ಜಾನಪದ ಕಥನ ಗೀತೆಗಳು

Author : ಕೆ.ಆರ್‌. ಕೃಷ್ಣಸ್ವಾಮಿ

Pages 533

₹ 19.00




Year of Publication: 1959
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113

Synopsys

ಜಾನಪದ ವಿದ್ವಾಂಸರಾಗಿದ್ದ ಕೆ ಆರ್‍ ಕೃಷ್ಣಸ್ವಾಮಿ ಅವರು ಸಂಪಾದಿಸಿ ಪ್ರಕಟಿಸಿದ ಬಹುದೊಡ್ಡ ಜನಪದ ಸಾಹಿತ್ಯ ಸಂಗ್ರಹ ಇದು. ಇಲ್ಲಿ ಸಂಗ್ರಹಿಸಲಾಗಿರುವ ಜನಪದ ಹಾಡುಗಳು ಬಲು ಪರಿಶ್ರಮಪಟ್ಟು ಸಂಪಾದಿಸಿದವುಗಳಾಗಿವೆ. ವಿದ್ವಾಂಸರಾದ ತೀ ನಂ ಶ್ರೀಕಂಠಯ್ಯನವರ ಮುನ್ನುಡಿ ಈ ಕೃತಿಗಿದೆ. ಅಂಬಿಗರ ಗಂಗ ಮತ್ತು ಇತರ ಹಾಡುಗಳು, ಉತ್ತರ ದೇವಿ ಮತ್ತು ಇತರ ಹಾಡುಗಳು, ಪಿರಿಯಾಪಟ್ಟಣದ ಕಾಳಗ ಮತ್ತು ಇತರ ಹಾಡುಗಳು, ಚೆನ್ನಿಗ ಜೋಗಯ್ಯ ಮತ್ತು ಇತರ ಹಾಡುಗಳು ಎಂಬ ನಾಲ್ಕು ವಿಭಾಗಗಳಲ್ಲಿ ಜಾನಪದ ಹಾಡುಗಳ ಸಂಗ್ರಹವಿದೆ ಈ ಕೃತಿಯಲ್ಲಿ.

About the Author

ಕೆ.ಆರ್‌. ಕೃಷ್ಣಸ್ವಾಮಿ
(16 October 1936)

ಕರಾಕೃ ಎಂದು ಜಾನಪದ -ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಇರುವ ಕೆ.ಆರ್. ಕ್ರಿಷ್ಣಸ್ವಾಮಿ ಮಂಡ್ಯ ಮೂಲದ ಕವಿ-ಲೇಖಕ-ವಿದ್ವಾಂಸ. ನಾಗಮಂಗಲದಲ್ಲಿ ಜನಿಸಿದಿ ಅವರು ಹಾಸನ, ಮಲೆನಾಡು, ಚಿತ್ರದುರ್ಗ, ದಾವಣಗೆರೆ ಹೀಗೆ ನಾಡಿನ ಹಲವು ಹಳ್ಳಿಗಳನ್ನು ಸುತ್ತಿ ಅನೇಕ ಬಗೆಯ ಜನಪದ ಗೀತೆಗಳನ್ನು ಸಂಗ್ರಹಿಸಿ ಕೊಟ್ಟವರು. ಹಿರಿಯ ಕಲಾವಿದ ಆರ್‌.ಎಸ್‌. ನಾಯ್ಡು ಅವರಿಗೆ ಚಿರಪರಿಚಿತರಾಗಿದ್ದ ಕರಾಕೃ ಅವರು ತಮ್ಮ ಜಾನಪದ ಸಂಗ್ರಹದ ಕೃತಿಗಳಿಗೆ ನಾಯ್ಡು ಅವರ ರೇಖಾಚಿತ್ರಗಳನ್ನು ಬಳಸಿಕೊಳ್ಳುತ್ತಿದ್ದರು. ಅವರ ಮನೆಯೇ ಒಂದು ವಸ್ತು ಸಂಗ್ರಹಾಲಯದಂತಿದೆ. ಅಪರೂಪದ ಕಲಾಕೃತಿಗಳು, ಹಸ್ತಪ್ರತಿಗಳು ಅವರ ಸಂಗ್ರಹದಲ್ಲಿವೆ.  ಕಾಳಿಂಗರಾಯ, ಜಾನಪದ ಕಥನ ಗೀತೆಗಳು, ಜಾನಪದ ಪ್ರೇಮಗೀತೆಗಳು, ಹೆಣ್ಣು ಕೊಟ್ಟೇವು ಅವರ ...

READ MORE

Related Books