ಬೆಳ್ಳಕ್ಕಿ ಹಿಂಡು

Author : ಶೋಭಾದೇವಿ ಚೆಕ್ಕಿ

Pages 148

₹ 50.00




Year of Publication: 2004
Published by: ಸಂಸ್ಕೃತಿ ಪ್ರಕಾಶನ
Address: ವಾಹಿನಿ ವಿಹಾರ, ಬಸವ ನಗರ, ಸೇಡಂ-585222
Phone: 9448039065

Synopsys

ಸಾಹಿತಿ ಶೋಭಾದೇವಿ ಚೆಕ್ಕಿ ಅವರು ಸಂಗ್ರಹಿಸಿದ ಸಾಂಪ್ರದಾಯಿಕ ಹಾಗೂ ಜಾನಪದೀಯ ಹಾಡುಗಳ ಸಂಗ್ರಹ ಕೃತಿ-ಬೆಳ್ಳಕ್ಕಿ ಹಿಂಡು. ಕೃತಿಗೆ ಮುನ್ನುಡಿ ಬರೆದ ಸಾಹಿತಿ ರಂಜಾನ್ ದರ್ಗಾ ‘ಮಹಿಳೆಯರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಜೀವನಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ಘಟ್ಟಗಳ ಹಾಡುಗಳನ್ನು ಸಂಗ್ರಹಿಸಿದ ಕವಯತ್ರಿಯರ ಕಳಕಳಿ ಪ್ರಶಂಸಾರ್ಹ’ ಎಂದು ಶ್ಲಾಘಿಸಿದ್ದಾರೆ. ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಹೈಟೆಕ್ ಯುಗದ ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪ್ರಪಂಚಕ್ಕೂ ದಾಳಿ ಇಡುತ್ತಿರುವ ಜಾಗತೀಕರಣದ ಕಪ್ಪ ಛಾಯೆಯಲ್ಲಿ ...ತಾಳ್ಮೆ ಮತ್ತು ಪರಿಶ್ರಮಗಳ ಮಿಶ್ರ ಪಾಕವಾಗಿ ಇಲ್ಲಿಯ ಕವಿತೆಗಳಿವೆ. ಇವು ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುತ್ತವೆ. ಸಾಂಪ್ರದಾಯಿಕ ಹಾಡುಗಳಲ್ಲೂ ಗುಣಾತ್ಮಕ ವಿಶೇಷತೆಗಳನ್ನು ಕವಯತ್ರಿ ಗುರುತಿಸಿದ್ದಾರೆ. ಸಮಾಜ ಕಳಕಳಿಯ ಸಾಂಪ್ರದಾಯಿಕ ಹಾಡುಗಳನ್ನು ಸಂಗ್ರಹಿಸಿದ್ದು ಕೃತಿಯ ವೈಶಿಷ್ಟ್ಯ’ ಎಂದು ಪ್ರಶಂಸಿಸಿದ್ದಾರೆ. ಜಾನಪದ ಹಾಗೂ ಸಾಂಪ್ರದಾಯಿಕ ಹಾಡುಗಳತ್ತ ಆಕರ್ಷಿತಳಾದ ತಮ್ಮಲ್ಲಿ ಸುಮಾರು 70 ಹಾಡುಗಳು ನೆನಪಿಗೆ ಬಂದಿದ್ದರೂ ಅವು ಪೂರ್ಣವಾಗಿ ಅಲ್ಲ; ಆದ್ದರಿಂದ, ಜನಪದೀಯ ಹಾಡುಗಾರರನ್ನು ಸಂಪರ್ಕಿಸಿ ಹಾಡುಗಳನ್ನು ಸಂಗ್ರಹಿಸಿದ್ದರ ಫಲವೇ ಈ ಕೃತಿ ಎಂದು ಸ್ವತಃ ಲೇಖಕಿ ಶೋಭಾದೇವಿ ಚೆಕ್ಕಿ ಹೇಳಿಕೊಂಡಿದ್ದಾರೆ.

About the Author

ಶೋಭಾದೇವಿ ಚೆಕ್ಕಿ
(07 February 1963)

ಲೇಖಕಿ ಪ್ರೊ. ಶೋಭಾದೇವಿ ಚೆಕ್ಕಿ ಅವರು ಮೂಲತಃ ಕಲಬುರಗಿಯವರು. ತಂದೆ: ಪ್ರೊ. ಬಸವಣ್ಣೆಪ್ಪ ಚೆಕ್ಕಿ, ತಾಯಿ ಪ್ರೊ. ಪಾರ್ವತಿ ಚೆಕ್ಕಿ.(ನಿವೃತ್ತ ದಂಪತಿ). ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ (ಸಮಾಜಶಾಸ್ತ್ರ) ವರೆಗೂ ಕಲಬುರಗಿಯಲ್ಲೇ ಶಿಕ್ಷಣ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವೀಧರರು.  ಪ್ರಸ್ತುತ, ಸೇಡಂನ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ. ಸೇಡಂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಶಾಂಭವಿ ಮಹಿಳಾ ಸಂಘದ ಅಧ್ಯಕ್ಷರು, ತಾಲೂಕು ಜಾನಪದ ಪರಿಷತ್ತು ಸೇಡಂನ ಸಮ್ಮೇಳನದ ಅಧ್ಯಕ್ಷರು, ರೋವರ್‍ಸ್ ಮತ್ತು ರೇಂಜರ್‍ಸ್ ಲೀಡರ್, ಇವರು ಸಮಾಜಶಾಸ್ತ್ರ ಕುರಿತು ಬರೆದ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಬಳ್ಳಾರಿಯ ಶ್ರೀಕೃಷ್ಣದೇವರಾಯ ...

READ MORE

Related Books