತರ ಕೊಡಲಾಗಿದೆ. ಪುಸ್ತಕವು ಸೌರಮಂಡಲ, ನಕ್ಷತ್ರಗಳು, ವಿಶ್ವ ಮತ್ತು ಮಾನವ ಮತ್ತು ಖಗೋಳ ವಿಚಾರಗಳನ್ನು ಒಳಗೊಂಡಿವೆ. ಖಗೋಳದಲ್ಲಿ ಹೊಸದಾಗಿ ಆಸಕ್ತಿ ಹುಟ್ಟಿರುವವರು ಮತ್ತು ಕೆಳ ತರಗತಿಗಳ ವಿದ್ಯಾರ್ಥಿಗಳು ಮೊದಲ ಮತ್ತು ಕಡೆಯ ಆಧ್ಯಾಯಗಳಿಂದ ತಮ್ಮ ಓದನ್ನು ಪ್ರಾರಂಭಿಸಬಹುದು, ಆನಂತರ ನಿಧಾನವಾಗಿ ಎರಡನೆಯ ಮತ್ತು ಮೂರನೆಯ ಅಧ್ಯಾಯಗಳನ್ನು ಓದಬಹುದು. ಸ್ವಾಭಾವಿಕವಾಗಿ ಖಗೋಳದಲ್ಲಿ ಮೊದಲನೆಯ ಆಸಕ್ತಿಯ ವಿಷಯ ಭೂಮಿಯ ಚಲನೆ, ಗ್ರಹಗಳು, ಸೂರ್ಯ ಇತ್ಯಾದಿ ಆಗಿರುತ್ತವೆ. ಈ ಪುಸ್ತಕದಲ್ಲಿನ ಕೆಲವು ವಿಷಯಗಳು ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಅನಿಸಬಹುದು. ಆದರೆ ಕೆಲವು ವಿದ್ಯಾರ್ಥಿಗಳು ಪಠ್ಯಪ್ರಸ್ತಕಗಳಿಗಿಂತ ಹೆಚ್ಚು ಓದಿರುತ್ತಾರೆ. ಅಂತಹವರಿಗೆ ನಕ್ಷತ್ರಗಳು ಮತ್ತು ವಿಶ್ವ ಹೆಸರಿನ ಅಧ್ಯಾಯದಲ್ಲಿನ ಹಲವಾರು ವಿಷಯಗಳು ಇಷ್ಟವಾಗಿ ಮುಂದಿನ ಓದಿಗೆ ದಾರಿ ತೋರಿಸಬಹುದು. ಖಗೋಳದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಭೌತವಿಜ್ಞಾನ ಅನಿವಾರ್ಯವಾಗಿದೆ. ಆದ್ದರಿಂದ ಗುರುತ್ವಾಕರ್ಷಣೆ, ಬೆಳಕು ಇತ್ಯಾದಿ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಒಳ್ಳೆಯದು. ಈ ಪುಸ್ತಕದಲ್ಲಿ ಕೆಲವು ಕಡೆ ಕನ್ನಡ ಪದಗಳ ಜೊತೆ ಇಂಗ್ಲಿಷ್ ಹೆಸರುಗಳನ್ನೂ (ಉದಾ: ಗ್ಯಾಲಕ್ಸಿ ಇತ್ಯಾದಿ) ಉಪಯೋಗಿಸಲಾಗಿದೆ. ಈ ಪದಗಳ ಪರಿಚಯವಿದ್ದರೆ ಮುಂದಿನ ಓದೂ ಸುಲಭವಾಗಬಹುದು ಎಂಬುದು ಮುಖ್ಯ ಉದ್ದೇಶ. ಪುಟದಲ್ಲಿ ಮೊದಲು ಕಾಣಿಸುವ ಚಿತ್ರವನ್ನು ಚಿತ್ರ 1 ಎಂದೂ, ಅನಂತರ ಬರುವ ಚಿತ್ರಗಳನ್ನು ಚಿತ್ರ 2, ಚಿತ್ರ ಎಂದು ಹೆಸರಿಸಿದೆ’ ಎನ್ನುತ್ತಾರೆ ಲೇಖಕ ಪಾಲಹಳ್ಳಿ ವಿಶ್ವನಾಥ್.

About the Author

ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...

READ MORE

Related Books