ಜನಪದ ಗೀತೆಗಳು

Author : ಪ್ರಭಾ ಎನ್.

Pages 192

₹ 50.00




Year of Publication: 2013
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 26617100

Synopsys

ಲೇಖಕಿ ಎನ್. ಪ್ರಭಾ ಅವರ ‘ಜನಪದ ಗೀತೆಗಳು’ ಕೃತಿಯು ಹೆಸರೇ ಸೂಚಿಸುವಂತೆ ಜನಪದ ಗೀತೆಗಳ ಸಂಗ್ರಹವಾಗಿದೆ. ಕನ್ನಡದ ಸುಪ್ರಸಿದ್ದ ಜಾನಪದ ಗೀತೆಗಳೆಲ್ಲ ಒಂದೆಡೆ ಸಿಗುವ ಅಪರೂಪದ ಸಂಗ್ರಹ ಇದು. ಜಾನಪದ ಗಾಯಕರು ತಲೆಮಾರುಗಳಿಂದ ತಮ್ಮ ಸಂಸ್ಕೃತಿ ಕಂಠದಲ್ಲಿ ಉಳಿಸಿಕೊಂಡು ಬಂದ ಕನ್ನಡದ ಹಲವು ಬಗೆಯ ಮಟ್ಟುಗಳು ಜೀವಂತ ಧ್ವನಿಯಾಗಿ ಈ ಗೀತೆಗಲ್ಲಿ ಉಳಿಯುತ್ತ ಮೈ ಮನಗಳಿಗೆ ಮುದ ನೀಡುತ್ತವೆ. ದೈವಸ್ತುತಿ, ಸುಗ್ಗಿ, ಮದುವೆ, ಕೋಲಾಟ ಮೊದಲುಗೊಂಡ ಸಂತೋಷದ ರಸನಿಮಿಷಗಳನ್ನು ಕಣ್ಮುಂದೆ ಸುಳಿಸುವ ಗೀತೆಗಳೊಂದಿಗೆ, ದುಃಖದ ನೋವಿನ ಭಾವಸೆಳೆದ ಗೀತೆಗಳೂ ಇಲ್ಲಿವೆ. ಕನ್ನಡ ಜನಪದ ಸಂಸ್ಕೃತಿಯ ಗೀತಸಾಹಿತ್ಯವನ್ನು ತನ್ನೆಲ್ಲ ವೈವಿಧ್ಯತೆಯ ಲಯದೊಂದಿಗೆ ಓದಿನಲ್ಲಿಯೇ ಕಿವಿಗಳಲ್ಲಿ ಕೇಳಿಸುವ ಈ ಗೀತೆಗಳು ಜನಪದ ಗೀತೆಗಳ ಕಣಜವಾಗಿವೆ.

About the Author

ಪ್ರಭಾ ಎನ್.
(13 June 1968)

ಲೇಖಕಿ ಪ್ರಭಾ ಎನ್.  ಅವರು ಸಾಮಾಜಿಕ ಹೋರಾಟಗಾರ್ತಿ. ಭಾರತ ಜ್ಞಾನ ವಿಜ್ಞಾನ ಸಮಿತಿಯ ಮಹಿಳಾ ವಿಭಾಗವಾದ “ಸಮತಾ” ರಾಜ್ಯ ಸಂಚಾಲಕಿ. “ಜನಾರೋಗ್ಯ” ಮಾಸಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯೆ. 'ಜನಾರೋಗ್ಯ ಆಂದೋಲನ' ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯೆ, ಬಿಜಿವಿಎಸ್ ಸಂಸ್ಥೆಯ ತಿಂಗಳ ಮಾಸಿಕ “ಜ್ಞಾನ ವಿಜ್ಞಾನ ಮಿತ್ರ”ದ ಕಾರ್ಯನಿರತ ಸಂಪಾದಕಿ. ಜನಾರೋಗ್ಯ ಆಂದೋಲನ ಕರ್ನಾಟಕದ ರಾಜ್ಯ ಕೋರ್ ಸಮಿತಿ ಸದಸ್ಯೆ. “ಟೀಚರ್" ಮಾಸ ಪತ್ರಿಕೆಗೆ ನಿರಂತರ ಲೇಖನಗಳನ್ನು ಬರೆದಿದ್ಧಾರೆ.  ...

READ MORE

Related Books