ಸಂಪಾದನೆ

Author : ಹಂಪೇಶ್ ಕೆ.ಎಸ್.

Pages 224

₹ 160.00




Year of Publication: 2018
Published by: ಸ್ನೇಹ ಪ್ರಿಂಟರ್‍ಸ್‌
Address: ನಂ.16, 1ನೇ ಬಿ ಮುಖ್ಯರಸ್ತೆ, ಶ್ರೀರಾಘವೇಂದ್ರ ಮಠ ರಸ್ತೆ, ಪಾಪರೆಡ್ಡಿಪಾಳ್ಯ, 11ನೇ ಬ್ಲಾಕ್‌, ನಾಗರಭಾವಿ 2ನೇ ಹಂತ, ಬೆಂಗಳೂರು
Phone: 9845062549

Synopsys

ಮುದ್ರಣ ಮಾಧ್ಯಮವನ್ನು ಕೇಂದ್ರೀಕರಿಸಿ ಬರೆದಿರುವ ಈ ಕೃತಿಯಲ್ಲಿ ವೃತ್ತಪತ್ರಿಕೆಗಳ ಮಹತ್ವ, ಪತ್ರಿಕೆಯ ಸಂರಚನೆ, ಪತ್ರಿಕೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯ, ಸುದ್ದಿ ಸಂಪಾದನೆಯ ವ್ಯಾಖ್ಯಾನ, ಮಹತ್ವ ಮತ್ತು ಪ್ರಕ್ರಿಯೆ, ಭಾಷಾಂತರದ ಮಹತ್ವ ಮತ್ತು ತಂತ್ರಗಳು, ಮರುಬರಹದ ಅಗತ್ಯ, ಕರಡಚ್ಚು ತಿದ್ದುವ ಬಗೆ, ಬಳಸುವ ಸಂಕೇತಗಳು, ತಲೆಬರಹ ಬರೆಯುವ ವಿಧಾನ ಮತ್ತು ವಿಧಗಳು, ಸಂಪಾದಕೀಯದ ಮಹತ್ವ, ಪುಟ ವಿನ್ಯಾಸದ ತತ್ವಗಳು ಮತ್ತು ವಿಧಗಳು, ನಿಯತಕಾಲಿಕೆ ಮತ್ತು ಛಾಯಾಚಿತ್ರ ಸಂಪಾದನೆಯ ಮಹತ್ವ ಮತ್ತು ಪ್ರಕ್ರಿಯೆ, ವಿದ್ಯುನ್ಮಾನ ಸುದ್ದಿ ಸಂಪಾದನೆ, ಸಂಪಾದನೆಯಲ್ಲಿ ಬಳಸುವ ಕನ್ನಡ ತಂತ್ರಾಂಶಗಳು ಮುಂತಾದ ವಿಷಯಗಳನ್ನು ಚರ್ಚಿಸಿದ್ದಾರೆ. ಸಾಂಪ್ರದಾಯಿಕ ಸಂಪಾದನೆಯಿಂದ ಆರಂಭಿಸಿ, ಪ್ರಚಲಿತ ಸಂಪಾದನೆ ತನಕದ ಬದಲಾವಣೆಗಳನ್ನು ಗುರುತಿಸಿದ್ದಾರೆ.

About the Author

ಹಂಪೇಶ್ ಕೆ.ಎಸ್.

ಪತ್ರಿಕೆ ಹಾಗೂ ಜರ್ನಲ್‍ಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಡಾ. ಹಂಪೇಶ್ ಕೆ ಎಸ್ ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ವರ್ಷಗಳ ಬೋಧನಾ ಅನುಭವ ಹೊಂದಿರುವ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಕಲ್ಲಹಳ್ಳಿ ಇವರ ಹುಟ್ಟೂರು. ಪದವಿವರೆಗಿನ ವ್ಯಾಸಂಗವನ್ನು ಭದ್ರಾವತಿಯಲ್ಲಿ ಮುಗಿಸಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ನಂತರ ಪಿಹೆಚ್‍ಡಿ ಪಡೆದರು. ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಪತ್ರಿಕೋದ್ಯಮದ ವಿವಿಧ ಮಜಲುಗಳು, ಸಂಪಾದನೆ ...

READ MORE

Related Books