ಸುಂದರವಾಗಿ ಓಲಗ ನುಡಿಸುವ ಸಹೋದರಿಯರ ಕಥನವಿದು

Date: 15-10-2023

Location: ಬೆಂಗಳೂರು


''ಹೆಣ್ಣಾದರೇನು ಗಂಡಾದರೇನು ಸಾಧಿಸುವ ಛಲ, ತುಂಬು ಆತ್ಮವಿಶ್ವಾಸ, ಕಲಿಯುವ ಮನಸ್ಸು, ಆಸಕ್ತಿ, ಉತ್ಸಾಹ, ಸತತ ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯ ಅನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ಈ ಅಕ್ಕ ತಂಗಿಯರು. ಸಮಾಜದ ವಿರೋಧಾಭಾಸಗಳನ್ನ ಮೀರಿ ಸುಂದರವಾಗಿ ಓಲಗ ನುಡಿಸುವುದನ್ನು ಕಲಿತ ಸಹೋದರಿಯರ ಕುರಿತ ಕಥನ ಅಂಕಣಗಾರ್ತಿ ಜ್ಯೋತಿ ಎಸ್. ಅವರ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ.

ಯಾವುದೇ ಕಲೆ, ವಿದ್ಯೆ ಕಲಿಯುವಲ್ಲಿ ಇದು ಗಂಡಿಗೆ ಇದು ಹೆಣ್ಣಿಗೆ ಅಂತ ಇರುವುದಿಲ್ಲ. ಸಮಾಜವೇ ಇದು ಗಂಡಿಗೆ ಇದು ಹೆಣ್ಣಿಗೆ ಅಂತ ಕಲಾಪ್ರಕಾರಗಳಲ್ಲಿ ಭೇದಮಾಡಿದೆ. ಆದರೆ ಏನನ್ನಾದರೂ ಕಲಿಯಲು ಯಾವ ಕ್ಷೇತ್ರದಲ್ಲಾದರೂ ಗೆಲ್ಲಲು ಹೆಣ್ಣಾದರೇನು ಗಂಡಾದರೇನು ಸಾಧಿಸುವ ಛಲ, ತುಂಬು ಆತ್ಮವಿಶ್ವಾಸ, ಕಲಿಯುವ ಮನಸ್ಸು, ಆಸಕ್ತಿ, ಉತ್ಸಾಹ, ಸತತ ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯ ಅನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ಈ ಅಕ್ಕ ತಂಗಿಯರು. ಇವರು ಸ್ಯಾಕ್ಸೋಫೋನ್ ನಲ್ಲಿ ಸುನಾದದ ಅಲೆ ಎಬ್ಬಿಸಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುವ ಸೃಜನಶೀಲ ಕಲೆಯುಳ್ಳವರು. ಸಮಾಜದ ವಿರೋಧಾಭಾಸಗಳನ್ನ ಮೀರಿ ಸುಂದರವಾಗಿ ಓಲಗ ನುಡಿಸುವುದನ್ನು ಕಲಿತ ಸಹೋದರಿಯರ ಕುರಿತ ಕಥನವಿದು.

ಹೆಣ್ಣು ಮಕ್ಕಳು ಸ್ಯಾಕ್ಸೋಫೋನ್ (ಓಲಗ) ನುಡಿಸಬಾರದು, ಕಲಿಯಬಾರದು ಅಂತ ಹೇಳಿದ ಸಾಕಷ್ಟು ಮಂದಿಗೆ ಹಠ ಬಿಡದೇ ಕಲಿಸಿ ಆಂಧ್ರಪ್ರದೇಶ, ಕರ್ನಾಟಕ ಅಲ್ಲದೆಯೂ ಇತರ ರಾಜ್ಯಗಳಲ್ಲಿ ಮದುವೆ, ಇತರೆ ಶುಭ ಸಮಾರಂಭಗಳಲ್ಲಿ ಹಾಡಿ ಜನ ಮನ್ನಣೆ ಗಳಿಸಲು ಬೆನ್ನೆಲುಬಾಗಿ ನಿಂತವರು ಅಪ್ಪ.

ವೆಂಕಟೇಶಪ್ಪ ಹಾಗೂ ಪುಷ್ಪಲತಾ ದಂಪತಿಗೆ ಮೂರು ಜನರು ಹೆಣ್ಣು ಮಕ್ಕಳಿದ್ದು ತಂದೆ ಕಟಿಂಗ್ ಶಾಪ್ ನಲ್ಲಿ ಕೆಲಸ, ಅಮ್ಮ ಮನೆ ಕೆಲಸದ ಜೊತೆಗೆ ಟೈಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದವರು. ತಂದೆ ವೆಂಕಟೇಶಪ್ಪನವರಿಗೆ ಓಲಗ ನುಡಿಸುವ ಹವ್ಯಾಸ ಅವರ ತಂದೆಯಿಂದ ಬಳುವಳಿಯಾಗಿ ಬಂದಿದ್ದು, ಇದನ್ನು ತನ್ನ ಹೆಣ್ಣು ಮಕ್ಕಳಿಗೂ ಶಾಸ್ತ್ರಬದ್ಧವಾಗಿ ಕಲಿಸುವ ಪ್ರಬಲವಾದ ಆಸೆ ಅವರಿಗಿತ್ತು. ಇದಕ್ಕಾಗಿ ತುಂಬಾ ಗುರುಗಳನ್ನು ವಿಚಾರಿಸಿದಾಗ, ಇದಕ್ಕೆಲ್ಲ ಅವಕಾಶ ಸಿಗೋದು ಕಷ್ಟ ಹೆಣ್ಣು ಮಕ್ಕಳು ಇಂಥದ್ದೆಲ್ಲ ಕಲಿಯಬಾರದು ಅಂತ ಅವರು ಹೇಳಿದರೂ ಕೂಡ ಓಲಗ ನುಡಿಸುವುದನ್ನು ಕಲಿಸಲೇಬೇಕು ಅನ್ನುವ ಹಂಬಲ ವೆಂಕಟೇಶಪ್ಪನವರಿಗೆ ದಿನೇ ದಿನೇ ಹೆಚ್ಚುತ್ತಲೇ ಇತ್ತು. ಇದಕ್ಕಾಗಿ ಗುರುವಿನ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಸ್ಯಾಕ್ಸೋಫೋನ್ ವಿದ್ವಾಂಸರಾದ 'ವಿದ್ವಾನ್ ಶ್ರೀ ಚಿನ್ನಸ್ವಾಮಿ ಕಟ್ಟಿಗೇನಹಳ್ಳಿ'. ಕಲಿಯಲು ಹೋಗುವ ಊರಿಗೆ ಬಸ್ ವ್ಯವಸ್ಥೆ ಇಲ್ಲದಿದ್ದರೂ ತಂದೆ ವೆಂಕಟೇಶಪ್ಪನವರು ತಮ್ಮ ಮಕ್ಕಳಾದ ಅನುಶ್ರೀ ವಿ. ಹಾಗೂ ಸಿಂಧು ವಿ. ಅವರನ್ನು ತಮ್ಮ ಸ್ಕೂಟರಿನಲ್ಲಿ ಕರೆದುಕೊಂಡು ಹೋಗಿ ಮಕ್ಕಳ ತರಬೇತಿ ಮುಗಿಯುವವರೆಗೆ ಅಂದರೆ ಮೂರು ಗಂಟೆಗಳ ಕಾಲ ಕಾದಿದ್ದು ಮನೆಗೆ ಕರೆದುಕೊಂಡು ಬರುತ್ತಿದ್ದರು. ಅನು ಶ್ರೀ ಹಾಗೂ ಸಿಂಧು ಶ್ರೀಯವರು ಕರ್ನಾಟಕ ಸಂಗೀತ ಅಭ್ಯಾಸವನ್ನು ಏಳು ವರ್ಷಗಳಿಂದ 'ಶ್ರೀನಿವಾಸ ಮೂರ್ತಿ ಹಾಗೂ ಕೋದಂಡರಾಮ' ಎಂಬ ಗುರುಗಳ ಬಳಿ ಅಭ್ಯಾಸ ಮಾಡುತ್ತಿದ್ದು ದೇವರ ನಾಮ, ಕೀರ್ತನೆಗಳು, ವರ್ಣ ಇತ್ಯಾದಿಯಾಗಿ ಕಲಿಯುತ್ತಿದ್ದಾರೆ. ಈಗ "ಸ್ಯಾಕ್ಸೋಫೋನ್ ನಲ್ಲಿಯೂ ತಮ್ಮ ಬೆರಳು ಮತ್ತು ಉಸಿರಿನ ಸಹಾಯದಿಂದ ಕೀರ್ತನೆ, ದೇವರನಾಮಗಳನ್ನು ನುಡಿಸಿ ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಈ ಸಹೋದರಿಯರು ವಿದ್ಯಾಭ್ಯಾಸದಲ್ಲಿಯೂ ಕೂಡ ಮುಂದಿದ್ದು, ಭರತನಾಟ್ಯ ಕಲಾವಿದರೂ ಹೌದು. ಸಂಗೀತ ಮತ್ತು ಸ್ಯಾಕ್ಸೋಫೋನ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಸಂಗೀತದಲ್ಲಿಯೇ Ph.D. ಮಾಡಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾರೆ. ಸಿಂಧುಶ್ರೀ ಎರಡನೇ ವರ್ಷದ ಪದವಿ ಓದುತ್ತಿದ್ದಾರೆ ಹಾಗೂ ಅನುಶ್ರೀ ಬಿಬಿಎ ಪದವಿ ಮುಗಿಸಿದ್ದು ಕಲೆಯಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಮಟ್ಟದ ಸಾಧನೆ ಮಾಡಲು ತಂದೆ ತಾಯಿಯ ಸಂಪೂರ್ಣ ಬೆಂಬಲವಿದೆ ಹಾಗೂ ಮಕ್ಕಳ ಈ ಸಾಧನೆಯ ಬಗ್ಗೆ ಅವರು ತುಂಬ ಗೌರವ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.

ನಮ್ಮ ಸುತ್ತಲೂ ಕೂಡ ಕೆಲವರಿಗೆ ಒಳ್ಳೆಯ ಹವ್ಯಾಸಗಳಿರುತ್ತವೆ. ಆದರೆ ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವವರು ಕಡಿಮೆ. ಬರೀ ಓದು ಅಥವ ಇನ್ನಾವುದರಲ್ಲೇ ಬಲವಂತವಾಗಿ ತೊಡಗಿಸುವ ಬದಲು ಅವರವರ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿ ಅಗತ್ಯ ಸಹಕಾರ ನೀಡಿ ಮುಂದುವರೆಸಿದರೆ ಒಳ್ಳೆಯ ಪ್ರತಿಭೆಗಳಾಗಿ ಉತ್ತಮ ಜೀವನ ಕಟ್ಟಿಕೊಳ್ಳುತ್ತಾರೆ. ಎಲೆಮರೆ ಕಾಯಿಯಂತಿರುವ ಈ ಓಲಗ ಸಹೋದರಿಯರ ಭವಿಷ್ಯ ಉಜ್ವಲವಾಗಲಿ, ಇವರ ಕಲೆ ಪ್ರಸಿದ್ಧಿ ಪಡೆಯಲಿ, ಉನ್ನತ ಮಟ್ಟದ ಸಾಧನೆ ಮಾಡುವಂತಾಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

ಧನ್ಯವಾದಗಳೊಂದಿಗೆ....
ನಿರೂಪಣೆ : ಜ್ಯೋತಿ. ಎಸ್


ಈ ಅಂಕಣದ ಹಿಂದಿನ ಬರಹಗಳು:
ಅಥ್ಲೆಟಿಕ್ ನಲ್ಲಿ ಸಾಧನೆ ಗೈಯುತ್ತಿರುವ ಹೆಮ್ಮೆಯ ಕನ್ನಡತಿ 'ಮಹಾಲಕ್ಷ್ಮಿ'

ನಾನು ದುಡ್ಡಿಗೋಸ್ಕರ ಹಾವು ಹಿಡಿಯುತ್ತಿಲ್ಲ: ಉರಗ ರಕ್ಷಕ ನವೀನ್
ರವಿ ನವಲಹಳ್ಳಿ ಅವರ ಅಂಬೇಡ್ಕರ್ ಅರಿವಿನ ಶಾಲೆ
ಬದುಕಿನ ಪರೀಕ್ಷೆಯಲ್ಲಿ ಎಲ್ಲರ ಮನಗೆದ್ದ ಚಿದಾನಂದ
ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳ ಜೀವನ ರೂಪಿಸುವಲ್ಲಿ ಸದಾ ತುಡಿದ ಜೀವ ಎಂ. ಆರ್. ಕಮಲ

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
ವಿಶೇಷ ಚೇತನರೆಂದರೆ ಸೆಣಸಾಟಗಳೊಂದಿಗೆ ಕನಸುಗಳನ್ನು ಕಟ್ಟುವವರು
ಚುಕ್ಕಿಯಿಟ್ಟು ಚಿತ್ರ ಬರೆಯುವ ಮಾಂತ್ರಿಕ..
ಕಥೆಯಲ್ಲ, ಬದುಕಿನ ವ್ಯಥೆ ಇದು...
ಅಬ್ದುಲ್ ಅವರ ಬದುಕಿನ ಏಳುಬೀಳು
ಹಾಡನ್ನೇ ಬದುಕಾಗಿಸಿದ ದಂಪತಿ ತಂಬೂರಿ ಜವರಯ್ಯ ಮತ್ತು ಬೋರಮ್ಮ
ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ

ಕಾಡುಜನರ, ಬುಡಕಟ್ಚು ಸಮುದಾಯಗಳ ಏಳಿಗೆಯ ವಿನೂತನ ‘ವನಚೇತನ’
ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ

ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
ಸಬ್ ಇನ್ಸ್ಪೆಕ್ಟರ್ ಸೋಮಶಂಕರ್ ಜೀವನಯಾನ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ ವಿನೋದ್ ಕುಮಾರ್ ವಿ.ಕೆ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...