ಹುಲ್ಲೆಹಾಡು

Author : ಕುರುವ ಬಸವರಾಜ್

Pages 118

₹ 22.00




Year of Publication: 2003
Published by: ಅರುಣೋದಯ ಪ್ರಕಾಶನ
Address: ಜೀವನರಾವ್ ಗಲ್ಲಿ, ರಾಮನಗರ-571511

Synopsys

‘ಹುಲ್ಲೆಹಾಡು’ ಲೇಖಕ ಕುರುವ ಬಸವರಾಜ್ ಅವರು ರಚಿಸಿರುವ ಹಾಡುಗಥೆ. ಈ ಕೃತಿಗೆ ಕಿ.ರಂ. ನಾಗರಾಜ ಅವರ ಬೆನ್ನುಡಿ ಬರಹವಿದೆ. ಮೊದಲಿನಿಂದ ಕೊನೆಯವರೆಗೆ ಕುತೂಹಲ ಹುಟ್ಟಿಸುತ್ತ ಈ ಕವಿತೆ ಬೆಳೆಯುತ್ತದೆ. ತುಂಬ ಸೂಕ್ಷ್ಮವಾಗಿ ಇಲ್ಲಿನ ಆವರಣ ಚಿತ್ರಿತವಾಗಿದೆ ಎನ್ನುತ್ತಾರೆ ಕೀರಂ. ಜೊತೆಗೆ ಮುಗ್ಧತೆ ಹಾಗೂ ಕ್ರೌರ್ಯಗಳು ಪರಸ್ಪರ ಚಿಂತಿತವಾಗಿರುವ ಇಲ್ಲಿನ ಕ್ರಮ ಆರ್ದ್ರತೆಯಿಂದ ಕೂಡಿದ್ದಾಗಿದೆ. ಪರಿಚಿತವಾದ ಸುಲಲಿತ ಪದಗಳ ಪ್ರಯೋಗದಿಂದ ಕವಿತೆಗೆ ತಡೆಯಿಲ್ಲದ ಹರಿವನ್ನು ತಂದುಕೊಟ್ಟಿದೆ. ರೂಪಕಗಳ ಮೂಲಕ ಬೆಳೆಯುವ ಈ ಕವಿತೆ ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿ ಗಾಢ ಪರಿಣಾಮವನ್ನೇ ಮೂಡಿಸುತ್ತದೆ. ಕಥೆಗೆ ತಕ್ಕ ಪ್ರಾಸ-ಅನುಪ್ರಾಸಗಳು ತುಂಬ ಸಹಜವಾಗಿ ಕವಿತೆಯಲ್ಲಿ ಮೈಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಕುರುವ ಬಸವರಾಜ್

ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ. ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು) ಸೆಳೆತ, ...

READ MORE

Related Books