ನಕ್ಷತ್ರ ವೀಕ್ಷಣೆ

Author : ಜಿ.ಟಿ. ನಾರಾಯಣರಾವ್

Pages 128

₹ 40.00




Year of Publication: 2002
Published by: ಪ್ರಸಾದ್ ಏಜೆನ್ಸೀಸ್
Address: #907/5, 4ನೇ ಮುಖ್ಯ ರಸ್ತೆ, 1ನೇ ಕ್ರಾಸ್, ವಿದ್ಯಾರಣ್ಯಪುರ, ಮೈಸೂರು - 570008
Phone: 0821340931

Synopsys

‘ನಕ್ಷತ್ರ ವೀಕ್ಷಣೆ’ ಕೃತಿಯು ಜಿ.ಟಿ ನಾರಾಯಣ ರಾವ್ ಅವರ ನಕ್ಷತ್ರ ವೀಕ್ಷಕರ ಕೈಪಿಡಿಯಾಗಿದೆ. ಪರಿವಿಡಿಯ ಅಧ್ಯಾಯಗಳು ಹೀಗಿವೆ : ಎಣಿಗೆ ನಿಲುಕದ ಬೆಳಕಿನ ಹುಡಿಗಳು, ಮೇಲೆ ಬಾನಬಟ್ಟಲು ಕೆಳಗೆ ನನ್ನ ತೊಟ್ಟಿಲು, ಧ್ರುವ ಮಾಣಿಕ್ಯದ ರಕ್ಷಕ ಭಲ್ಲೂಕಗಳು, ನಕ್ಷತ್ರ ಸಭಾಪತಿ ಧ್ರುವತಾರೆ, ಕುಂತೀದೇವಿಯ ದರ್ಶನ ಭಾಗ್ಯ, ಧ್ರುವ ನಕ್ಷತ್ರಕ್ಕೆ ಲಗ್ಗೆ ಹಾಕೋಣವೇ?, ಖಗೋಳದಲ್ಲಿ ಹೆದ್ದಾರಿಗಳು ವಿಪುವದ್ವ್ಯತ ಮತ್ತು ಯಾವ್ಯೋತ್ತರ, ಗಗನ ವೈಭವ ಸೂರ್ಯದೇವನ ಚೈತ್ರಯಾತ್ರೆ, ಖಗೋಳದಲ್ಲಿ ಕಡಿದ ಹೆದ್ದಾರಿ-ಕ್ರಾಂತಿ ವೃತ್ತ, ವಿರಾಟ್ ಪುರುಷನ ಉತ್ತರೀಯ, ಬಾನಿನಲ್ಲಿ ಹೆಗ್ಗುರುತುಗಳು ಮತ್ತು ಗಡಿಗೆರೆಗಳು, ಆಕಾಶ ಪಟ, ಬಾಂದಳದ ಸಂಕ್ಷಿಪ್ತ ಚಿತ್ರ, ಬಾ ಕರ್ತಾರನ ಕಮ್ಮಟಿಕೆ, ಇಳಿದು ಬಾ ತಾಯಿ ಇಳಿದು ಬಾ, ಚಂದ್ರನ ಮಾಸಿಕೆ ವರಿಸೆಗಳು, ಬೈಗಿನ ತಾರೆ ನಸುಕಿನ ನೀರೆ, ಬೆಂಕಿಗೆರೆ ಗೊಂಡೆತಲೆ ಧೂಮಲೀಲೆ, ಗಣನೆಗೆ ನಿಲುಕದ ಆಕಾಶ, ಬ್ರಹ್ಮಾಂಡಗಳ ಸಮುದಾಯವೇ ವಿಶ್ವ, ಬರಿಗಣ್ಣಿಗೆ ಕಾಣುವಂತೆ ಮೊದಲ 3.0 ಉಜ್ವಲ ನಕ್ಷತ್ರಗಳು, ಆಕಾಶದಲ್ಲಿ ದೂರ, ಕಾಲ ಮಾನಕಗಳು, ನಕ್ಷತ್ರ ಪುಂಜಗಳು, ದ್ವಾದಶ ರಾಶಿಗಳು, 27 ನಿತ್ಯ ನಕ್ಷತ್ರಗಳು, ಗ್ರಹಗೃಹ ನಿರ್ಣಯ, ಗ್ರಹಣಗಳು, ಕಾಲ, ದಿವಸಗಳ ಸಾಪ್ತಾಹಿಕ ಚಕ್ರ, ಭೂಮಿಯ ಆಕಾರ, ವಿಶ್ವ ವಿಹಾರ, ವಿಷಯ ಪುಟ ಸೂಚಿ ಇವೆಲ್ಲವನ್ನು ಒಳಗೊಂಡಿದೆ.

About the Author

ಜಿ.ಟಿ. ನಾರಾಯಣರಾವ್
(30 January 1926)

ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...

READ MORE

Awards & Recognitions

Related Books