ಮಡಿಲು

Author : ಬಸವರಾಜ ಹೊನಗೌಡರ

Pages 128

₹ 13.00
Year of Publication: 2022
Published by: ಕಲ್ಲಚ್ಚು ಪ್ರಕಾಶನ
Address: ಮಂಗಳೂರು
Phone: 9980072663

Synopsys

ಬಸವರಾಜ ಹೊನಗೌಡರ ಅವರ ಕಥಾ ಸಂಕಲನ ಮಡಿಲು.ಕೃತಿಯ ಬೆನ್ನುಡಿಯಲ್ಲಿ‘ ಸದಾ ಏನಾದರೊಂದು ಚಟುವಟಿಕೆಯಲ್ಲಿ ತೊಡಗುವ ಇವರು, ಸಂವೇದನಾಶೀಲ ಗುಣವುಳ್ಳವರು, ಎಲ್ಲರೊಂದಿಗೂ ಬೆರೆಯುವ ಸ್ನೇಹಜೀವಿ, ತನ್ನ ಸುತ್ತಲ ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ ಅಲ್ಲಿನ ವೈರುಧ್ಯಗಳ ವಿರುದ್ಧ ಒಳಗೊಳಗೆ ಮರುಗುವವರು. ಅಂತಹ ಮೃದು ಸ್ವಭಾವದ ವ್ಯಕ್ತಿತ್ವವೇ ಅವರಿಂದ ಸಮಾಜದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಅವರ ಮಡಿಲು” ಕಥಾ ಸಂಕಲನ ಪ್ರಸ್ತುತ ಸನ್ನಿವೇಶಕ್ಕೆ ಅತ್ಯಂತ ಅವಶ್ಯಕ ಎನ್ನುವಂತಿದೆ. ಅಂಥ ಉತ್ಕೃಷ್ಟ ಕಥೆಗಳನ್ನು ತಮ್ಮ ಮಡಿಲಿನಿಂದ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಅವರ ಈ ಕೃತಿ ಸಹೃದಯರ ಹೃದಯವನ್ನು ಹೊಕ್ಕು ಸಮಾಜದಲ್ಲಿನ ವಿಲಕ್ಷಣ ವ್ಯಕ್ತಿಗಳನ್ನು ಪರಿವರ್ತಿಸುವಂತಾಗಲಿ ಜೊತೆಗೆ ಅವರ ಬರವಣಿಗೆ ಶಕ್ತಿಯಿಂದ ಮತ್ತಷ್ಟು ಮೊಗದಷ್ಟು ಕಥೆಗಳು ಸಾಹಿತ್ಯ ಲೋಕಕ್ಕೆ ಹರಿದು ಬಂದು ನಮ್ಮ ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲಿ' ಎಂಬ ಮಾತುಗಳಿವೆ.

About the Author

ಬಸವರಾಜ ಹೊನಗೌಡರ

ಬಸವರಾಜ ಹೊನಗೌಡರ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದವರು. ವೃತ್ತಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕರು. ಪ್ರವೃತ್ತಿಯಿಂದ ಅತ್ಯುತ್ತಮ ಓದುಗರು, ಬರಹಗಾರರು. ತಮ್ಮ ಕಚೇರಿಯ ಒತ್ತಡದ ಕೆಲಸ ಕಾರ್ಯಗಳ ಮಧ್ಯೆಯೂ ಸಮಯವನ್ನು ಹೊಂದಿಸಿಕೊಂಡು ಓದುವುದನ್ನು ತಮ್ಮ ಮುಖ್ಯ ಹವ್ಯಾಸವನ್ನಾಗಿ ಮಾಡಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕಾವ್ಯ, ಕಾದಂಬರಿಗಳ ಓದುವ ಗೀಳನ್ನು ಬೆಳೆಸಿಕೊಂಡ ಇವರು, ಹಿಂದುಳಿದ ವರ್ಗಗಳ ಮಕ್ಕಳ ವಸತಿ ನಿಲಯದಲ್ಲಿನ ಮಕ್ಕಳೊಂದಿಗೆ ಸದಾ ಬೆರೆಯುತ್ತ ತಮ್ಮ ಜ್ಞಾನ ಸಂಪಾಧನೆಯ ಸಂಪತ್ತನ್ನು ಮಕ್ಕಳಿಗೆ ಧಾರೆ ಎರೆಯುತ್ತ ಅವರ ದೈಹಿಕ, ಭೌದ್ಧಿಕ," ಸಾಮಾಜಿಕ, ಸಂವೇಧನಾತ್ಮಕ ವಿಕಾಸಕ್ಕೆ ...

READ MORE

Related Books