ಜಾನು ಶೀರ್ಷಾಸನ ಮತ್ತು ಉತ್ಕಟಾಸನ

Date: 03-04-2024

Location: ಬೆಂಗಳೂರು


"ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು `ಜಾನು ಶೀರ್ಷಾಸನ' ಅತ್ಯುತ್ತಮ ಆಸನವಾಗಿದೆ. ‘ಉತ್ಕಟಾಸನ’ ಕೆಳ ಬೆನ್ನು ಮತ್ತು ಮುಂಡವನ್ನು ಬಲಪಡಿಸಲು ಸಹಾಯ ಮಾಡುವ ಆಸನವೇ ,"ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ಜಾನು ಶೀರ್ಷಾಸನ

ಜಾನು - ಮೊಣಕಾಲು
ಶಿರ - ತಲೆ
ಆಸನ - ಭಂಗಿ

ಜಾನು ಶೀರ್ಷಾಸನ ಮಾಡುವ ವಿಧಾನ :

ಮೊದಲು ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಬಲಗಾಲನ್ನು ಮಡಿಚಿ ಎಡ ತೊಡೆಯ ಭಾಗದಲ್ಲಿ ಇಡಬೇಕು ನಂತರ ಧೀರ್ಘಾವಾಗಿ ಉಸಿರನ್ನು ತೆಗೆದುಕೊಂಡು ಎರಡು ಕೈಗಳನ್ನು ಮೇಲಕ್ಕೆ ಎತ್ತಬೇಕು. ನಿಧಾನವಾಗಿ ಉಸಿರನ್ನು ಹೊರಗೆ ಬಿಡುತ್ತಾ ಎಡಗಾಲಿನ ತುದಿಯನ್ನು ಹಿಡಿದುಕೊಂಡು ಮುಂದಕ್ಕೆ ಭಾಗಬೇಕು, ತಲೆಯನ್ನು ಮೊಣಕಾಲಿಗೆ ತಾಗಿಸಬೇಕು ಮತ್ತು ಹೊಟ್ಟೆಯನ್ನು ಕಾಲಿಗೆ ತಾಗಿಸಬೇಕು, 20 ಸೆಂಕೆಂಡ್ ಗಳ ಕಾಲ ಇದ್ದು ನಂತರ ಮೊದಲಿನ ಸ್ಥಿತಿಗೆ ಬರಬೇಕು.

ಪ್ರಯೋಜನಗಳು:

1) ಈ ಆಸನವು ಇದು ಪಕ್ಕೆಲುಬಿನ ಮೂಳೆಗಳನ್ನು ಬಲಪಡಿಸುತ್ತದೆ.
2) ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅತ್ಯುತ್ತಮ ಆಸನವಾಗಿದೆ.
3) ಈ ಆಸನವು ಕಾಲು ಮತ್ತು ಸೊಂಟದ ನೋವನ್ನು ಕಡಿಮೆ ಮಾಡುತ್ತದೆ.
4) ಈ ಆಸನವು ನಿಮ್ಮ ಬೆನ್ನುಹುರಿಯನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ.

 

 

 

 

 

 

 

 

 

 

 

 

 

 

 

 

 

 

 

 

ಉತ್ಕಟಾಸನ

ಕುರ್ಚಿಯ ರೀತಿಯಲ್ಲಿ ಕೂರುವ ಈ ಭಂಗಿಗೆ ಉತ್ಕಟಾಸನವೆಂದು ಕರೆಯುತ್ತಾರೆ.

ಉತ್ಕಟಾಸನ ಮಾಡುವ ವಿಧಾನ:

ಮೊದಲು ತಾಡಾಸನದಲ್ಲಿ ಅಥವಾ ಸಮಸ್ಥಿತಿಯಲ್ಲಿ ನಿಂತುಕೊಳ್ಳಬೇಕು. ನಂತರ ಎರಡು ಕಾಲುಗಳನ್ನು ಜೋಡಿಸಬೇಕು ನಂತರ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ನಮಸ್ಕಾರ ಸ್ಥಿತಿಯಲ್ಲಿಡಬೇಕು, ನಂತರ ಎರಡು ಮೊಣಕಾಲುಗಳನ್ನು ಬೆಂಡ್ ಮಾಡಬೇಕು ಸೊಂಟದ ಭಾಗವನ್ನು ಕೆಳಕ್ಕೆ ತಳ್ಳಿ ನಂತರ ಉಸಿರಾಟದ ಕ್ರಿಯೆಯು ಸಹಜವಾಗಿರಬೇಕು, ಈ ಸ್ಥಿತಿಯಲ್ಲಿ 20 ಸೆಂಕೆಂಡ್ ಗಳ ಕಾಲ ಇದ್ದು ನಂತರ ಮೊದಲಿನ ಸ್ಥಿತಿಗೆ ಬನ್ನಿ.

ಪ್ರಯೋಜನಗಳು:

1) ಈ ಆಸನವು ಬೆನ್ನುಮೂಳೆ, ಸೊಂಟ ಮತ್ತು ಎದೆಯ ಸ್ನಾಯುಗಳಿಗೆ ಉತ್ತಮವಾದ ಆಸನವಾಗಿದೆ.
2) ಈ ಆಸನವು ಕೆಳ ಬೆನ್ನು ಮತ್ತು ಮುಂಡವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
3) ಈ ಆಸನವು ತೊಡೆ, ಪಾದ, ಕಾಲು ಮತ್ತು ಮೊಣಕಾಲಿನ ಸ್ನಾಯುಗಳನ್ನು ಟೋನ್ ಮಾಡುತ್ತದೆ.
4) ದೇಹವನ್ನು ಸಮತೋಲನಗೊಳಿಸುತ್ತದೆ, ಮತ್ತು ಮನಸ್ಸಿನಲ್ಲಿ ದೃಢತೆಯನ್ನು ತರುತ್ತದೆ.

ಚೈತ್ರಾ ಹಂಪಿನಕಟ್ಟಿ.

 

 

 

 

 

 

 

 

 

 

ಈ ಅಂಕಣದ ಹಿಂದಿನ ಬರಹಗಳು:
ಚಕ್ರಾಸನ ಮತ್ತು ಭುಜಂಗಾಸನ
ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ
ನಾವಾಸನ ಹಾಗೂ ಪರಿವೃತ್ತ ಉತ್ಕಟಾಸನ

ಅರ್ಧಮತ್ಸ್ಯೇಂದ್ರಾಸನ ಮತ್ತು ವೀರಾಸನ
ಅಧೋಮುಖ ಶ್ವಾನಾಸನ, ಸುಪ್ತ ವಜ್ರಾಸನ
ದಂಡಿಯಾಮ ಜಾನುಶಿರಾಸನ
ಪಾರ್ಶ್ವಕೋನಾಸನ ಮತ್ತು ವೃಕ್ಷಾಸನ
ಪಾದಹಸ್ತಾಸನ ಮತ್ತು ಶಶಾಂಕಾಸನ
ವಕ್ರಾಸನ ಮತ್ತು ಸೇತುಬಂಧಾಸನ
ಗೋಮುಖಾಸನ ಹಾಗೂ ವೀರಭದ್ರಾಸನ
ಯೋಗದ ವಿವಿಧ ಭಂಗಿಗಳು
ಯೋಗದ ವಿವಿಧ ‘ಆಸನಗಳು’
ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವ ಕಲೆ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...