ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ

Date: 21-05-2023

Location: ಬೆಂಗಳೂರು


“ನಮ್ಮ ಮನೆಯಲ್ಲಿ ನನ್ನಿಂದ ನನ್ನ ಮಗ ಗಣಪತಿ ಮಾಡೋದು ಕಲಿತ. ಗಣಪತಿ ಹಬ್ಬ ಬರುವ ಮುನ್ನ ರಕ್ಷಾಬಂಧನದ ದಿನ ಗಣಪತಿಗಳಿಗೆ ಬಣ್ಣ ಮಾಡಲು ಪ್ರಾರಂಭಿಸುತ್ತೇವೆ. ಆ ಸಮಯದಲ್ಲಿ ಇಡೀ ಕುಟುಂಬ ಅಣ್ಣ, ಅತ್ತಿಗೆ, ಅಳಿಯಂದಿರು, ಸೊಸೆಯಂದಿರು ಬಣ್ಣ ಹಚ್ಚಿ ಸಂಭ್ರಮಿಸೋಕೆ ಅಂತಲೇ ಎಲ್ಲರೂ ಜೊತೆಯಾಗುತ್ತಾರೆ,” ಎನ್ನುತ್ತಾರೆ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ. ಅಂಕಣಗಾರ್ತಿ ಜ್ಯೋತಿ ಎಸ್. ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಮಕ್ಕಳ ನೆಚ್ಚಿನ ಶಿಕ್ಷಕ, ಅದ್ಭುತ ವಾಗ್ಮಿ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ’ ಅವರ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಹಿಂದಿನಿಂದ ಬೆಳೆದು ಬಂದ ನಮ್ಮ ಪೂರ್ವಜರ ಕಲೆ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ ಆಸಕ್ತಿ ಬಹುತೇಕರಿಗೆ ಇಲ್ಲವಾಗಿದೆ. ಹೊಟ್ಟೆಪಾಡಿಗಾಗಿಯೋ, ಬೇರೆ ವೃತ್ತಿ ಸಿಕ್ಕಿತೆಂದೋ, ಆಸಕ್ತಿ ಇಲ್ಲವೆಂದೋ ಹೀಗೆ ಕಾರಣಾಂತರಗಳಿಂದ ಇಂದು ಕಲಾಕುಟುಂಬಗಳು ಮರೆಯಾಗುತ್ತಿವೆ. ಕೌಟುಂಬಿಕ ಕಲೆಯನ್ನು ಬೆಳೆಸಿಕೊಂಡರೂ ಅದು ಬರೀ ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿದೆ. ಇಂಥ ಕಾಲದಲ್ಲಿ ತಮ್ಮ ಶಿಕ್ಷಕ ವೃತ್ತಿಯೊಂದಿಗೆ ತಮ್ಮ ಪೂರ್ವಜರ ಕಲೆಯನ್ನು ಸೇವೆಯಾಗಿಸಿಕೊಂಡಿರುವ, ಸಮಾಜಸೇವೆಯನ್ನು ಮಾಡಿಕೊಂಡಿರುವ ಒಬ್ಬ ವಿಶೇಷ ವ್ಯಕ್ತಿಯ ಪರಿಚಯ ಇಂದಿನ ನಿಮ್ಮ ಓದಿಗೆ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗುತ್ತಲ ಗ್ರಾಮದ ಚಿತ್ರಕಲಾವಿದರು, ಶಾಲಾ ಶಿಕ್ಷಕರು, ಸಮಾಜ ಸೇವಕರು, ಮಕ್ಕಳ ನೆಚ್ಚಿನ ಶಿಕ್ಷಕರು, ಅದ್ಭುತ ವಾಗ್ಮಿಯೂ ಆದಂತಹ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ ಸರ್ ಅವರ ಬದುಕಿನ ಪ್ರಯಾಣ ಅವರ ಮಾತುಗಳಲ್ಲಿ.

'ನಮ್ಮ ತಂದೆ ನಿಜಗುಣಯ್ಯ ಸ್ವಾಮಿ, ತಾಯಿ ದ್ರಾಕ್ಷಿಯಿಣಿ ದೇವಿ. ಆಗೆಲ್ಲ ಅಪ್ಪ ಗಣೇಶ ಮೂರ್ತಿ ಮಾಡೋದು, ತದ್ರೂಪು ಭಾವಚಿತ್ರಗಳನ್ನು ಮಾಡೋದು, ಮನೆಗೆ ಬಂದು ಹೋದವರ ತದ್ರೂಪನ್ನು ಮಣ್ಣಿನಿಂದ ಮಾಡುತ್ತಿದ್ದರು ಅವರ ವಿಶೇಷತೆ ಅದು. ಕೇವಲ ನೆನಪಿನ ಶಕ್ತಿಯಿಂದಲೇ ಬಹಳಷ್ಟು ಮೂರ್ತಿಗಳನ್ನು ಮಾಡಿದ್ದರು. ಬಂದವರೆಲ್ಲ ಅವರವರ ಮೂರ್ತಿಗಳನ್ನು ನೋಡಿ ನೋಡಿ ಖುಷಿಪಡುತ್ತಿದ್ದರು. ಕ್ಲೇ ಮಾಡೆಲ್ಲಿಂಗ್ ನಲ್ಲಿ ಪ್ರಖ್ಯಾತಿ ಪಡೆದಿದ್ದರು. ಯಾರಾದರೂ ತೀರಿಕೊಂಡರೆ ಅವರ ಮನೆಯವರು ನಮ್ಮ ತಂದೆ ಹತ್ತಿರ ಬಂದು ಮಣ್ಣಿನಿಂದ ಅವರ ಭಾವಚಿತ್ರವನ್ನು ಮಾಡಿಸಿಕೊಂಡು ಹೋಗುತ್ತಿದ್ದರು. ಮಣ್ಣಿನಿಂದ ಮಾಡಿಸಿಕೊಂಡು ಹೋದ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡುತ್ತಿದ್ದರು. ಹಾಗಾಗಿ ಅಪ್ಪ ಬಹಳ ಪ್ರಖ್ಯಾತಿ ಪಡೆದಿದ್ದರು. ಸುತ್ತಮುತ್ತ ಊರಿಗೆಲ್ಲ ಗಣೇಶ ಮೂರ್ತಿ ಮಾಡುವಲ್ಲಿ ನಮ್ಮ ಕುಟುಂಬ ಹೆಸರಾಗಿತ್ತು. ಅಪ್ಪ ಇದನ್ನೆಲ್ಲ ಮಾಡುವುದನ್ನು ನೋಡ್ತಾ ಬೆಳೆದ ನಾನು ನನಗೂ ಗಣಪತಿ ಮಾಡಬೇಕು ಅಂತ ಆಸೆ ಹುಟ್ಟಿತು. ನಾನು ಆಗೆಲ್ಲ ಅಪ್ಪ ನನಗೂ ಗಣೇಶ ಮೂರ್ತಿ ಮಾಡೋದನ್ನ ಹೇಳಿಕೊಡಿ ಅಂತ ಕೇಳ್ತಿದ್ದೆ. ಅದಕ್ಕವರು ಮಾಡುವುದನ್ನು ನೋಡ್ತಾ ಇರು ಅಂತ ಹೇಳಿದರು. ಕೈ, ಸೊಂಡಲಿ, ಹಾವು, ಇಲಿ ಹೀಗೆ ಸಣ್ಣ ಪುಟ್ಟದ್ದನ್ನು ಮಾಡ್ತಾ ಕಲಿತುಕೊಂಡೆ. ತಂದೆಯವರು ಒಂದು ನಿಯಮ ಮಾಡಿಕೊಂಡಿದ್ರು. ಮೊದಲಿಗೆ ಬಸವಜಯಂತಿ ದಿನ ಮಣ್ಣನ್ನು ಮೊದಲು ಪೂಜೆಮಾಡಿ ಕೆಲಸ ಪ್ರಾರಂಭಿಸುತ್ತಿದ್ದರು. ನಾನು ಅದೇ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದೆ. ನಾನು ಶಿಕ್ಷಕನಾಗಿದ್ದರಿಂದ ಶಾಲೆಗೆ ಹೋಗಬೇಕಿತ್ತು. ನಮ್ಮ ತಂದೆ ತೀರಿಕೊಂಡ ಮೇಲೆ ಯುಗಾದಿ ಪಾಡ್ಯದ ದಿನ ಮಣ್ಣನ್ನು ಪೂಜಿಸಿ ಕೆಲಸ ಪ್ರಾರಂಭಿಸುತ್ತಿದ್ದೆ. ಮೊದಲಿಗೆ ಒಂದು ಟ್ರ್ಯಾಕ್ಟರ್ ಕೆರೆ ಮಣ್ಣನ್ನು ತಂದು ಅದಕ್ಕೆ ನೀರು ಹಾಕಿ ಕಲಸಿ ಹದ ಮಾಡಿ ಪಾಡ್ಯದ ದಿನ ಮಣ್ಣು ಪೂಜೆ ಮಾಡಿ ಅದೇ ದಿನ ಮೊದಲ ಗಣಪತಿಯನ್ನು ಮಾಡುತ್ತೇನೆ. ಎರಡನೇ ದಿನವೂ ಖುಷಿ ಹೋಗಬಾರದು ಅಂತ ಎರಡನೇ ಗಣಪತಿಯನ್ನು ಎರಡನೇ ದಿನಕ್ಕೆ ಮಾಡುತ್ತಿದ್ದೆ. ಮೂರನೆಯ ದಿನ ಮಾಡಿದ್ರೆ ಮಾಡಬಹುದು. ಇಲ್ಲವಾದರೆ ಗಣಪತಿ ಹಬ್ಬ ಬರುವ ಹೊತ್ತಿಗೆ ಯಾವಾಗ ಬೇಕಾದರೂ ಮಾಡಬಹುದು. ನಮಗೆ ಸಮಯ ಸಿಕ್ಕಾಗ ಅನುಕೂಲವಾದಾಗ ಮಾಡುತ್ತಿದ್ದೆ. ಪ್ರತೀ ವರ್ಷ ಸುಮಾರು ನೂರಾ ಇಪ್ಪತ್ತು ಗಣಪತಿಗಳನ್ನು ಸ್ವತಃ ನಾನೇ ಕೈನಿಂದ ಮಾಡುತ್ತೇನೆ. ಯಾವ ಅಚ್ಚುನ್ನು ಬಳಕೆ ಮಾಡುವುದಿಲ್ಲ. ನಾನು ಶಾಲೆಗೆ ಹೋಗಿ ಬಂದು ಉಳಿದ ಸಮಯದಲ್ಲಿ, ಕೆಲವು ಸಲ ರಾತ್ರಿಯೆಲ್ಲಾ ಗಣಪತಿ ತಯಾರು ಮಾಡುತ್ತೇನೆ'.

'ನಮ್ಮ ಮನೆಯಲ್ಲಿ ನನ್ನಿಂದ ನನ್ನ ಮಗ ಗಣಪತಿ ಮಾಡೋದು ಕಲಿತ. ಗಣಪತಿ ಹಬ್ಬ ಬರುವ ಮುನ್ನ ರಕ್ಷಾಬಂಧನದ ದಿನ ಗಣಪತಿಗಳಿಗೆ ಬಣ್ಣ ಮಾಡಲು ಪ್ರಾರಂಭಿಸುತ್ತೇವೆ. ಆ ಸಮಯದಲ್ಲಿ ಇಡೀ ಕುಟುಂಬ ಅಣ್ಣ, ಅತ್ತಿಗೆ, ಅಳಿಯಂದಿರು, ಸೊಸೆಯಂದಿರು ಬಣ್ಣ ಹಚ್ಚಿ ಸಂಭ್ರಮಿಸೋಕೆ ಅಂತಲೇ ಎಲ್ಲರೂ ಜೊತೆಯಾಗುತ್ತಾರೆ. ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಮಟ್ಟದಲ್ಲಿ, ಹಲವಾರು ಸಂಘ ಸಂಸ್ಥೆಗಳು ಸಾಕಷ್ಟು ಬಹುಮಾನ ಮತ್ತು ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದ್ದಾರೆ. ನೂರಾರು ವರ್ಷಗಳಿಂದ ಅವರ ತಾತ, ಮುತ್ತಾತನ ಕಾಲದಿಂದಲೂ ಇವತ್ತಿಗೂ ನಮ್ಮ ಮನೆಯಿಂದಲೇ ಗಣಪತಿ ತೆಗೆದುಕೊಂಡು ಹೋಗುವವ ಪ್ರತೀತಿ ಬೆಳೆದುಕೊಂಡು ಬಂದಿದೆ. ಅವರು ಬೇರೆ ಎಲ್ಲೂ ಗಣಪತಿ ತೆಗೆದುಕೊಳ್ಳುವುದಿಲ್ಲ. ಮತ್ತೆ ನಾವಂತೂ ಯಾರನ್ನೂ ಹಣ ಕೇಳುವುದಿಲ್ಲ. ಅವರು ಕಾಣಿಕೆಯಾಗಿ ಕೊಟ್ಟಷ್ಟನ್ನೇ ತೆಗೆದುಕೊಳ್ಳುತ್ತೇವೆ. ಹೆಂಡತಿ ರಾಜಶ್ರೀ ಇಬ್ಬರು ಮಕ್ಕಳಾದ ಅಕ್ಷತಾ ಫ್ಯಾಷನ್ ಡಿಸೈನಿಂಗ್ ಮಗ ವಿದ್ಯಾಧರ ಸ್ವಾಮಿ ಇಂಜಿನಿಯರಿಂಗ್ ಮಾಡುತ್ತಿದ್ದಾರೆ. ವಂಶಪಾರಂಪರ್ಯವಾಗಿ ಪ್ರತೀವರ್ಷ ನಾವು ನಮ್ಮ ಕುಟುಂಬದ ಸದಸ್ಯರೆಲ್ಲರೂ ಕೂಡಿ ಗಣಪತಿ ಮೂರ್ತಿಗಳನ್ನು ಮಾಡುತ್ತ ಬಂದಿದ್ದೇವೆ. ವಿದ್ಯಾಭ್ಯಾಸಕ್ಕೆ ಚಿತ್ರಕಲೆ ಎನ್ನುವುದು ಬಹಳ ಪೂರಕವಾಗಿದೆ. ಓದಿನ ಜೊತೆಗೆ ಸಂಗೀತ, ನೃತ್ಯ, ಅಭಿನಯ, ಕರಕುಶಲತೆ, ಚಿತ್ರಕಲೆ, ಮಣ್ಣಿನ ಕಲೆ ಇತ್ಯಾದಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎನ್ನುತ್ತಾರೆ. ಎಷ್ಟೇ ಓದಿದರೂ ನಮ್ಮನ್ನು ನಾವು ಗುರುತಿಸಿಕೊಳ್ಳುವಲ್ಲಿ ಈ ಕಲೆಗಳು ಸಹಕಾರಿಯಾಗಿವೆ. ಗಣಿತ, ವಿಜ್ಞಾನ ಯಾವುದೇ ವಿಚಾರವಾದರೂ ಈ ಚಿತ್ರಕಲೆ ಸಹಾಯಕ್ಕೆ ಬರತ್ತೆ' ಎನ್ನುವುದು ಫಾಲಾಕ್ಷಸ್ವಾಮಿ ಗುರುಗಳ ಮಾತು.

ಐವತ್ತೊಂಭತ್ತು ವರ್ಷದ ಫಾಲಾಕ್ಷಸ್ವಾಮಿಯವರು ತಮ್ಮ ತಂದೆಯಿಂದ ಕಲಿತ ಕಲಾನೈಪುಣ್ಯತೆಯನ್ನು ತಮ್ಮ ಮಗನಿಗೆ ಕಲಿಸುವುದರ ಮೂಲಕ ವಂಶಪಾರಂಪರ್ಯವಾಗಿ ಬೆಳೆದು ಬಂದ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸಿದ್ದಾರೆ. ಹಾಗೇಯೇ ಇವರಿಗೆ ಸಮಾಜಸೇವೆಯನ್ನು ಮಾಡುವುದರಲ್ಲಿ ಖುಷಿಯಿದೆ. ಸಮಾಜಕ್ಕೆ ನನ್ನಿಂದಾಗುವ ಕೊಡುಗೆಯನ್ನು ಕೊಡಬೇಕು ಎನ್ನುವ ಮಹದಾಸೆಯನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಕನಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಾಲಾ ಫೀಸ್, ಯುನಿಫಾರ್ಮ್, ಪುಸ್ತಕಗಳನ್ನು ತನ್ನ ಸ್ವಂತ ಹಣದಿಂದ ಕೊಡಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಟ್ಟಿಸುವುದು ಮಾಡುತ್ತಾರೆ. ಗುರುಗಳಿಗೆ ದೇವರು ಆರೋಗ್ಯ, ನೆಮ್ಮದಿಯನ್ನು ಸಮಾಜಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ. ಇವರ ಸಮಾಜಸೇವೆಯಿಂದ ಹೆಚ್ಚಿನ ಅಶಕ್ತರಿಗೆ ಅನುಕೂಲವಾಗಲಿ‌ ಎಂದು ಆಶಿಸೋಣ.

ಧನ್ಯವಾದಗಳೊಂದಿಗೆ...
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...