ಹೆಂತಾ ಚೆಂದಿತ್ತ ಹಿಂದುಸ್ತಾನ ಆಯ್ದ ಲಾವಣಿಗಳು

Author : ಬಿ.ಆರ್‌. ಪೊಲೀಸ್‌ ಪಾಟೀಲ

Pages 94

₹ 60.00




Published by: ವಾತ್ಸಲ್ಯ ಪ್ರಕಾಶನ

Synopsys

`ಹೆಂತಾ ಚೆಂದಿತ್ತ ಹಿಂದುಸ್ತಾನ ಆಯ್ದ ಲಾವಣಿಗಳು’ ಕೃತಿಯು ಬಿ.ಆರ್‌. ಪೊಲೀಸ್‌ ಪಾಟೀಲ ಸಂಪಾದಿತ ಜಾನಪದ ಲಾವಣಿಗಳ ಗ್ರಂಥವಾಗಿದೆ. ಈ ಕೃತಿಯು ಲಾವಣಿ ಶೈಲಿಯಲ್ಲಿ ಬರೆದಿರುವ ಗೀತೆಗಳನ್ನು ಒಳಗೊಂಡಿದ್ದು, `ಇವನ್ನು ಬೇಕಾದರೆ ಭಾವಗೀತಾತ್ಮಕ ಲಾವಣಿಗಳು ಎಂದು ಕರೆಯಿರಿ‘ ಎನ್ನುತ್ತಾರೆ ಕವಿ ಪೋಲೀಸ್ ಪಾಟೀಲ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಣದ ಶಿಬಿರಗಳಲ್ಲಿ ಭಾಗವಹಿಸಿದಾಗ ತಾವೇ ರಚಿಸಿ ಹಾಡಿದ 55 ಲಾವಣಿಗಳು ಈ ಸಂಕಲನದಲ್ಲಿವೆ.

About the Author

ಬಿ.ಆರ್‌. ಪೊಲೀಸ್‌ ಪಾಟೀಲ

ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್‌ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...

READ MORE

Related Books