ನೂರು ಜನಪದ ಹಾಡುಗಳು

Author : ಬೈಲೂರು ಬಸವಲಿಂಗಯ್ಯ ಹಿರೇಮಠ

Pages 168

₹ 80.00




Year of Publication: 2010
Published by: ಭೂಷಣ ಪ್ರಕಾಶನ
Address: ಜನಪದ ಸಂಶೋಧನಾ ಕೇಂದ್ರ, ಸಪ್ತಾಪುರ, ಹಳಿಯಾಳ ರೋಡ್, ಧಾರವಾಡ-1
Phone: 9448314525

Synopsys

‘ನೂರು ಜನಪದ ಹಾಡುಗಳು’ ಬೈಲೂರು ಬಸವಲಿಂಗಯ್ಯ ಹಿರೇಮಠ ಅವರ ಕೃತಿ. ಜಾನಪದೀಯ ಕಾವ್ಯಗಳಾದ ಬೀಸುವ ಕಲ್ಲಿನ ಹಾಡುಗಳು, ಚೌಡಿಕಿ ಪದಗಳು, ಗೀಗೀ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು ಗ್ರಾಮೀಣ ಸಾಮಾಜಿಕ-ಸಾಂಸ್ಕೃತಿಕ-ವ್ಯಕ್ತಿಗತ ನಂಬುಗೆಯ -ಹಬ್ಬಬಹರಿದಿನಗಳ ಬದುಕನ್ನು ಕಟ್ಟಿಕೊಡುವ ಸಮೃದ್ಧ ಸಾಹಿತ್ಯದ ಕೃತಿ ಇದು. ವಿಜ್ಞಾನ-ತಂತ್ರಜ್ಞಾನದ ಇಂದಿನ ದಿನಮಾನದಲ್ಲಿ ಜನಪದೀಯ ಸಾಹಿತ್ಯದ ಯಾವುದೇ ಪ್ರಕಾರಗಳ ಸಂರಕ್ಷಣೆ-ಪ್ರೋತ್ಸಾಹದಂತಹ ಕಳಕಳಿಯು ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ, ‘ನೂರು ಜನಪದ ಹಾಡುಗಳು’ ಉತ್ತಮ ಸಂಗ್ರಹ ಕೃತಿಯಾಗಿದೆ.

 

About the Author

ಬೈಲೂರು ಬಸವಲಿಂಗಯ್ಯ ಹಿರೇಮಠ

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನವರು. ಜಾನಪದ ವಿಷಯದಲ್ಲಿ ಎಂ.ಎ. ಪದವೀಧರರು. 1983ರಲ್ಲಿ ನೀನಾಸಂ, ಜನಸ್ಪಂದನ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರವೇಶ ಪಡೆದರು. ಬಿ.ವಿ.ಕಾರಂತರೊಂದಿಗೆ ರಂಗಸಂಗೀತ ಕುರಿತು ಅಭ್ಯಾಸ ಮಾಡಿ, ಧಾರವಾಡದಲ್ಲಿ ಜಾನಪದ ಸಂಶೋಧನಾ ಕೇಂದ್ರ ಸ್ಥಾಪಿಸಿದರು. ಇವರ ರಚನೆಯ ಪರಿಷ್ಕೃತ ರಂಗರೂಪ-‘ಶ್ರೀಕೃಷ್ಣ ಪಾರಿಜಾತ’ ದೇಶದೆಲ್ಲೆಡೆ ಸಾವಿರಾರು ಪ್ರಯೋಗಗಳನ್ನು ಕಂಡಿದೆ. ನಟ, ಗಾಯಕ, ಸಂಗೀತ ನಿರ್ದೇಶನ ಹೀಗೆ ಹತ್ತು ಹಲವು ವಲಯದಲ್ಲಿ ಕೃಷಿ ಮಾಡಿದ್ದು, ದಾಸ, ಶರಣ, ತತ್ವಪದಗಳು, ಬಯಲಾಟ ಈ ಎಲ್ಲ ಪ್ರಕಾರದ ಸಾಹಿತ್ಯವನ್ನು ವಿದೇಶದಲ್ಲೂ ಪ್ರಚಾರ-ಪ್ರಸಾರ ಮಾಡಿದ ಕೀರ್ತಿ ಇವರಿಗಿದೆ. ಪತ್ತಾರ ಮಾಸ್ತರರ ...

READ MORE

Related Books