ಸುವ್ವೆ...ಸುವ್ವೆ...ಸುವ್ವಾಲಿ.

Author : ಎ.ಎನ್. ಸಿದ್ದೇಶ್ವರಿ

Pages 96

₹ 100.00




Year of Publication: 2016
Published by: ಗಾಯತ್ರಿ ಪ್ರಕಾಶನ
Address: #193/1, 29ನೇ ವಾರ್ಡ್, ಚರ್ಚ್ ಹೌಸೆಸ್ ಹತ್ತಿರ, ಬಂಡಿಹಟ್ಟಿ, ಕೌಲ್ ಬಜಾರ್, ಬಳ್ಳಾರಿ. 
Phone: 9480208662

Synopsys

ಸಂಶೋಧಕಿ ಡಾ. ಎ.ಎನ್. ಸಿದ್ದೇಶ್ವರಿ ಅವರು ಬರೆದ ಕೃತಿ ಸುವ್ವೆ...ಸುವ್ವೆ...ಸುವ್ವಾಲಿ. ಅಕ್ಷರ ಅರಿಯದ ಅನುಭವದ ನೆಲೆಯಲ್ಲಿ ಬಂದಿರುವ ಜಾನಪದ ಹಾಡುಗಳು ಬೆಟ್ಟದಷ್ಟು.ಜನಪದರ ಜೀವನ ವಿಧಾನ , ಜೀವನ ಸಂಘರ್ಷ, ಪ್ರೀತಿ ಸಂತೋಷ ಮಾನವೀಯತೆಯನ್ನು ನೇರ ನಿಷ್ಠುರವಾಗಿ ಕಾವ್ಯಗಳ ಮೂಲಕ ವಿವರಿಸುವ ಜಾನಪದ ಹಾಡುಗಳು,ಜನಪದರಷ್ಟೇ ..ಜಾನಪದ ಹಾಡುಗಳನ್ನು ಹಿರಿಯರಿಂದ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ ಪ್ರಯತ್ನ‌ಇಲ್ಲಿಯದು.

ಬಳ್ಳಾರಿ ಜಿಲ್ಲೆಯ ಜಾನಪದ ಹಾಡುಗಾರ್ತಿಯರಿಂದ ಸಾಹಿತ್ಯ ಸಂಗ್ರಹಿಸಲಾಗಿದೆ.ಗಡಿ ಭಾಗದಲ್ಲಿ ಪ್ರಸಿದ್ಧಿ ಹೊಂದಿರುವ ಗೌರಮ್ಮನ ಪದಗಳು ಹಾಗೂ ಜೀವನ ವ್ರತದ ಆಚರಣೆಗಳ ಸಂಗ್ರಹಣೆ ಈ ಕೃತಿಯ ವಿಶೇಷವಾಗಿದೆ. ಜಾನಪದ ಹಾಡುಗಳು ಹಿನ್ನೆಲೆಯಲ್ಲಿ ಮಹಿಳಾ ಪಾತ್ರ , ಗೌರಮ್ಮನ ಪದಗಳು, .ಜೋಗುಳ ಪದಗಳು, ಮೈನೆರೆದ ಪದಗಳು, ಸೋಬಾನೆ ಪದಗಳು, ಬೀಸುವ ಪದಗಳು ಹಾಗೂ  .ಮಂಗಳಾರತಿ ಪದಗಳು ಒಳಗೊಂಡಿವೆ.

ಕೃತಿಯ ಬೆನ್ನುಡಿಯಲ್ಲಿ ಡಾ. ಎಸ್. ಮೋಹನ್ ಅವರು ‘ಸಾಂಪ್ರದಾಯಿಕ ಆಚರಣೆಗಳು ಜಾನಪದೀಯ ಮಹಿಳೆಯರ ಜೀವನದ ಭಾಗವೇ ಆಗಿದ್ದವು. ಅವುಗಳನ್ನು ಸಂಗ್ರಹಿಸಿ, ಪರಿಶೀಲಿಸಿ, ಸಂಪಾದಿಸಿದ್ದು, ಜಾನಪದೀಯ ಮಹಿಳೆಯರ ಅಪಾರ ಜ್ಞಾನಭಂಡಾರವನ್ನು ಈ ಕೃತಿ ಒಳಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ. 

 ಇಂದು ಆಧುನಿಕತೆ  ಪ್ರಭಾವದಿಂದ ಆಚರಣೆಗಳು ಸಂಪ್ರದಾಯಗಳು ಹಲವಾರು ರೀತಿಯಲ್ಲಿ ಸ್ಥಿತ್ಯಂತರಕ್ಕೆ ಒಳಪಟ್ಟಿವೆ. ಇಂದಿನ ಸಮಾಜದಲ್ಲಿ ಹೇಗೆ ಪ್ರತಿನಿಧಿಸುತ್ತದೆ ಎಂಬ ‌‌‌ಸತ್ಯ ತಿಳಿಯುವ ಉದ್ದೇಶ ಈ ಕೃತಿಯದ್ದು ಎಂದು ಲೇಖಕಿ ಹೇಳಿಕೊಂಡಿದ್ದಾರೆ.

 

About the Author

ಎ.ಎನ್. ಸಿದ್ದೇಶ್ವರಿ
(01 June 1970)

ಡಾ. ಎ.ನ್. ಸಿದ್ದೇಶ್ವರಿ ಅವರು ಜಾನಪದ ಸಾಹಿತ್ಯ ಸಂಶೋಧಕರು. ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕ ಅಧ್ಯಕ್ಷರು. ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಅಧ್ಯಾಪಕರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ‘ ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು’  ಎಂಬ ‌‌‌ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.  ಪ್ರಕಟಿತ ಕೃತಿಗಳು: ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು ಸುವ್ವೆ ..ಸುವ್ವೆ..ಸುವ್ವಾಲಿ, ಜಾನಪದ ‌‌‌‌‌‌‌‌‌‌ಹೂಬನ, ಬಾಳೆ(ಸಂಶೋಧನಾ ಪ್ರಬಂಧಗಳು)  ನಮ್ಮೂರು ಅಮಕುಂದಿ(ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಪ್ರಕಟಿಸಿದೆ). ಕನ್ನಡ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಹಾಗೂ‌ ಜಾನಪದ ವಿಶ್ವವಿದ್ಯಾಲಯದಲ್ಲಿ 15 ಲೇಖನಗಳು ಪ್ರಕಟವಾಗಿವೆ. ಉಪನ್ಯಾಸ, ಕಾರ್ಯಕ್ರಮ ನಿರೂಪಣೆ ಹಾಗೂ ಸಂಯೋಜನೆ, ಜಾನಪದ ಸಂಶೋಧನೆ ಸಂಪಾದನೆ ಸಂಗ್ರಹಣೆ ಇತ್ಯಾದಿ ಇವರ ಹವ್ಯಾಸಗಳು. ...

READ MORE

Related Books