ನಮ್ಮ ಸುತ್ತಿನ ಜನಪದ ಕಥನಗೀತೆಗಳು

Author : ಜಯಲಕ್ಷ್ಮೀ ಸೀತಾಪುರ

Pages 160

₹ 30.00




Year of Publication: 1994
Published by: ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

Synopsys

‘ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಕಥನಗೀತೆಗಳು ಪ್ರಮುಖವಾದ ಆಕರ್ಷಣೆಯನ್ನು ಪಡೆದುಕೊಂಡಿವೆ. ಆದರೆ ಇವುಗಳ ಸಂಗ್ರಹಕಾರ್ಯ ಸಾಕಷ್ಟು ನಡೆಸಿದ್ದರೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ನಡೆದಿಲ್ಲ. ತ್ಯಾಗ ಬಲಿದಾನಗಳ ಮೂಲನಿಷ್ಠೆಗೆ ಒಳಗಾದ ಈ ಕಥನಗೀತೆಗಳಲ್ಲಿ ಹೆಣ್ಣು ಮಕ್ಕಳಲ್ಲಿ ಮೀಸಲಾದ ವಿಶೇಷ ಕಥಾನಕಗಳು ನಾಯಕಿ ಪ್ರಧಾನವಾದವು. ಶ್ರಮದ ಬದುಕನ್ನು ಸಾಗಿಸುವ ಹಳ್ಳಿಗಾಡಿನ ಸ್ತ್ರೀಯರು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹಾಡುವುದನ್ನು ಮೈಗೂಡಿಸಿಕೊಂಡು ಬಂದವರು. ಪ್ರಸ್ತುತ ಕೃತಿಯಲ್ಲಿ ಹಾಡ್ಗೀತೆಗಳು ಸ್ತ್ರೀಯರು ಮಾತ್ರವಲ್ಲದೇ ಪುರುಷರು ಹಾಡುತ್ತಾರೆ ಎಂಬುದಕ್ಕೆ ನಿದರ್ಶನವೂ ಇದೆ’ ಎನ್ನುತ್ತಾರೆ ಲೇಖಕಿ ಜಯಲಕ್ಷ್ಮಿ ಸೀತಾಪುರ. ಈ ಕೃತಿಯು ಜಾನಪದ ಹಾಡ್ಗೀತೆಗಳು, ಅದರ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದೆ.

About the Author

ಜಯಲಕ್ಷ್ಮೀ ಸೀತಾಪುರ
(23 September 1952)

ಕವಯತ್ರಿ ಜಯಲಕ್ಷ್ಮೀ ಸೀತಾಪುರ ಅವರು 1952 ಸೆಪ್ಟಂಬರ್ 23 ರಂದು ಜನಿಸಿದರು. ’ನೋ’ (ವಿಮರ್ಶೆ), ’ಐದು ಜಾನಪದ ಪ್ರಬಂಧಗಳು’, ಭಜನೆ ಹಾಡುಗಳು (ಜಾನಪದ), ’ಕುಸ್ತಿ ಕಲೆ’ (ವಯಸ್ಕರ ಶಿಕ್ಷಣ), ಒಗಟನ್ನು ಬಿಡಿಸಿ, ತಬ್ಬಿಬ್ಬು, ಬೆರಗು ಬೆಳಗು (ನಾಟಕ), ನಮ್ಮ ಸುತ್ತಿನ ಕಥನ ಗೀತೆಗಳು, ಎದೆಕದವ ತಟ್ಟಲೆ (ಕಾವ್ಯ), ಜನಪದ ಸಾಹಿತ್ಯದಲ್ಲಿ ಹಾಸ್ಯ, ಹಕ್ಕಿ ಹಾಲ್ಯಾವೆ ಗಿಡದಾಗೆ, ಜಾನಪದ ಹಬ್ಬ, ಲಾವಣಿ ತರಂಗ, ದಿಟ್ಟ ಸಾಧಕ (ಜೀವನ ಚರಿತ್ರೆ), ಜನಪದ ಒಕ್ಕಲು, ಒಗಟುಗಳು, ಶೋಧ, ಕನ್ನಡ ಜಾನಪದ, ಕನ್ನಡ ಸಮಗ್ರ ಗಾದೆಗಳು ಸಂ. 3 ಮತ್ತು 4, ಕನ್ನಡದಲ್ಲಿ ...

READ MORE

Related Books