ಹೈದ್ರಾಬಾದ ಕರ್ನಾಟಕ ಮಾಧ್ಯಮ

Author : ಶ್ರೀನಿವಾಸ್ ಸಿರನೂರಕರ್

Pages 182

₹ 100.00




Year of Publication: 2010
Published by: ಪಾವನ ಪ್ರಕಾಶನ
Address: ಪಾವನ ಪ್ರಕಾಶನ, # 38, ಘಾಟಗೆ ಲೇಜೌಟ್, ಎಂ.ಎಚ್.ಕೆ.ಮಿಲ್ ಹತ್ತಿರ ಗುಲಬರ್ಗಾ 585101

Synopsys

ಶ್ರೀನಿವಾಸ ಸಿರನೂರಕರ್ ಸಂವೇದನಾಶೀಲ ಪತ್ರಕರ್ತರು. ಇವರು ರಚಿಸಿದ ’ಹೈದ್ರಾಬಾದ ಕರ್ನಾಟಕ ಮಾಧ್ಯಮ’ ಕೃತಿ ಮಾಹಿತಿಪೂರ್ಣವಾದುದು. ಹೈದ್ರಾಬಾದ್-ಕರ್ನಾಟಕ ಮಾಧ್ಯಮದ ಹುಟ್ಟು, ಬೆಳವಣಿಗೆ, ಇತಿಹಾಸ ಮತ್ತು ಭವಿಷ್ಯದ ಬಗ್ಗೆ ಅಧ್ಯಯನ ನಡೆಸಿ, ಸಮೂಹ ಮಾಧ್ಯಮದ ಕುರಿತಾದ ರಚನೆಯನ್ನು ಒದಗಿಸಿ ಕೊಟ್ಟಿದ್ದಾರೆ. ಪುಸ್ತಕ ಸಮೂಹ ಮಾಧ್ಯಮದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಇತಿಹಾಸಕಾರರಿಗೆ ಪ್ರಮುಖ ಪರಾಮರ್ಶನ ಗ್ರಂಥವಾಗಿದೆ. 

ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಯ ಪತ್ರಿಕೋದ್ಯಮದ ಇತಿಹಾಸ, ಬೆಳವಣಿಗೆಗಳ ಬಗ್ಗೆ ವಿವರಿಸುತ್ತಾ ಮುದ್ರಣ ಮಾಧ್ಯಮದ ಹಿನ್ನೆಲೆಗಳ ಇತಿಹಾಸ, ಮತ್ತು ರೇಡಿಯೋ, ದೂರದರ್ಶನ ಕಾರ್ಯಕ್ರಮದ ಸ್ವರೂಪ, ಬೆಳವಣಿಗೆಗಳ ಬಗ್ಗೆ, ಗುಲಬರ್ಗಾದ ಸ್ಟುಡಿಯೊ ಸ್ಥಾಪನೆಯ ಬಗ್ಗೆಯೂ ತಿಳಿಸುತ್ತದೆ. ಆಯಾ ಪ್ರಾಂತ್ಯದಲ್ಲಿ ಪ್ರಕಟಗೊಂಡ ದಿನಪತ್ರಿಕೆ, ಮಾಸಪತ್ರಿಕೆ, ವಾರಪತ್ರಿಕೆ, ಇವುಗಳ ಸಂಕ್ಷಿಪ್ತ ಮಾಹಿತಿ ಪ್ರಸ್ತುತ ಕೃತಿಯಲ್ಲಿದೆ. 

ಹೈದ್ರಾಬಾದ್- ಕರ್ನಾಟಕ ಇತಿಹಾಸದ ಮಾಧ್ಯಮ ಕುರಿತಾದ ಒಳನೋಟಗಳು, ತುಡಿತಗಳು, ಕಾಳಜಿ, ಚಿಂತನೆಗಳು ಶ್ರೀನಿವಾಸ ನಿರನೂರಕರ್ ಅವರ ಅಧ್ಯಯನಶೀಲತೆಯಲ್ಲಿ ಕಾಣುವಂತದ್ದು.  ಮಾಧ್ಯಮದ ಇತಿಹಾಸದ ಚೌಕಟ್ಟು ಹೈದ್ರಾಬಾದ ಕರ್ನಾಟಕಕ್ಕೆ ಸೀಮಿತವಾಗಿದ್ದರೂ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿಷಯಗಳ ಕುರಿತಾಗಿಯೂ ಮಹತ್ವದ ಕೃತಿ ಎನ್ನಬಹುದು.  

About the Author

ಶ್ರೀನಿವಾಸ್ ಸಿರನೂರಕರ್

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಅವರು ಸದ್ಯ ಕಲಬುರಗಿ ನಿವಾಸಿ ಆಗಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸ ಅವರು ಸದ್ಯ ನಿವೃತ್ತರಾಗಿದ್ದಾರೆ. ಹಿಂದೂ ಕಾನೂನು ಗ್ರಂಥ ರಚಿಸಿದ ವಿಜ್ಞಾನೇಶ್ವರನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಅವರು ಆ ಕುರಿತು ಎರಡು ಪುಸ್ತಕ ಪ್ರಕಟಿಸಿದ್ದಾರೆ. ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಲೇಖನ ರಚಿಸಿದ್ದಾರೆ. ...

READ MORE

Related Books