Date: 26-03-2024
Location: ಬೆಂಗಳೂರು
"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವಾಗಿಸುತ್ತದೆ ಹಾಗೂ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ‘ಭುಜಂಗಾಸನ’ ಅಸ್ತಮಾ ರೋಗಿಗಳಿಗೆ ಉಪಯುಕ್ತವಾಗಿದ್ದು, ಸ್ತ್ರೀಯರ ಮುಟ್ಟಿನ ಸಮಸ್ಯೆಗೆ ಸೂಕ್ತವಾದ ಯೋಗವಾಗಿದೆ," ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.
ಚಕ್ರಾಸನ
ಚಕ್ರ- ಗಾಲಿ
ಆಸನ- ಭಂಗಿ
ಚಕ್ರಾಸನ ಮಾಡುವ ವಿಧಾನ:
ಮೊದಲು ಬೆನ್ನಿನ ಮೇಲೆ ಮಲಗಬೇಕು. ನಂತರ ಎರಡು ಮೊಣಕಾಲುಗಳನ್ನು ಮಡಿಚಿ ನಡುವೆ 1-2 ಅಡಿ ಅಂತರ ಇರಬೇಕು, ಎರಡು ಕೈಗಳನ್ನು ಮಡಿಚಬೇಕು ನಂತರ ಧೀರ್ಘವಾಗಿ ಉಸಿರು ತೆಗದುಕೊಂಡು, ನಿಧಾನವಾಗಿ ದೇಹವನ್ನು ಮೇಲಕ್ಕೆ ಎತ್ತಬೇಕು 20 ಸೆಂಕಡ್ ಗಳ ಕಾಲ ಇದ್ದು. ನಂತರ ಮೊದಲಿನ ಸ್ಥಿತಗೆ ಬರಬೇಕು.
ಚಕ್ರಾಸನದ ಪ್ರಯೋಜನೆಗಳು:
1) ಚಕ್ರಾಸನವು ವ್ಯಕ್ತಿಯನ್ನು ಶಕ್ತಿಯುತವಾಗಿಸುತ್ತದೆ.
2) ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
3) ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸುತ್ತದೆ.
4) ಭುಜಗಳನ್ನು ಮತ್ತು ಕೈಗಳನ್ನು ಶಕ್ತಿಯುತ್ತಗೊಳಿಸುತ್ತದೆ.
ಭುಜಂಗಾಸನ
ಈ ಆಸನ ಮಾಡುವಾಗ ಹೆಡೆ ಎತ್ತಿದ ಸರ್ಪದ ರೀತಿಯಲ್ಲಿ ದೇಹದ ಭಂಗಿ ಇರುವುದರಿಂದ ಇದನ್ನು ಭುಜಂಗಾಸನ ಎಂದು ಕರೆಯುತ್ತಾರೆ.
ಭುಜಂಗಾಸನ ಮಾಡುವ ವಿಧಾನ:
ಮೊದಲು ಹೊಟ್ಟೆ ಮೇಲೆ ಮಲಗಬೇಕು. ನಂತರ ಎರಡು ಕಾಲುಗಳನ್ನು ಜೋಡಿಸಿ ಎರಡು ಕೈಗಳನ್ನು ಎದೆಯ ಅಕ್ಕಪಕ್ಕದಲ್ಲಿ ಇಟ್ಟು ನಂತರ ಧೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ಎರಡು ಭುಜಗಳನ್ನು ನಿಧಾನವಾಗಿ ಮೆಲಕ್ಕೆ ಎತ್ತಬೇಕು. ಎರಡು ಮೊಣಕೈ ಬೆಂಡ್ ಆಗಿರಬೇಕು ನಂತರ 20 ಸೆಂಕೆಡ್ ಗಳ ಕಾಲ ಇದ್ದು ನಂತರ ಮೊದಲಿನ ಸ್ಥಿತಿಗೆ ಬರಬೇಕು.
ಭುಜಂಗಾಸನದ ಪ್ರಯೋಜನಗಳು:
1) ಈ ಆಸನವು ನಮ್ಯತೆಯನ್ನು ಹೆಚ್ಚಿಸಿ ಬೆನ್ನುಮೂಳೆಯ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತದೆ.
2) ಕೊಬ್ಬುನ್ನು ಕರಗಿಸುತ್ತದೆ.
3) ಅಸ್ತಮಾ ರೋಗಿಗಳಿಗೆ ಉಪಯುಕ್ತವಾಗಿದೆ.
4)ಹಾಗೆಯೇ ಸ್ತ್ರೀಯರ ಮುಟ್ಟಿನ ಸಮಸ್ಯೆ ಹಾಗು ಸಂತಾನೋತ್ಪತ್ತಿ ಸಮಸ್ಯೆ ಸುಧಾರಿಸುತ್ತದೆ.
5) ಈ ಆಸನವು ಹೃದಯ ಹಾಗೂ ಶ್ವಾಸಕೋಶಗಳನ್ನು ತೆರೆಯಲು ಸಹಾಯ ಮಾಡಿ, ಒತ್ತಡ ಹಾಗೂ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.
- ಚೈತ್ರಾ ಹಂಪಿನಕಟ್ಟಿ.
ಈ ಅಂಕಣದ ಹಿಂದಿನ ಬರಹಗಳು:
ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ
ನಾವಾಸನ ಹಾಗೂ ಪರಿವೃತ್ತ ಉತ್ಕಟಾಸನ
ಅರ್ಧಮತ್ಸ್ಯೇಂದ್ರಾಸನ ಮತ್ತು ವೀರಾಸನ
ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ
"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...
"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...
"ಅನುಭವದ ಸಾಮಾಜಿಕ, ಭೌತಿಕ ದಂದ್ವಗಳನ್ನು ಮೀರುವುದೇ ಅನುಭಾವ. ಅನುಭವ ಯಾವುದನ್ನು ನಂಬುತ್ತದೋ ಅದು ಆ ಕ್ಷಣದಲ್ಲಿ ಬ...
©2025 Book Brahma Private Limited.