ಯಾಮಿನಿಯ ಯಾತ್ರಿಕರು

Author : ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

Pages 192

₹ 180.00




Year of Publication: 2022
Published by: ವಿಕಾಸ ಪ್ರಕಾಶನ
Address: ಬೆಂಗಳೂರು

Synopsys

ಹಿರಿಯ ಲೇಖಕ ಪಾಲಹಳ್ಳೀ ವಿಶ್ವನಾಥ ಅವರು ರಚಿಸಿದ ಕೃತಿ-ಯಾಮಿನಿಯ ಯಾತ್ರಿಕರು. ವಿಜ್ಞಾನ ಲೇಖನಗಳ ಸಂಕಲನವಿದು. ಬಾಹ್ಯಾಕಾಶ ವಿಶೇಷವಾಗಿ ನಕ್ಷತ್ರ ಪುಂಜಗಳು, ನಕ್ಷತ್ರಗಳ ವಿಂಗಡಣೆ, ನಕ್ಷತ್ರಗಳ ದೂರ ಇತ್ಯಾದಿ ಕುರಿತಂತೆ ಈವರೆಗೆ ನಡೆದ ಸಂಶೋಧನೆಗಳು, ಈ ಕ್ಷೇತ್ರದಲ್ಲಿ ಗಣನೀಯವಾಗಿ ಸಂಶೋಧನೆ ಮಾಡಿದ ವಿಜ್ಞಾನಿಗಳು ಸೇರಿದಂತೆ ವೈಜ್ಞಾನಿಕವಾದ ಮಾಹಿತಿಗಳನ್ನು ಒಳಗೊಂಡ ಕೃತಿ ಇದು. ವಿಜ್ಞಾನ ಬರಹಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪಾಲಹಳ್ಳಿ ವಿಶ್ವನಾಥ ಅವರ ಈ ಕೃತಿಯು ಅವರ ಅಧ್ಯಯನದ ಆಳಕ್ಕೆ ಕನ್ನಡಿ ಹಿಡಿಯುತ್ತದೆ. ಇಂತಹ ವಿಷಯಗಳನ್ನು ಆಧರಿಸಿ ಬರೆಯುತ್ತಿದ್ದ ಅಂಕಣಗಳ ಬರಹಗಳನ್ನು ಕೃತಿಯಲ್ಲಿ ಸಂಕಲಿಸಲಾಗಿದೆ.

 ಪರಿವಿಡಿಯಲ್ಲಿ ಐಸಾಕ್ ನ್ಯೂಟನ್: ವಿವಿಧ ಗೀಳುಗಳು , ನ್ಯೂಟನ್ ಮಹಾಶಯನನ್ನು ಕೆಣಕಬೇಡಿ, ಸಂಗೀತಗಾರ ವಿಲಿಯಂ ಹರ್ಷಲ್ , ಆಲ್ಬರ್ಟ್ ಐನ್‌ಸ್ಟೈನ್: ಕುಟುಂಬ ಜೀವನ ,ಐನ್‌ಸ್ಟೈನ್‌: ಮೇಧಾವಿಯ ಮೆದುಳು, ಫೈನ್‌ಮನ್ : ಹಾಸ್ಯ ಪ್ರಜ್ಞೆ, ಸ್ಟೀಫನ್ ಹಾಕಿಂಗ್ : ದೈಹಿಕ ದೌರ್ಬಲ್ಯಗಳ ವಿಜಯಿ, ಯುವ ಕುಲೀನ ವಿಜ್ಞಾನ ವಿಕ್ರಮ್ ಸಾರಾಭಾಯ್ ಚರಿತ್ರೆ, ಮೂಲಭೂತ ವಿಜ್ಞಾನದ ವಿವಿಧ ಮುಖಗಳು, ಸೂರ್ಯಕೇಂದ್ರೀಯ ಸಿದ್ಧಾಂತದ ವಿಕಸನ , ಪುರಾತನ ಪಾಶ್ಚಾತ್ಯ ನಾಗರಿಕತೆಗಳಲ್ಲಿ ಖಗೋಳವಿಜ್ಞಾನ, ಹಿರೋಷಿಮಾ ಪರಮಾಣು ಬಾಂಬ್‌ಚರಿತ್ರೆ ಚಂದ್ರನ ಮೇಲೆ ಮಾನವ: ಅರ್ಧ ಶತಮಾನದ ಹಿಂದಿನ ನೆನಪುಗಳು, ಫರ್ಮಿ ಸಮಸ್ಯೆ ಮತ್ತುಏಲಿಯನ್ಸ್ ಸಿನಿಮಾಗಳು ,ಯಾಮಿನಿಯ ಯಾತ್ರಿಕರು  ಪರಿವಿಡಿಯಲ್ಲಿ  ವಿವರಿಸಲಾಗಿದೆ. 

About the Author

ಪಾಲಹಳ್ಳಿ ವಿಶ್ವನಾಥ್ (ಪಿ.ಆರ್. ವಿಶ್ವನಾಥ್)

ವಿಜ್ಞಾನ ಲೇಖಕ, ಅಂಕಣಕಾರ ಪಿ.ಆರ್. ವಿಶ್ವನಾಥ್ ಅವರು ಮೂಲತಃ ಬೆಂಗಳೂರಿನವರು. 1942ರಲ್ಲಿ ಜನಿಸಿದ ಪಿ.ಆರ್. ವಿಶ್ವನಾಥ್ ಅವರು ಪಾಲಹಳ್ಳಿ ವಿಶ್ವನಾಥ್ ಎಂದೇ ಪ್ರಸಿದ್ಧರಾದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪೂರೈಸಿದ ಅವರು ಆ್ಯನ್ ಆರ್ಬರ್ ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದರು. ಆನಂತರ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ.ಐ.ಎಫ್.ಆರ್)ಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಭಾರತೀಯ ಖಭೌತ ಸಂಸ್ಥೆ (ಐ.ಐ.ಎ) ಸಂದರ್ಶಕ ಪ್ರಾಧ್ಯಾಪಕರು; ಕ್ಯಾಲಿಫೋರ್ನಿಯ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು, ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ...

READ MORE

Related Books