ಸಿಂಧೂರ ರೇಖೆಯ ಮಿಂಚು

Author : ಪ್ರಸನ್ನಾ ವಿ. ಚೆಕ್ಕೆಮನೆ

Pages 188

₹ 170.00




Year of Publication: 2021
Published by: ಅಪರಂಜಿ ಪ್ರಕಾಶನ
Address: ಚಿಕ್ಕಮಗಳೂರು

Synopsys

‘ಸಿಂಧೂರ ರೇಖೆಯ ಮಿಂಚು’ ಪ್ರಸನ್ನ ವಿ. ಚೆಕ್ಕೆಮನೆ ಅವರ ನೀಳ್ಗತೆಗಳ ಸಂಕಲನವಾಗಿದೆ. 'ಇನ್ನೂ ನಿಂಗೆ ಬುದ್ಧಿ ಬಂದಿಲ್ಲ ಅಲ್ವಾ? ಇಂದು ಕೂಡ ಅವಳ ಬಳಗೇ ಹೋಗಿದ್ದು ಅಂತ ನಮಗೆ ಗೊತ್ತಿಲ್ಲ ಅಂತ ಭಾವಿಸ್ಬೇಡಾ" ಕೆಳಗಿನಿಂದ ಮಾವನ ದೊಡ್ಡ ದನಿ ಕೇಳೀ ಫಕ್ಕನೆ ಎಚ್ಚರವಾಯಿತು ಬೀಪ್ತಿಗೆ. ಓಹ್! ತಾನು ತುಂಬ ಹೊತ್ತು ಮಲಗಿಬಿಟ್ಟೆನೇ ಅಂತ ಗಡಬಡಿಸಿ ಎದ್ದವಳು ಗೋಡೆ ಗಡಿಯಾರದತ್ತ ದೃಷ್ಟಿ ಹಾಸಿದಾಗ ಐದೂ ಕಾಲು ಎಂದು ತೋಲಿಸುತ್ತಿತ್ತು. "ನಿನ್ನ ಹೆಂಡ್ತಿ ಇಲ್ಲರುವಾಗ ನೀನು ಅವಳನ್ನು ಹುಡುಕಿಕೊಂಡು ಹೋಗುವ ಕಾರಣವಾದರೂ ಏನಿತ್ತು? ನಿನ್ನ ಹೋದವನು ಬರುವುದು ಇಂದು! ಇದರ ಅರ್ಥವೇನು?" ಮಾವನ ದನಿ ಮತ್ತಷ್ಟು ಅಪ್ಪಆಸಿದಂತೆ ಕೇಳಸಿದಾಗ ಹಾಸಿಗೆಯಿಂದ ಎದ್ದು ಕಿಟಿಕಿಯ ಪಕ್ಕದಲ್ಲಿ ಬಂದು ನಿಂತಳು. ಮೊನ್ನೆ ತಾನೇ ನೂತನ ವಧುವಾಗಿ ಈ ಮನೆಯ ಹೊಸಿಲು ತುಳಿದು ಬಲಗಾಲಿಟ್ಟು ಒಳಗೆ ಬಂದವಳು ದೀಪ್ತಿ. ಕಾಲೇಜ್ ಪ್ರೊಫೆಸರ್‌ಗಳಾಗಿರುವ ಶ್ರೀಕಾಂತ್ ಹಾಗೂ ನೀರಜಾ ಇವರ ಏಕೈಕ ಪುತ್ರ ಶ್ರೇಯಸ್‌ನ ಮಡವಿ ಅವಳು. "ನಾನು ಈಗ ಮದುವೆ ಬೇಡ ಅಂದರೂ ಬಲವಂತವಾಗಿ ಮದುವೆ ಮಾಡಿಸಿದ್ದು ಯಾರು? ನಾನು ಮೊದಲೇ ಹೇಳಿಲ್ವಾ?" ಶ್ರೇಯಸ್‌ನ ದನಿ ಕೇಳಿಸಿದಾಗ ದೀಪ್ತಿಯ ಎದೆಯಲ್ಲಿ ಏನೋ ನಡುಕವುಂಟಾಯಿತು. 'ಛೇ..ಇವರಿಗೆ ಈ ಮದುವೆ ಇಷ್ಟವಿರಲಿಲ್ಲವೇ? (ಆಯ್ದ ಭಾಗ)

About the Author

ಪ್ರಸನ್ನಾ ವಿ. ಚೆಕ್ಕೆಮನೆ
(05 January 1979)

ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...

READ MORE

Related Books