ಗಿರೀಶ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ

Author : ಕೆ. ಮರುಳಸಿದ್ದಪ್ಪ

Pages 492

₹ 350.00




Year of Publication: 2010
Published by: ಡಿ.ಎನ್. ಲೋಕಪ್ಪ ಸಂವಹನ
Address: 12/1, ಸಂಜೆ ಬಜಾರ್‌ ಹಿಂಭಾಗ, ಶಿವರಾಮಪೇಟೆ, ಮೈಸೂರು

Synopsys

ಗಿರೀಶ ಕಾರ್ನಾಡರ ನಾಟಕಗಳು : ಕನ್ನಡದ ಪ್ರತಿಕ್ರಿಯೆ ಎಂಬ ಕೃತಿಯ ಶೀರ್ಷಿಕೆಯೇ ಸ್ಪಷ್ಟಪಡಿಸುತ್ತಿರುವಂತೆ ಕನ್ನಡ ವಿಮರ್ಶೆ ಹಾಗೂ ರಂಗಭೂಮಿಯ ಪ್ರತಿಕ್ರಿಯೆಯನ್ನು ದಾಖಲಿಸಿರುವುದೇ ಆಗಿದೆ. ಕಾರ್ನಾಡರ ನಾಟಕಗಳನ್ನು ಕುರಿತು ಕನ್ನಡದಲ್ಲಿ ಈವರೆಗೆ ಬಂದಿರುವ ಎಲ್ಲ ಸಾಹಿತ್ಯ ವಿಮರ್ಶೆ ಹಾಗೂ ರಂಗ ವಿಮರ್ಶೆಗಳನ್ನು ಒಳಗೊಳ್ಳುವ ಪ್ರಯತ್ನ ಇಲ್ಲಿಯ ಲೇಖನಗಳಲ್ಲಿ ಆಗಿದೆ. ಸಾಹಿತ್ಯ ವಿಮರ್ಶೆಗಳು ಹಾಗೂ ರಂಗ ವಿಮರ್ಶೆಗಳು ಇವೆ. ಈ ಕೃತಿಯನ್ನು ಕೆ. ಮರುಳಸಿದ್ದಪ್ಪ ಹಾಗೂ ಕೃಷ್ಣಮೂರ್ತಿ ಹನೂರು ಸಂಪಾದಿಸಿದ್ದಾರೆ.

About the Author

ಕೆ. ಮರುಳಸಿದ್ದಪ್ಪ
(12 January 1940)

ಡಾ. ಕೆ. ಮರುಳಸಿದ್ದಪ್ಪ ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ ಗ್ರಾಮದವರು. ತಂದೆ ಉಜ್ಜನಪ್ಪ, ತಾಯಿ ಕಾಳಮ್ಮ. ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ದ್ದರು. ಭಾರತೀಯ ಜಾನಪದ ಸಮೀಕ್ಷೆ, ಲಾವಣಿಗಳು, ಷಟ್ಟದಿ, ಜಾನಪದ ಸಾಹಿತ್ಯ ರಚನಕಾರರು, ಕನ್ನಡ ನಾಟಕ ಸಮೀಕ್ಷೆ, ನೋಟನಿಲುವು, ರಕ್ತಕಣಗೀತೆ ಅವರ ಪ್ರಕಟಿತ ಪುಸ್ತಕಗಳು. 'ಆಧುನಿಕ ಕನ್ನಡ ನಾಟಕ ವಿಮರ್ಶೆ' ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುವ ಅವರು  ಹಲವು ಇಂಗ್ಲೀಷ್ ನಾಟಕಗಳನ್ನು ಕನ್ನಡೀಕರಿಸಿದ್ದಾರೆ. ಕಿ.ರಂ. ನಾಗರಾಜ ಅವರ ಜೊತೆ ಸೇರಿ ’ವಚನ ಕಮ್ಮಟ’ ಸಂಪಾದಿಸಿದ್ದಾರೆ. ...

READ MORE

Related Books