ಕೋಲಾಟದ ಪದಗಳು

Author : ಬಸವರಾಜ ಮಲಶೆಟ್ಟಿ

Pages 114

₹ 2.00




Year of Publication: 1980
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು

Synopsys

ಸಾಹಿತಿ ಡಾ. ಬಸವರಾಜ ಮಲಶೆಟ್ಟಿ ಅವರು ಸಂಗ್ರಹಿಸಿದ ಕೋಲಾಟದ ಹಾಡುಗಳ ಕೃತಿ ಇದು. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಗ್ರಹಿಸಿದ ಕೋಲು ಪದಗಳ ಸಂಕಲನ. ಕೋಲು ಪದಗಳ ವೈಶಿಷ್ಟ್ಯವೆಂದರೆ-ಪಲ್ಲವಿ, ಅನುಪಲ್ಲವಿ, ಪ್ರಾಸ, ಲಯ ಎಲ್ಲವೂ ಹಾಡುಗಳಲ್ಲಿ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಕೋಲು ಕೊಡುವ ಕ್ರಿಯೆಗೆ ಹೊಂದಿಕೊಂಡು ಆಟಗಾರರಿಗೆ ಹುಮ್ಮಸ್ಸು ಬರಿಸುವುದರಿಂದಲೂ ಕೇಳುಗರಿಗೆ ಸಂತಸ ನೀಡುತ್ತವೆ. ದೈವ ಪ್ರಣಯ, ಹಾಸ್ಯ ವಿಡಂಬನೆಗಳು ಸೇರಿ 100ಕ್ಕೂ ಅಧಿಕ  ಹಾಡುಗಳು ಸೇರ್ಪಡೆಯಾಗಿವೆ. ಪ್ರಾದೇಶಿಕ ಭಾಷೆಯ ವೈಶಿಷ್ಟ್ಯ ಮತ್ತು ಕೋಲಾಟದ ಸಾಹಿತ್ಯಕ ಅಂಶಗಳನ್ನು ಅಧ್ಯಯನ ಮಾಡುವವರಿಗೆ ಈ ಕೃತಿ ತುಂಬಾ ಉಪಯುಕ್ತ ಎಂದು ಸಾಹಿತಿ ಹಂಪ ನಾಗರಾಜಯ್ಯ ಅವರು ಬರೆದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

About the Author

ಬಸವರಾಜ ಮಲಶೆಟ್ಟಿ
(10 August 1949 - 29 June 2014)

ಜಾನಪದ ತಜ್ಞರಾಗಿದ್ದ ಡಾ. ಬಸವರಾಜ ಮಲಶೆಟ್ಟಿ ಅವರು ಉತ್ತರ ಕರ್ನಾಟಕದ ಬಯಲಾಟಕ್ಕೆ ವಿಶಿಷ್ಟ ಸ್ಪರ್ಶ ನೀಡಿದವರು. ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಮಲಶೆಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡೊಳ್ಳಿಯವರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಅವರು ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು. ಬಸವರಾಜ ಮಲಶೆಟ್ಟಿಯವರು ಜನಿಸಿದ್ದ 1949ರ ಆಗಸ್ಟ್‌ 10ರಂದು ತಂದೆ ಮರಿಕಲ್ಲಪ್ಪ, ತಾಯಿ ನಾಗೇಂದ್ರವ್ವ. ಬಾಲ್ಯದ ದಿನಗಳಲ್ಲಿಯೇ ರಂಗಭೂಮಿಯ ಒಡನಾಟ ಆರಂಭವಾಯಿತು. ತಂದೆಯ ಜೊತೆಯಲ್ಲಿ ಆಟಕ್ಕೆ ಹೋಗುತ್ತಿದ್ದ ಬಸವರಾಜ ಅವರು ಬಯಲಾಟದಲ್ಲಿ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ...

READ MORE

Related Books